ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತುಲ್ ರಾವ್‌ಗೆಕರ್ನಾಟಕ ಹೈಕೋರ್ಟ್ ಜಾಮೀನು

By Staff
|
Google Oneindia Kannada News

Atul Raoಬೆಂಗಳೂರು, ಸೆ. 2 : ಉಡುಪಿ ಕ್ಷೇತ್ರದ ಬಿಜೆಪಿ ಶಾಸಕ ರಘುಪತಿ ಭಟ್ ಅವರ ಪತ್ನಿ ಪದ್ಮಪ್ರಿಯ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸ್ಥಾನದಲ್ಲಿರುವ ಅತುಲ್ ರಾವ್ ಹೈಕೋರ್ಟ್ ನಿಂದ ಜಾಮೀನು ಪಡೆಯಲು ಯಶಸ್ವಿಯಾಗಿದ್ದಾರೆ. ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಾಲಯ ಅತುಲ್ ರಾವ್ ಅವರಿಗೆ ಒಂದು ಲಕ್ಷ ರುಪಾಯಿ ಠೇವಣಿ, ಇಬ್ಬರು ಗಣ್ಯರ ಭದ್ರತೆಯೊಂದಿಗೆ ಷರತ್ತು ಬದ್ಧ ಜಾಮೀನು ನೀಡಿದೆ.

ಉಡುಪಿ ಶಾಸಕ ಕೆ. ರಘುಪತಿ ಭಟ್ ಅವರ ಪತ್ನಿ ಪದ್ಮಪ್ರಿಯ ತವರಿಗೆ ತೆರಳುವುದಾಗಿ ಹೇಳಿ ನಾಪತ್ತೆಯಾಗಿದ್ದರು. ನಂತರ ಅನೇಕ ನಾಟಕೀಯ ಬೆಳವಣಿಗೆ ನಡೆದು ಪದ್ಮಪ್ರಿಯ ಕೋಲಾರದ ಫಾರ್ಮ ಹೌಸ್ ವೊಂದರಲ್ಲಿ ಸುರಕ್ಷಿತವಾಗಿ ಇದ್ದಾರೆ ಎಂದು ಸರ್ಕಾರ ಹೇಳಿಕೆ ನೀಡಿತ್ತು. ಆದರೆ ಸರ್ಕಾರ ಹೇಳಿಕೆ ನೀಡಿದ ಮರುದಿನ ಪದ್ಮಪ್ರಿಯ ಅವರು ದೆಹಲಿಯ ಅಪಾರ್ಟ್ ಮೆಂಟ್ ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಪದ್ಮಪ್ರಿಯಾ ಸಾವಿಗೆ ಅತುಲ್ ರಾವ್ ಕಾರಣ ಎಂದು ಶಾಸಕ ರಘುಪತಿ ಭಟ್ ಮಣಿಪಾಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಅತುಲ್ ರಾವ್ ಅವರನ್ನು ಮಣಿಪಾಲ್ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಕಳೆದ ಎರಡು ತಿಂಗಳಿನಿಂದ ಅತುಲ್ ರಾವ್ ನ್ಯಾಯಾಂಗ ಬಂಧನದಲ್ಲಿದ್ದರು. ಅತುಲ್ ರಾವ್ ಅನೇಕ ಸಲ ಜಾಮೀನಿಗೆ ಪ್ರಯತ್ನಿಸಿದ್ದರು. ಆದರೆ ನ್ಯಾಯಾಲಯ ನಿರಾಕರಿಸಿತ್ತು. ಇಂದು ಮತ್ತೆ ಅತುಲ್ ರಾವ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಒಂದು ಲಕ್ಷ ಠೇವಣಿ, ಇಬ್ಬರು ಗಣ್ಯರ ಭದ್ರತೆ ಹಾಗೂ ಪ್ರತಿ ಭಾನುವಾರ ಮಣಿಪಾಲ್ ಪೊಲೀಸ್ ಠಾಣೆಗೆ ಹಾಜರಾಗಬೇಕು ಎನ್ನುವ ಷರತ್ತಿನೊಂದಿಗೆ ಜಾಮೀನು ನೀಡಲು ಸಮ್ಮತಿಸಿದೆ.

(ದಟ್ಸ್ ಕನ್ನಡ ವಾರ್ತೆ)

ಪೂರಕ ಸುದ್ದಿಗಳು:
ಸೂಕ್ಷ್ಮ ಮನಸ್ಸಿನ ಪದ್ಮಪ್ರಿಯಾ ಸಾವಿನ ಕಾರಣವೇನು?
ಪದ್ಮಪ್ರಿಯಾ ಪತಿ ಕೆ. ರಘುಪತಿ ಭಟ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X