ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಯವಿಟ್ಟು ಮಣ್ಣಿನ ಮಗ ಗಣೇಶನನ್ನೇ ಪೂಜಿಸಿ

By Staff
|
Google Oneindia Kannada News

ಎಲ್ಲೆಡೆ ಗೌರಿ ಗಣೇಶ ಹಬ್ಬಕ್ಕೆ ತಯಾರಿ ಜೋರಾಗಿ ನಡೆದಿದೆ. ಇದರ ಜತೆಜತೆಗೆ ಪರಿಸರವಾದಿಗಳ ಅಭಿಯಾನ ಆರಂಭವಾಗಿದೆ. ಬಣ್ಣದ ಪೈಂಟ್ ಗಳಿಂದ ಅಲಂಕೃತವಾದ ಗಣೇಶನ ಪ್ರತಿಮೆಗಳ ಬಳಕೆ ವಿರುದ್ಧ ಪ್ರತಿಭಟನಾ ಮೆರವಣಿಗೆಯನ್ನು ನಗರದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಮಲ್ಲೇಶ್ವರಂನ ಎಂಇಎಸ್ ಶಿಕ್ಷಣ ಸಂಸ್ಥೆಯ ಎಲ್ಲಾ ವಿಭಾಗ(ಕಲೆ, ವಿಜ್ಞಾನ ಹಾಗೂ ವಾಣಿಜ್ಯ)ದ ವಿದ್ಯಾರ್ಥಿಗಳು, ಪ್ರಾದ್ಯಾಪಕರುಗಳು ಹಾಗೂ ಆಸಕ್ತ ಪೋಷಕರು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.ಈ ಜಾಥಾಕ್ಕೆ ಎಂಇಎಸ್ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಬಿ.ಆರ್. ಶೇಷಾದ್ರಿ ಅಯ್ಯಂಗಾರ್ ಅವರು ಚಾಲನೆ ನೀಡಿದರು.

ಸಂಸ್ಥೆಯ ಉಪನಿರ್ದೇಶಕಿ ವಿಮಲಾ ರಂಗಾಚಾರ್, ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿ.ಎಸ್ .ವತ್ಸಲಾ ಮುಂತಾದ ಹಿರಿಯರು ಪಾಲ್ಗೊಂಡಿದ್ದರು. ಸುಮಾರು ನೂರಕ್ಕೂ ಅಧಿಕ ವಿದ್ಯಾರ್ಥಿಗಳು, ಎನ್ ಸಿ ಸಿ ಕ್ಯಾಡೆಟ್ ಗಳು ಹಾಗೂ ಎನ್ ಎಸ್ ಎಸ್ ಸ್ವಯಂ ಸೇವಕರು ಜಾಥಾದಲ್ಲಿ ಉತ್ಸಾಹದಿಂದ ಸಾಗಿದರು. ಮಣ್ಣಿನಿಂದ ಮಾಡಿದ ಗಣೇಶನ ಮೂರ್ತಿಯನ್ನು ಹಿಡಿದು, ಪೈಂಟ್ ಮಾಡಿದ ಗಣೇಶನ ಮೂರ್ತಿಯನ್ನು ಬಳಸದಂತೆ ನಾಗರೀಕರಲ್ಲಿ ಮನವಿ ಮಾಡಿದರು. ಆಸಕ್ತ ಸಾರ್ವಜನಿಕರು ಸಮ್ಮತಿ ಸೂಚಿಸಿ, ತಾವೂ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ವಿಶೇಷ.

(ದಟ್ಸ್ ಕನ್ನಡ ಚಿತ್ರವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X