ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಜೋಗಿ' ಜೋಳಿಗೆಯಿಂದ ಎರಡು ಪುಸ್ತಕಗಳು

By Staff
|
Google Oneindia Kannada News

Jogi book release Functionಬೆಂಗಳೂರು, ಸೆ.6: ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ಈ ಭಾನುವಾರ(ಸೆ.7) 'ಜೋಗಿ 'ಅವರ ಎರಡು ಪುಸ್ತಕಗಳು ಬಿಡುಗಡೆಯಾಗಲಿವೆ.

ಅಂದು 'ಕಾಡುಹಾದಿಯ ಕತೆಗಳು' ಹಾಗೂ 'ಯಾಮಿನಿ'(ಕಾದಂಬರಿ) ಪುಸ್ತಕಗಳು ಓದುಗರಿಗೆ ಕೈ ಸೇರಲಿವೆ. ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಡಾ.ಯು.ಆರ್.ಅನಂತಮೂರ್ತಿ, ನಾಗೇಶ ಹೆಗಡೆ, ಪವಿತ್ರ ಲೋಕೇಶ್ ಆಗಮಿಸಲಿದ್ದಾರೆ. ಪುಸ್ತಕಗಳು ಭಾನುವಾರ ಬೆಳಗ್ಗೆ 10.30ಕ್ಕೆ ಲೋಕಾರ್ಪಣೆಯಾಗಲಿವೆ. 'ಅಂಕಿತ ಪುಸ್ತಕ' ಪ್ರಕಾಶನದಿಂದ ಪುಸ್ತಕಗಳು ಹೊರಬರುತ್ತಿವೆ. ಕಾರ್ಯಕ್ರಮದಲ್ಲಿ ಜೋಗಿ (ಗಿರೀಶ್ ರಾವ್ )ಉಪಸ್ಥಿತರಾಗಿರುತ್ತಾರೆ.

ಸ್ಥಳ: ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ನಂ.6, ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು-560 004.

(ದಟ್ಸ್ ಕನ್ನಡ ಸಭೆ-ಸಮಾರಂಭ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X