ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಪರವಾದ ಐತಿಹಾಸಿಕ ಅಣು ಒಪ್ಪಂದ

By Staff
|
Google Oneindia Kannada News

India wins over Nuclear Waiverವಿಯೆನ್ನಾ (ಆಸ್ಟ್ರಿಯಾ), ಸೆ. 6 : ಭಾರತ-ಅಮೆರಿಕ ನಡುವಿನ ಅಣು ಒಪ್ಪಂದಕ್ಕೆ ಅಣು ಪೂರೈಕೆ ರಾಷ್ಟ್ರಗಳ ಕೂಟ (ಎನ್ ಎಸ್ ಜಿ) ಸಮ್ಮತಿ ಸೂಚಿಸುವ ಮೂಲಕ ಭಾರತ ನ್ಯೂಕ್ಲಿಯರ್ ರಾಷ್ಟ್ರಗಳ ಸಾಲಿಗೆ ಶನಿವಾರ ಸೇರ್ಪಡೆಯಾಯಿತು. ಈ ಐತಿಹಾಸಿಕ ಒಪ್ಪಂದದಿಂದಾಗಿ ಭಾರತಕ್ಕೆ ಭಾರೀ ಯಶಸ್ಸು ದೊರೆತಂತಾಗಿದೆ.
ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಕರೆ ಮಾಡಿ ಅಮೆರಿಕದ ಅಧ್ಯಕ್ಷ ಜಾರ್ಜ್ ಬುಷ್ ಅಭಿನಂದಿಸಿದ್ದಾರೆ. ಅಣು ಒಪ್ಪಂದಕ್ಕೆ 45 ಎನ್ ಎಸ್ ಜಿ ರಾಷ್ಟ್ರಗಳು ಒಪ್ಪಿಗೆ ಸೂಚಿಸಿರುವುದು ತೀವ್ರ ಸಂತಸ ತಂದಿದೆ ಎಂದು ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ, ಪ್ರಧಾನಿ ಮನಮೋಹನ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

ಎನ್ ಎಸ್ ಜಿ ಗುಂಪಿನ ಚೀನಾ, ಆಸ್ಟ್ರಿಯಾ, ಐರ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ರಾಷ್ಟ್ರಗಳು ಒಪ್ಪಂದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಅಣ್ವಸ್ತ್ರ ಪರೀಕ್ಷೆಗೆ ಸಂಬಂಧಿಸಿದಂತೆ ಭಾರತ ಹಾಕಿಕೊಂಡಿರುವ ಸ್ವಯಂಪ್ರೇರಿತ ನಿಷೇಧ ಮತ್ತು ನಿಶ್ಯಸ್ತ್ರೀಕರಣ ಬಲಪಡಿಸುವಿಕೆ ಕುರಿತಂತೆ ಭಾರತದ ವಿದೇಶಾಂಗ ಖಾತೆ ಸಚಿವ ಪ್ರಣಬ್ ಮುಖರ್ಜಿ ನೀಡಿದ ಹೇಳಿಕೆ ಒಪ್ಪಂದ ಭಾರತದತ್ತ ಒಲಿಯಲು ಸಹಕಾರಿಯಾಯಿತು. ತೀವ್ರವಾಗಿ ವಿರೋಧಿಸುತ್ತಿದ್ದ ಆಸ್ಟ್ರಿಯಾ ಕೂಡ ಒಪ್ಪಂದಕ್ಕೆ ಕೊನೆಹಂತದಲ್ಲಿ ಒಪ್ಪಿಗೆ ಸೂಚಿಸಿತು. ಒಪ್ಪಂದವನ್ನು ಖಂಡತುಂಡವಾಗಿ ವಿರೋಧಿಸುತ್ತಿದ್ದ ಚೀನಾ ಮಾತ್ರ ಇಂದು ನಡೆದ ಸಭೆಗೆ ಗೈರುಹಾಜರಾಯಿತು.

ಈ ಐತಿಹಾಸಿಕ ಒಪ್ಪಂದದಿಂದಾಗಿ 34 ವರ್ಷಗಳ ಅಣು ಅಸ್ಪೃಶ್ಯತೆಯಿಂದ ಭಾರತ ಹೊರಬಂದಂತಾಗಿದೆ. ಭಾರತ 45 ಎಲೈಟ್ ರಾಷ್ಟ್ರಗಳ ಗುಂಪನ್ನು ಸೇರಿಕೊಂಡಿದ್ದು ನ್ಯೂಕ್ಲಿಯರ್ ರಾಷ್ಟ್ರವಾಗಿ ಹೊರಹೊಮ್ಮಿದೆ. ಈ ಒಪ್ಪಂದದಿಂದಾಗಿ ಭಾರತ ಅಮೆರಿಕಾದೊಡನೆ ಅಣು ವ್ಯವಹಾರಕ್ಕೆ ಸಂಬಂಧಿಸಿದಂತೆ ಮುಕ್ತವಾಗಿ ವ್ಯವಹರಿಸಬಹುದಾಗಿದೆ. ಭಾರತ ಎದುರಿಸುತ್ತಿರುವ ಇಂಧನ ಕೊರತೆ ಇದರಿಂದ ನೀಗುವುದು ಮತ್ತು ಅಣುಶಕ್ತಿಯನ್ನು ಅಭಿವೃದ್ಧಿಗಾಗಿ ಬಳಸಲು ಅನುವಾಗುತ್ತದೆ ಎಂದು ಅಣ್ವಸ್ತ್ರ ಒಪ್ಪಂದವನ್ನು ಬೆಂಬಲಿಸಿದ ತಜ್ಞರು ಅಭಿಮತ ಹೊಂದಿದ್ದಾರೆ.

ಈ ಒಪ್ಪಂದದ ಪ್ರಕಾರ, ಭಾರತ ಇನ್ನು ಮುಂದೆ ಅಣ್ವಸ್ತ್ರ ಪ್ರಯೋಗ ಮಾಡುವಂತಿಲ್ಲ. ಒಂದು ವೇಳೆ ಅಣ್ವಸ್ತ್ರ ಪ್ರಯೋಗ ಮಾಡಿದ್ದೇ ಆದರೆ ಭಾರತವನ್ನು ಎನ್ ಎಸ್ ಜಿಯಿಂದ ಹೊರಹಾಕಲಾಗುವುದು.

ಇದಕ್ಕೂ ಮುನ್ನ ಪ್ರಧಾನಿ ಮನಮೋಹನ್ ಸಿಂಗ್ ನವದೆಹಲಿಯಲ್ಲಿ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೆನನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಅಣು ಒಪ್ಪಂದ ಕುರಿತು ಕಳೆದೆರಡು ದಿನಗಳಿಂದ ನಡೆಯುತ್ತಿರುವ ಚರ್ಚೆ ವಿಫಲವಾಗಿತ್ತು. ಪರಮಾಣು ಪೂರೈಕೆ ರಾಷ್ಟ್ರಗಳು ಒಪ್ಪಂದಕ್ಕೆ ಚೀನಾ ಸೇರಿದಂತೆ ಐದು ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿದ್ದರಿಂದ ಮನಮೋಹನ್ ಸಿಂಗ್ ಸರ್ಕಾರ ತೀವ್ರ ಸಂಕಟಕ್ಕೆ ಸಿಲುಕಿತ್ತು.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X