ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್ ತೆಕ್ಕೆಗೆ ಬ್ರಿಟನ್‌ನ ಆಕ್ಸಾನ್ ಕಂಪನಿ

By Staff
|
Google Oneindia Kannada News

ಬೆಂಗಳೂರು, ಆ. 26 : ಬ್ರಿಟನ್ ಮೂಲದ ಆಕ್ಸಾನ್ ಕಂಪನಿಯನ್ನು ಖರೀದಿಸುವ ಯೋಜನೆಯನ್ನು ಹೊಂದಿರುವುದಾಗಿ ಇನ್ಫೋಸಿಸ್ ಟೆಕ್ನಾಲಜೀಸ್ ಸೋಮವಾರ ತಿಳಿಸಿದೆ. ಭಾರತದ ಎರಡನೇ ಅತಿ ದೊಡ್ಡ ಸಾಫ್ಟ್ ವೇರ್ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿರುವ ಇನ್ಫೋಸಿಸ್ ಬ್ರಿಟನ್ನಿನ ಆಕ್ಸಾನ್ ಕಂಪನಿಯನ್ನು 753 ದಶಲಕ್ಷ ಡಾಲರ್ ಗೆ ಖರೀದಿಸುವ ಪ್ರಸ್ತಾವನೆ ಮೂಲಕ ಅನಿಶ್ಚಿತವಾಗಿರುವ ಅಮೆರಿಕ ಮಾರುಕಟ್ಟೆ ಆಚೆಗೂ ಬೆಳೆಯುವ ಅವಕಾಶಗಳನ್ನು ಹುಡುಕಲಾರಂಭಿಸಿದೆ.

ಈ ವ್ಯವಹಾರದಲ್ಲಿ ಆಕ್ಸಾನ್ ಪ್ರತಿ ಷೇರಿಗೆ 6 ಪೌಂಡ್ ನಗದು ಮೌಲ್ಯ ನಿಗದಿಪಡಿಸಿದೆ. ಇದು ಕಳೆದ ಶುಕ್ರವಾರ ಕೊನೆಗೊಂಡ ಬೆಲೆ 5025 ಪೌಂಡ್ ಗಿಂತ ಶೇ.19.4 ರಷ್ಟು ಹೆಚ್ಚು. ಕಳೆದ ಆರು ತಿಂಗಳ ಸರಾಸರಿ ಬೆಲೆಯ ಶೇ.33 ರಷ್ಟು ಹೆಚ್ಚಾಗಿದೆ. ಮಂಗಳವಾರ ಪ್ರಕಟವಾಗಿರುವ ಆಕ್ಸಾನ್ ಫಲಿತಾಂಶದಲ್ಲಿ ಘೋಷಿಸಲಾಗಿರುವ ಯಾವುದೇ ಮಧ್ಯಂತರ ಡಿವಿಡೆಂಡ್ ಇದರಲ್ಲಿ ಸೇರುತ್ತದೆ ಎಂದು ಇನ್ಫೋಸ್ ಮಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕ್ರಿಸ್ ಗೋಪಾಲಕೃಷ್ಣ ಹೇಳಿದ್ದಾರೆ.

ಆಕ್ಸಾನ್ ಕಂಪನಿಯ ಮಾರುಕಟ್ಟೆ ಮೌಲ್ಯ ಸುಮಾರು 600 ದಶಲಕ್ಷ ಡಾಲರ್ ಆಗಿದೆ. ಆಕ್ಸಾನ್ ಆಡಳಿತ ಮಂಡಳಿಯು ಈ ವ್ಯವಹಾರವನ್ನು ಅವಿರೋಧವಾಗಿ ಶಿಫಾರಸ್ಸು ಮಾಡಿದೆ. ಕಂಪನಿಯ ಬಹುತೇಕ ಷೇರುದಾರರು ಹಾಗೂ ಸಿಬ್ಬಂದಿ ಈ ಪ್ರಸ್ತಾಪವನ್ನು ಬೆಂಬಲಿಸಿದ್ದಾರೆ ಎಂದು ಇನ್ಫೋಸಿಸ್ ಮುಖ್ಯ ಹಣಕಾಸು ಅಧಿಕಾರಿ ಬಾಲಕೃಷ್ಣನ್ ತಿಳಿಸಿದ್ದಾರೆ.

ಷೇರುದಾರರು ಮತ್ತು ನಿಯಂತ್ರಕರ ಅನುಮೋದನೆ ಪಡೆಯಬೇಕಿರುವುದರಿಂದ ನಾಸ್‌ಡಾಕ್ ಪಟ್ಟಿಯಲ್ಲಿರುವ ಇನ್ಫೋಸಿಸ್ ನವೆಂಬರ್ ಹೊತ್ತಿಗೆ ಈ ಖರೀದಿ ಪೂರ್ಣಗೊಳಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X