ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರದುರ್ಗ ಯುವಕನಿಗೆ ಅಮೆರಿಕಾದಲ್ಲಿ ಜೈಲುವಾಸ

By Staff
|
Google Oneindia Kannada News

ಚಿತ್ರದುರ್ಗ, ಆ.3 : ಕೆಲಸದ ನಿಮಿತ್ತ ಅಮೆರಿಕಕ್ಕೆ ತೆರಳಿದ್ದ ನಗರದ ಸಾಫ್ಟವೇರ್ ಎಂಜನಿಯರೊಬ್ಬರು ಅಪ್ರಾಪ್ತ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡದರೆಂಬ ಆರೋಪದ ಮೇಲೆ ಪೆನ್ಸಿಲ್ವೇನಿಯಾ ಜೈಲು ಸೇರಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಚಿತ್ರದುರ್ಗದ ಪ್ರೌಢ ಶಾಲೆ ಶಿಕ್ಷಕ ನಿಂಗಪ್ಪ ಎಂಬುವವರ ಪುತ್ರ ನವೀನ್ ನಿಂಗಪ್ಪ ಜೈಲುವಾಸ ಅನುಭವಿಸುತ್ತಿರುವ ಸಾಫ್ಟವೇರ್ ಎಂಜನಿಯರ್. ಚೆನ್ನೈನಲ್ಲಿರುವ ಪ್ರತಿಷ್ಠಿತ ಎಚ್ ಸಿಎಲ್ ಕಂಪನಿಯಲ್ಲಿ ಸಾಫ್ಟವೇರ್ ಎಂಜನಿಯರ್ ಆಗಿ ಕೆಲಸ ಮಾಡುತ್ತಿದ್ದ ಅವರು, ಕಂಪನಿಯ ಪ್ರೊಜೆಕ್ಟ್ ವರ್ಕ್ ನಿಮಿತ್ತ ಕಳೆದ ವರ್ಷ 2007 ಏಪ್ರಿಲ್ ತಿಂಗಳಲ್ಲಿ ಅಮೆರಿಕಕ್ಕೆ ತೆರಳಿ ನ್ಯೂಜೆರ್ಸಿಯಲ್ಲಿ ಕೆಲಸ ಮಾಡುತ್ತಿದ್ದರು.

ತುಂಬಾ ಮೃದು ಸ್ವಭಾವದವನಾದ ನವೀನ, ಇಂಥ ಕೆಲಸ ಮಾಡಲು ಸಾಧ್ಯವಿಲ್ಲ. ಆತನ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಲಾಗಿದೆ ಎಂದು ಅವರ ತಂದೆ ನಿಂಗಪ್ಪ ಅಳಲು ತೋಡಿಕೊಳ್ಳ್ಳುತ್ತಾರೆ. ನಾಲ್ಕು ದಿನಗಳ ಹಿಂದೆ ನವೀನ ಅವರಿಂದ ಬಂದ ಪತ್ರದ ಪ್ರಕಾರ ನಾನು ಅವಳೊಂದಿಗೆ ಚಾಟ್ ಮಾಡುತ್ತಿದ್ದೆನೆ ಹೊರತು ನಮ್ಮಿಬ್ಬರ ನಡುವೆ ಬೇರೆ ಯಾವ ರೀತಿಯ ಸಂಬಂಧಗಳು ಇಲ್ಲ. ಆದರೂ ಕೂಡಾ ನಾನು ಆರೋಪಿ ಎಂದು ಪೊಲೀಸರು ನನ್ನನ್ನು ಜೈಲಿನಲ್ಲಿ ಇರಿಸಿದ್ದಾರೆ ಎಂದು ತಂದೆಗೆ ತಿಳಿಸಿದ್ದಾನೆ.

ನವೀನ ಅವರ ಸಹೋದರ ಶ್ರೀಧರ್ ಕೂಡಾ ತಮ್ಮನನ್ನು ಜೈಲಿನಿಂದ ಬಿಡುಗಡೆ ಗೊಳಿಸಲು ತೀವ್ರ ಪ್ರಯತ್ನ ನಡೆಸಿದ್ದಾರೆ. ಕೇಂದ್ರದ ಮಾಜಿ ಯೋಜನಾ ಖಾತೆಯ ಸಹಾಯಕ
ಸಚಿವ ಎಂ.ವಿ.ರಾಜಶೇಖರನ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ ನವೀನ್ ಅವರನ್ನು ಬಿಡುಗಡೆ ಮಾಡಿಸಬೇಕು ಎಂದು ಅನೇಕ ಸಲ ಕೇಳಿಕೊಂಡಿದ್ದಾರೆ. ಆದರೆ ಅಲ್ಲಿಂದ ಯಾವ ಪ್ರತಿಕ್ರಿಯೆ ಬಂದಿಲ್ಲ. ನವೀನ್ ಕೆಲಸ ಮಾಡುತ್ತಿದ್ದ ಕಂಪನಿ ಸಹ ಈ ವಿಚಾರದಲ್ಲಿ ಕೈಚೆಲ್ಲಿದೆ ಎಂದು ಶ್ರೀಧರ್ ಆರೋಪಿಸುತ್ತಾರೆ. ಅಮಾಯಕನಾದ ನನ್ನ ತಮ್ಮನನ್ನು ಬಿಡುಗಡೆ ಮಾಡಿಸಬೇಕು. ಕೇಂದ್ರ ಸರ್ಕಾರ ಶೀಘ್ರದಲ್ಲಿ ಮಧ್ಯೆ ಪ್ರವೇಶಿಸಿ ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X