ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾರ್ಖಂಡ್‌ ಸಿಎಂ ಆಗಿ ಬುಡಕಟ್ಟು ನಾಯಕ

By Staff
|
Google Oneindia Kannada News

ರಾಂಚಿ,ಆ.26: ಜಾರ್ಖಂಡ್ ಮುಕ್ತಿ ಮೋರ್ಚಾ(ಜೆ‍ಎಂಎಂ) ಮುಖ್ಯಸ್ಥ ಶಿಬು ಸೋರೆನ್ ಬುಧವಾರ(ಆ.27) ಜಾರ್ಖಂಡ್ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಜಭವನದ ನಿರ್ದೇಶನದಂತೆ ಸೆ.1ರಂದು ಅವರು ಜಾರ್ಖಂಡ್ ವಿಧಾನಸಭೆಯಲ್ಲಿ ಬಹುಮತವನ್ನು ಸಾಬೀತುಪಡಿಸಬೇಕಾಗಿದೆ.

ಸೋಮವಾರ ಸಂಜೆ ಜಾರ್ಖಂಡ್‌ ರಾಜ್ಯಪಾಲ ಸೈಯೀದ್ ರಜಿ ಸರ್ಕಾರ ರಚಿಸಲು ಸೋರೇನ್ ಅವರನ್ನು ಆಹ್ವಾನಿಸಿದ್ದರಿಂದ ಮುಖ್ಯಮಂತ್ರಿ ಸ್ಥಾನವನ್ನು ಅಧಿರೋಹಿಸಲು ಅವರ ಹಾದಿ ಸುಗಮವಾಯಿತು. ಅರುವತ್ತು ನಾಲ್ಕು ವರ್ಷದ ಬುಡಕಟ್ಟು ನಾಯಕ ಬುಧವಾರ ರಾಂಚಿಯ ಮೊರಬಾದಿ ಮೈದಾನದಲ್ಲಿ ಸಂಜೆ ನಾಲ್ಕು ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಕಳೆದ ವಾರ ಜಾರ್ಖಂಡ್‌ನಲ್ಲಿ ಮಧುಕೋಡ ನೇತೃತ್ವದ ಯುಪಿಎ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಸೋರೇನ್ ವಾಪಸ್ ಪಡೆದಿದ್ದರಿಂದ ಸರ್ಕಾರ ಅಲ್ಪಮತಕ್ಕೆ ಕುಸಿಯಿತು. ಮಧು ಕೋಡ ಅವರು ಶನಿವಾರ ತಮ್ಮ ರಾಜಿನಾಮೆ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿದರು. ಮುಂದಿನ ಸರ್ಕಾರ ಅಸ್ತಿತ್ವಕ್ಕೆ ಬರುವವರೆಗೂ ಮುಖ್ಯಮಂತ್ರಿಯಾಗಿ ಮುಂದುವರೆಯುವಂತೆ ರಾಜ್ಯಪಾಲರು ಕೋಡ ಅವರಿಗೆ ಸೂಚಿಸಿದ್ದರು.

(ಏಜೆನ್ಸೀಸ್)

ಸೋರೆನ್ ಸಿಎಂ ಆಗಿ ಪ್ರಮಾಣ ವಚನ ಸಾಧ್ಯತೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X