ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯಾರ್ಥಿಗಳಿಗೆ ಕೇವಲ 400ರು.ಗೆ ಲ್ಯಾಪ್‌ಟಾಪ್: ಕೇಂದ್ರ

By Staff
|
Google Oneindia Kannada News

ನವದೆಹಲಿ, ಜು.30: ದೇಶದಾದ್ಯಂತ ವಿದ್ಯಾರ್ಥಿಗಳಿಗೆ ಸುಮಾರು 400ರು.ಗೆ ವಿಶೇಷವಾಗಿ ವಿನ್ಯಾಸಗೊಳಿಸಿದ ಲ್ಯಾಪ್‌ಟಾಪ್ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ರಾಜ್ಯ ಸಚಿವೆ ಡಿ.ಪುರಂದೇಶ್ವರಿ 'ಇ-ಇಂಡಿಯಾ 2008'ರ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಈ ವಿಷಯ ತಿಳಿಸಿದರು.

ಈ ಕಡಿಮೆ ವೆಚ್ಚದ ಲ್ಯಾಪ್‌ಟಾಪ್ ಕುರಿತು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಹಾಗೂ ಮದ್ರಾಸ್‌ನ ಭಾರತೀಯ ತಾಂತ್ರಿಕ ಸಂಸ್ಥೆ (ಐಐಟಿ)ಗಳಲ್ಲಿ ಸಂಶೋಧನೆ ನಡೆಸಲಾಗುತ್ತಿದೆ. ಈ ಎರಡು ತಾಂತ್ರಿಕ ಸಂಸ್ಥೆಗಳು ಕೈಜೋಡಿಸಿ ಶೈಕ್ಷಣಿಕ ಅಗತ್ಯ ಪೂರೈಸುವ ಲ್ಯಾಪ್‌‍ಟಾಪ್‌ಗಳನ್ನು 10 ಡಾಲರ್ ವೆಚ್ಚದಲ್ಲಿ ಸಿದ್ಧಪಡಿಸಲಿವೆ.

ವಿದ್ಯಾರ್ಥಿಗಳು ಮಾಹಿತಿ ಹಾಗೂ ಸಂಪರ್ಕ ತಂತ್ರಜ್ಞಾನಕ್ಕೆ ಹೆಚ್ಚುಹೆಚ್ಚು ತೆರೆದುಕೊಳ್ಳಬೇಕು ಎಂಬ ಉದ್ದೇಶದಿಂದ ಹಲವು ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಂಡಿದೆ. ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನಗಳು ಇಂದು ಶಿಕ್ಷಣ ವ್ಯವಸ್ಥೆಯ ಮೇಲೆ ತುಂಬ ಪ್ರಭಾವ ಬೀರುತ್ತಿವೆ. ಈ ತಂತ್ರಜ್ಞಾನಗಳನ್ನು ಸಮರ್ಪಕವಾಗಿ ಬಳಸಿಕೊಂಡು ಕಲಿಕೆ ಮತ್ತು ಬೋಧನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಕೈಗೊಳ್ಳಲಾಗುತ್ತದೆ ಎಂದು ಪುರಂದೇಶ್ವರಿ ತಿಳಿಸಿದರು.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X