ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರ ಸುಳಿವು ನೀಡಿದರೆ 51 ಲಕ್ಷ ರು : ಮೋದಿ

By Staff
|
Google Oneindia Kannada News

ಸೂರತ್, ಜು. 30 : ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಬಾಂಬ್ ಹಾವಳಿಯಿಂದ ತತ್ತರಿಸಿರುವ ಸೂರತ್ ನಗರಕ್ಕೆ ಇಂದು ಭೇಟಿ ಪರಿಶೀಲನೆ ನಡೆಸಿದರು. ಮಂಗಳವಾರ ನಗರದ ವಿವಿಧಡೆ 19 ಸಜೀವ ಬಾಂಬ್ ಗಳನ್ನು ವಶಪಡಿಸಿಕೊಂಡಿದ್ದ ಪೊಲೀಸರು ಇಂದು ಮುಖ್ಯಮಂತ್ರಿ ಆಗಮಿಸಿದ ಸಂದರ್ಭದಲ್ಲಿ ವರಾಚಾ ರಸ್ತೆಯಲ್ಲಿ ಮತ್ತೊಂದು ಸಜೀವ ಬಾಂಬ್ ನ್ನು ವಶಪಡಿಸಿಕೊಂಡಿದ್ದಾರೆ. ಈ ಮೂಲಕ ಗೋಧ್ರಾ ಹತ್ಯಾಕಾಂಡದ ಪ್ರತಿಕಾರ ತೀರಿಸಿಕೊಂಡಂತಾಗಿದೆ ಎನ್ನುವ ಉತ್ತರವನ್ನು ಬಿಜೆಪಿ ಸರ್ಕಾರಕ್ಕೆ ಉಗ್ರರು ರವಾನಿಸಿದಂತಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ನರೇಂದ್ರ ಮೋದಿ, ಉಗ್ರರನ್ನು ಮಟ್ಟ ಹಾಕಲು ಎಲ್ಲ ರಾಜ್ಯಗಳ ಒಗ್ಗೋಡಿ ಸಮರ್ಥವಾದ ಕಾರ್ಯತಂತ್ರ ರೂಪಿಸಬೇಕಾಗಿದೆ. ಉಗ್ರರು ಭಾರತದ ವಿರುದ್ಧ ಸಮರ ಸಾರಿದ್ದಾರೆ. ಅದನ್ನು ನಾವು ಸಮರ್ಥವಾಗಿ ಎದುರಿಸಬೇಕಾಗಿದೆ. ಅದಕ್ಕಾಗಿ ದೇಶದ ರಕ್ಷಣೆಗೆ ಎಲ್ಲರೂ ಕೂಡಿ ದುಷ್ಟರನ್ನು ಹತ್ತಿಕ್ಕುವ ಕೆಲಸ ಮಾಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ಸಾರ್ವಜನಿಕರು ಯಾವ ಕಾರಣಕ್ಕೂ ಭಯಬೀತರಾಗಬಾರದು. ಜನರ ರಕ್ಷಣೆಗೆ ಬೇಕಾಗಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ವದಂತಿಗಳಿಗೆ ಕಿವಿಗೊಡದೆ, ಎಂದಿನಂತೆ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ ಎಂದು ಮನವಿ ಮಾಡಿಕೊಂಡರು. ದೇಶದ ವಿರುದ್ಧ ಸಮರ ಸಾರಿರುವ ಉಗ್ರರ ಬಗ್ಗೆ ಸುಳಿವು ನೀಡಿದಲ್ಲಿ ಸರ್ಕಾರದ ವತಿಯಿಂದ 51 ಲಕ್ಷ ರು ಗಳ ಬಹುಮಾನವನ್ನು ನೀಡುವುದಾಗಿ ಇದೇ ಸಂದರ್ಭದಲ್ಲಿ ಘೋಷಿಸಿದರು.

ಬಾಂಬ್ ಹಾವಳಿಯಿಂದ ಜನತೆ ತತ್ತರಿಸಿದ್ದು ಆತಂಕದಲ್ಲಿ ಜೀವನ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಎಲ್ಲ ಕಾರ್ಯಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಮನೆಯಿಂದ ಹೊರಗೆ ತೆರಳಲು ಜನರು ಅಂಜುತ್ತಿದ್ದಾರೆ. ಕಳೆದ ಶನಿವಾರದಿಂದ ರಾಜ್ಯದಲ್ಲಿ ಪ್ರೇತ ಕಳೆ ಆವರಿಸಿದೆ. ಅಘೋಷಿತ ಬಂದ್ ನಿರ್ಮಾಣವಾಗಿದೆ. ಅಂಗಡಿ ಮುಂಗಟ್ಟುಗಳು, ಕಚೇರಿಗಳು. ಶಾಲಾ ಕಾಲೇಜುಗಳು, ಶಾಪಿಂಗ್ ಮಾಲ್ ಗಳು, ಬೃಹತ್ ಕೈಗಾರಿಕೆಗಳು ರಜೆ ನೀಡಿವೆ. ಸಾರ್ವಜನಿಕರು ಯಾವ ಕಾರಣಕ್ಕೂ ಭಯಪಡಬಾರದು ಎಂದು ಪೊಲೀಸರು ಮನವಿ ಮಾಡಿಕೊಳ್ಳುತ್ತಿದ್ದಾರೆ. ಭದ್ರತಾ ದೃಷ್ಠಿಯಿಂದ ರಾಜ್ಯದ ಪ್ರಮುಖ ನಗರಗಳಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪೊಲೀಸ್ ಪಡೆಗಳು ಪರಿಸ್ಥಿತಿಯನ್ನು ಹತೋಟಿಗೆ ತಗೆದುಕೊಂಡಿವೆ.

(ದಟ್ಸ್ ಕನ್ನಡ ವಾರ್ತೆ)
ಸೂರತ್ ನಲ್ಲಿ 19 ಸಜೀವ ಬಾಂಬ್ ಪತ್ತೆ
ಸೂರತ್ ನಲ್ಲಿ 10 ಜೀವಂತ ಬಾಂಬ್ ಗಳು ಪತ್ತೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X