ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ಖಜಾನೆ ಭರ್ತಿಯಾಗಿದೆ: ಯಡಿಯೂರಪ್ಪ

By Staff
|
Google Oneindia Kannada News

ಬೆಂಗಳೂರು, ಸೆ. 7 : ಬಜೆಟ್ ನಲ್ಲಿ ಪ್ರಸ್ತಾಪಿಸಿರುವ ಅಭಿವೃದ್ಧಿ ಕಾರ್ಯಗಳಿಗೆ ಮಾತ್ರವೇ ಹಣವಿದೆ. ಹೊಸ ಕಾರ್ಯಕ್ರಮಗಳಿಗೆ ಹಣವಿಲ್ಲ, ಖಜಾನೆಯಲ್ಲಿ ಸಾಕಷ್ಟು ಹಣವಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶನಿವಾರ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.

ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾವು ಹೇಳಿದ ಮಾತನ್ನು ಸರಿಯಾಗಿ ಅರ್ಥೈಸಿಲ್ಲ ಎಂದು ಅವರು ಹೇಳಿದರು. ಜನರಿಗೆ ಪ್ರಯೋಜನವಾಗುವ ಕೆಲಸಕ್ಕೆ ಮಾತ್ರ ಹಣ ಮೀಲಿಟಿದ್ದೇನೆ ಎಂದರು. ರಾಜ್ಯದ ಹಣಕಾಸು ನಿರ್ವಹಣೆ ಬಹಳ ಚೆನ್ನಾಗಿದೆ. ಸಂಪನ್ಮೂಲ ಸಂಗ್ರಹ ಉತ್ತಮ ಸ್ಥಿತಿಯಲ್ಲಿದೆ. ಬಜಟ್ ನಲ್ಲಿ ತೋರಿಸಿದ ಕಾರ್ಯಕ್ರಮಕ್ಕೆ ಹಣದ ಕೊರತೆಯಿಲ್ಲ. ಈ ಎಲ್ಲಾ ಅಂಕಿ ಅಂಶಗಳನ್ನು ಇದೇ 9 ರಂದು ಬಹಿರಂಗಪಡಿಸುತ್ತೇನೆ ಎಂದು ಹೇಳಿದರು.

ಸಾವಿರ ಕೋಟಿ ರುಪಾಯಿ ಬಿಲ್ ಗಳು ಬಾಕಿಯಿವೆ ಎನ್ನುವ ಆರೋಪಕ್ಕೆ ಉತ್ತರಿಸಿದ ಅವರು, ಅವರವರ ಕಾಲದಲ್ಲಿ ಎಷ್ಟು ಎಷ್ಟು ಬಾಕಿಯಿತ್ತು ಎನ್ನುವುದನ್ನು ಹೇಳುತ್ತೇನೆ. ಕಾಮಾಲೆ ಕಣ್ಣಿಗೆ ಎಲ್ಲಾ ಅಂಶಗಳನ್ನು ಹಳದಿಯಾಗೇ ಕಾಣುತ್ತದೆ. ಇದನ್ನು ಶ್ವೇತಪತ್ರವೆಂದಾದರೂ ತಿಳಿದುಕೊಳ್ಳಲಿ ಎಂದರು. ನೂರು ದಿನ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಸಾಧನೆ ತೃಪ್ತಿ ತಂದಿದೆ ಎಂದ ಅವರು, ವಲಸೆ ಶಾಸಕರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡಿರುವುದಕ್ಕೆ ಕಾರಣ ಎಂದರೆ, ಆ ಕ್ಷೇತ್ರಗಳು ಹಿಂದುಳಿದಿವೆ. ಅದರಿಂದ ಹೆಚ್ಚು ಒತ್ತು ನೀಡಲಾಗಿದೆ. ಅನುದಾನ ನೀಡುವಲ್ಲಿ ತಾರತಮ್ಯ ಮಾಡುತ್ತಿಲ್ಲ ಎಂದು ಅವರು ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X