ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಪ್ರಥಮ ಚಿನ್ನ

By Staff
|
Google Oneindia Kannada News

Abhinav Bindra wins india's first gold in beijing ಬೀಜಿಂಗ್, ಆ. 11 : ಬೀಜಿಂಗ್ ಒಲಿಂಪಿಕ್ಸ್ ಕ್ರೀಡಾಮೇಳದಲ್ಲಿ ಭಾರತ ಚಿನ್ನದ ಪದಕ ಗೆಲ್ಲುವ ಮೂಲಕ ತನ್ನ ಖಾತೆಯನ್ನು ತೆರಿದಿದೆ. ಈ ಮೂಲಕ ಒಲಿಂಪಿಕ್ಸ್ ನಲ್ಲಿ ಮೊಟ್ಟಮೊದಲ ಬಾರಿಗೆ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದೆ. ಭಾರತೀಯ ಶೂಟರ್ ಅಭಿನವ್ ಬಿಂದ್ರಾ 10 ಮೀ. ಏರ್ ರೈಫಲ್ ಶೂಟಿಂಗ್ ನಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಈ ಮೂಲಕ ಭಾರತೀಯ ಕ್ರೀಡಾ ಇತಿಹಾಸದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟವೊಂದರಲ್ಲಿ ಮೊಟ್ಟಮೊದಲ ಚಿನ್ನದ ಪದಕ ಗಳಿಸಿದ ಆಟಗಾರನೆಂಬ ಹಿರಿಮೆಗೆ ಬಿಂದ್ರಾ ಪಾತ್ರರಾದರು.

25 ವರ್ಷ ವಯಸ್ಸಿನ ಅಭಿನವ್ ಬಿಂದ್ರಾ ಅವರು ಒಲಿಂಪಿಕ್ಸ್ ಕ್ರೀಡೂಕೂಟದಲ್ಲಿ ಚಿನ್ನದ ಪದಕ ಗಳಿಸಿದ್ದಕ್ಕೆ ಭಾರತೀಯ ಕ್ರೀಡಾಭಿಮಾನಿಗಳು ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ. ಬೀಜಿಂಗ್ ನಲ್ಲಿರುವ ಭಾರತೀಯರು ಹರ್ಷಗೊಂಡಿದ್ದಾರೆ.

ಭಾರತೀಯ ಕ್ರೀಡಾಕೂಟಗಳು ಪ್ರಾಧಿಕಾರದ ಅಧ್ಯಕ್ಷ ಸುರೇಶ್ ಕಲ್ಮಾಡಿ ಅವರು ಅಭಿನವ್ ಬಿಂದ್ರಾ ಅವರ ಸಾಧನೆಯನ್ನು ಹಾಡಿಹೊಗಳಿದ್ದಾರೆ. ಭಾರತೀಯ ಕ್ರೀಡಾ ಇತಿಹಾಸದಲ್ಲಿ ಚಿನ್ನದ ಪದಕ ಗಳಿಸಿರುವುದು ಪ್ರಥಮ ಸಲವಾಗಿದೆ. ಇಂಥ ಗೌರವಕ್ಕೆ ಪಾತ್ರರಾಗಿರುವ ಬಿಂದ್ರಾ ಅವರನ್ನು ಎಷ್ಟು ಬಣ್ಣಿಸಿದರೂ ಸಾಲದು ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಒಲಿಂಪಿಕ್ಸ್ ನಲ್ಲಿ ಪ್ರಪ್ರಥಮ ಬಂಗಾರ ಪದಕ ಗೆದ್ದ ಬಿಂದ್ರಾರ ಸಂತಸದ ಕ್ಷಣಗಳು

ಒಲಿಂಪಿಕ್ಸ್ 2008 ಗೆ ವರ್ಣರಂಜಿತ ಉದ್ಘಾಟನೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X