ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜರ್ದಾರಿ ಪಾಕಿಸ್ತಾನದ ನೂತನ ಅಧ್ಯಕ್ಷ

By Staff
|
Google Oneindia Kannada News

ಇಸ್ಲಾಮಾಬಾದ್, ಸೆ. 7 : ಪಾಕಿಸ್ತಾನದ ನೂತನ ಅಧ್ಯಕ್ಷರಾಗಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಮುಖ್ಯಸ್ಥ ಆಸೀಫ್ ಅಲಿ ಜರ್ದಾರಿ(53) ಆಯ್ಕೆಯಾಗಿದ್ದಾರೆ. ಸಂಸತ್ತಿನ ಉಭಯ ಸದನದಲ್ಲಿ 436 ಮತಗಳು ಚಲಾವಣೆಯಾಗಿದ್ದು, ಜರ್ದಾರಿ 281 ಮತಗಳನ್ನು ಗಳಿಸಿ 13ನೇ ಅಧ್ಯಕ್ಷ ಪಟ್ಟವನ್ನು ಅಲಂಕರಿಸಿದ್ದಾರೆ.

ಅಧ್ಯಕ್ಷ ಸ್ಥಾನ ಶನಿವಾರ ನಡೆದ ಚುನಾವಣೆಯಲ್ಲಿ ಜರ್ದಾರಿ ತಮ್ಮ ಸಮೀಪದ ಪ್ರತಿಸ್ಪರ್ಧಿಗಳಾದ ಪಿಎಂಎಲ್-ಎನ್ ಪಕ್ಷದ ಅಭ್ಯರ್ಥಿ ಸಯ್ಯದ್-ಉಜ್- ರಹೆಮಾನ್ ಹಾಗೂ ಪಿಎಂಎಲ್-ಕ್ಯೂ ಅಭ್ಯರ್ಥಿ ಮುಷಾಹಿದ್ ಹುಸೇನ್ ಸಯ್ಯದ್ ಅವರನ್ನು ಹಿಮ್ಮೆಟ್ಟಿಸಿ ಭಾರಿ ಜಯ ಸಾಧಿಸಿದ್ದಾರೆ. ಸಂಸತ್ ನ ಸೆನೆಟ್ ಹಾಗೂ ಬಲೂಚಿಸ್ತಾನ, ಪೇಷಾವರ (ವಾಯುವ್ಯ), ಪಂಜಾಬ್ ಮತ್ತು ಸಿಂಧ್ ನ ನಾಲ್ಕು ಪ್ರಾಂತೀಯ ಶಾಸನಸಭೆಗಳ ಪ್ರತಿನಿಧಿಗಳೂ ಸೇರಿದಂತೆ ಒಟ್ಟು 702 ಮತದಾರರು ಚುನಾವಣೆಯಲ್ಲಿ ತಮ್ಮ ಮತ ಚಲಾಯಿಸಿದರು. ಇದರಲ್ಲಿ 436, ಪಿಎಂಎಲ್-ಎನ್ 111, ಪಿಎಂಎಲ್-ಕ್ಯೂ ಅಭ್ಯರ್ಥಿ 34 ಮತಗಳನ್ನು ಪಡೆದರು. ಇತರೆ ಮತಗಳನ್ನು ಹಂಚಿಕೊಂಡಿದ್ದಾರೆ. 10 ಮತಗಳು ಕುಲಗಟ್ಟಿವೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಕಳೆದ ತಿಂಗಳು ಆಗಸ್ಟ್ 18 ರಂದು ಜನರಲ್ ಪರ್ವೇಜ್ ಮುಷರಫ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಶನಿವಾರ ಈ ಚುನಾವಣೆಯಲ್ಲಿ ಜರುಗಿತು.

(ದಟ್ಸ್ ಕನ್ನಡ ವಾರ್ತೆ)

ಕೈಕೊಟ್ಟ ನವಾಜ್; ಅತಂತ್ರವಾದ ಪಾಕ್ ಸರ್ಕಾರ
ಪಾಕಿಸ್ತಾನದ ಸರ್ವಾಧಿಕಾರಿ ಮುಷರಫ್ ರಾಜೀನಾಮೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X