ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಾಜಿನಗರ: 2 ದಿನ ಟ್ರಾಫಿಕ್ ಬದಲಿ ಮಾರ್ಗ

By Staff
|
Google Oneindia Kannada News

ಬೆಂಗಳೂರು, ಸೆ. 7 : ಸೇಂಟ್ ಮೇರೀಸ್ ವಾರ್ಷಿಕೋತ್ಸವ ಪ್ರಯುಕ್ತ ಶಿವಾಜಿನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸೆ. 8 ರಂದು ಸಂಚಾರ ವ್ಯವಸ್ಥೆಯನ್ನು ಬದಲಿಸಲಾಗಿದೆ.

ಕೆಲವು ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆಯನ್ನು ನಿಷೇಧಿಸಲಾಗಿದೆ. ಅವುಗಳೆಂದರೆ ಮಿನಾಕ್ಷಿ ದೇವಸ್ಥಾನ ರಸ್ತೆಗೆ, ಜ್ಯೋತಿ ಕೆಫೆ ವೃತ್ತದಿಂದ ರಸೆಲ್ ಮಾರ್ಕೆಟ್ ಗೆ ಹೋಗುವ ಮಾರ್ಗ, ಬ್ರಾಡವೇ ರಸ್ತೆ, ಕಾಕ್ ಬರ್ನ್ ರಸ್ತೆಯಿಂದ ರಸೆಲ್ ಮಾರ್ಕೆಟ್ ಹೋಗುವ ಮಾರ್ಗ, ಧರ್ಮರಾಜ್ ದೇವಸ್ಥಾನ ರಸ್ತೆಯಿಂದ ಹಳೇ ಫೂರ್ ರಸ್ತೆಯ ಮೂಲಕ ರಸೆಲ್ ಮಾರ್ಕೆಟ್ ಮತ್ತು ತಾಜ್ ವೃತ್ತಕ್ಕೆ ಹೋಗುವ ಮಾರ್ಗ.

ಸೆಫಿಂಗ್ಸ್ ರಸ್ತೆ ಮೂಲಕ ಬರುವ ಸಂಚಾರವನ್ನು ಅಣ್ಣಾಮಲೈ ರಸ್ತೆಯಿಂದ ರಸೆಲ್ ಮಾರ್ಕೆಟ್ ಗೆ ಹೋಗುವ ಮಾರ್ಗ. ಬಿಆರ್ ವಿ ಜಂಕ್ಷನ್ ನಿಂದ ಶಿವಾಜಿನಗರ ಬಸ್ ನಿಲ್ದಾಣದ ಕಡೆಗೆ ಹೋಗುವ ಮಾರ್ಗ. ಬಿಆರ್ ವಿ ಜಂಕ್ಷನ್ ನಿಂದ ಶಿವಾಜಿನಗರದ ಬಸ್ ನಿಲ್ದಾಣದ ಕಡೆಗೆ ಹೋಗುವ ಮಾರ್ಗ. ಬಾಳೆಕುಂದ್ರಿ ವೃತ್ತದಿಂದ ಶಿವಾಜಿನಗರದ ಕಡೆಗೆ ಹೋಗುವ ಮಾರ್ಗ.

ವಾಹನ ನಿಲುಗಡೆ ನಿಷೇಧ

ರಸೆಲ್ ಮಾರ್ಕೆಟ್ ಸುತ್ತಮುತ್ತ ಬ್ರಾಡವೇ ರಸ್ತೆ, ಮಿನಾಕ್ಷಿ ದೇವಾಲಯ ರಸ್ತೆ, ಸೆಂಟ್ರಲ್ ರಸ್ತೆ, ಶಿವಾಜಿ ರಸ್ತೆ, ಕನ್ನಿಂಗ್ ಹ್ಯಾಂ ರಸ್ತೆಯಲ್ಲಿ ಬಾಳೆಕುಂದ್ರಿ ವೃತ್ತದಿಂದ ವ್ಹೋಕಾರ್ಟ್ ಆಸ್ಪತ್ರೆವರೆಗೆ, ಯೂನಿಯನ್ ಸ್ಟ್ರೀಟ್ ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.

ಇಲ್ಲಿ ವಾಹನ ನಿಲ್ಲಿಸಬಹುದು

ಕಾಮರಾಜ್ ರಸ್ತೆ ನಿಲುಗಡೆ ಪ್ರದೇಶದಲ್ಲಿ, ಮೇನ್ ಗಾರ್ಡ್ ಕ್ರಾಸ್ ರಸ್ತೆ ಎದುರು ಸಫಿನಾ ಪ್ಲಾಜಾ ಮುಂಭಾಗ, ಕಬ್ಬನ್ ಪಾರ್ಕ್ ಒಳಗೆ ಕಿಂಗ್ಸ್ ರಸ್ತೆಯಲ್ಲಿ ಹಾಗೂ ಜಸ್ಮಾ ಭವನ ರಸ್ತೆಯಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X