ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಂಕಿತ ಭಯೋತ್ಪಾದಕನ ರೇಖಾಚಿತ್ರ ಬಿಡುಗಡೆ

By Staff
|
Google Oneindia Kannada News

Image of suspected terrorist of Ahmedabad blastsಅಹಮದಾಬಾದ್, ಜು. 30 : ದೇಶವನ್ನೇ ಅಲ್ಲೋಲಕಲ್ಲೋಲ ಮಾಡಿರುವ ಅಹಮದಾಬಾದ್ ಸರಣಿ ಸ್ಫೋಟದ ಕೃತ್ಯಕ್ಕೆ ಸಂಬಂಧಿಸಿದ ತನಿಖೆ ತೀವ್ರಗೊಂಡಿದೆ. ಸೂರತ್ ನಲ್ಲಿ ಕಾರ್ ಬಾಂಬ್ ಸ್ಫೋಟಕ್ಕೆ ಮುಖ್ಯ ಕಾರಣಕರ್ತನಾದ ಶಂಕಿತ ಭಯೋತ್ಪಾದಕನ ರೇಖಾಚಿತ್ರವನ್ನು ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ಇಲಾಖೆಗೆ ಕೆಲ ಮಾಹಿತಿಗಳು ಲಭ್ಯವಾದ ಹಿನ್ನಲೆಯಲ್ಲಿ ಅದರ ಆಧಾರ ಮೇಲೆ ಕಾರ್ಯ ನಿರ್ವಹಿಸುತ್ತಿದ್ದು, ಮತ್ತಷ್ಟು ಮಹತ್ವದ ಸಂಗತಿಗಳನ್ನು ಇಷ್ಟರಲ್ಲೇ ಬಹಿರಂಗಗೊಳ್ಳಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಹಾಗೂ ಸರ್ಕಾರದ ವಕ್ತಾರ ಜಯರಾಮನ್ ವ್ಯಾಸ್, ಘಟನೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳನ್ನು ಕಲೆಹಾಕುವಲ್ಲಿ ಪ್ರಯತ್ನ ಮುಂದುವರೆದಿದೆ. ಸದ್ಯಕ್ಕೆ ನಮಗೆ ಅನೇಕ ದಾಖಲೆಗಳು ಸಿಕ್ಕಿದ್ದು, ಭದ್ರತೆಯ ದೃಷ್ಟಿಯಿಂದ ಮಾಹಿತಿಯನ್ನು ಬಹಿರಂಗಗೊಳಿಸುತ್ತಿಲ್ಲ ಎಂದರು. ಸ್ಫೋಟ ಕೃತ್ಯ ಮಾಡಿದವರು ಯಾರು ಎನ್ನುವುದನ್ನು ನಿಖರವಾಗಿ ಸದ್ಯಕ್ಕೆ ಏನನ್ನೂ ಹೇಳುವುದಿಲ್ಲ. ತನಿಖೆಗೆ ಅಡಚಣೆಯುಂಟಾಗುವ ಕಾರಣದಿಂದಾಗಿ ಸುಮ್ಮವಾಗಿದ್ದೇವೆ ಎಂದ ಅವರು ಕೃತ್ಯ ಎಸಗಿದ ಸಂಘಟನೆ ಹೆಸರನ್ನು ಬಹಿರಂಗಗೊಳಿಸಲು ನಿರಾಕರಿಸಿದರು.

ಸ್ಫೋಟದಲ್ಲಿ ತೊಡಗಿರುವವರು ಕಳಿಸಿರುವ ಈ-ಮೇಲ್ ಮತ್ತು ಫೋನ್ ಸಂಭಾಷಣೆಯನ್ನು ಹುಡುಕಲಾಗಿದೆ. ಅಲ್ಲಿಂದ ಮಹತ್ವದ ವಿಷಯ ಹೊರಬಂದಿದ್ದು, ಸರಿಯಾದ ಮಾಹಿತಿ ಪಡೆದುಕೊಂಡ ನಂತರ ಅಧಿಕೃತವಾಗಿ ಎಲ್ಲವನ್ನು ವಿವರಿಸಲಾಗುವುದು ಎಂದು ಅವರು ಹೇಳಿದರು. ಕಳೆದ ಎರಡು ದಿನಗಳಿಂದ ಈ ಮೇಲ್ ಗಳು ನಾವಿ ಮುಂಬೈ ಮಾಧ್ಯಮವೊಂದರ ಮೂಲಕ ಬರತೊಡಗಿವೆ. ಅದರ ಮೇಲೆ ತೀವ್ರ ನಿಗಾ ವಹಿಸಲಾಗಿದ್ದು, ಆ ಸಂಸ್ಥೆಯೂ ಕೂಡಾ ಉಗ್ರರೊಂದಿಗೆ ಶಾಮೀಲಾಗಿರುವ ಸಂಶಯ ವ್ಯಕ್ತವಾಗುತ್ತಿದೆ ಎಂದು ಹೇಳಿದ್ದಾರೆ. ಸೋಮವಾರ ಪೊಲೀಸ್ ವಶಕ್ಕೆ ತಗೆದುಕೊಂಡಿರುವ ಶಂಕಿತ ಸಿಮಿ ಸಂಘಟನೆ ಕಾರ್ಯಕರ್ತ ಅಬ್ದುಲ್ ಹಲೀಂ ಈ ವರೆಗೂ ಎನನ್ನೂ ಬಾಯಿಬಿಟ್ಟಿಲ್ಲ. ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ ಎಂದು ಹೇಳಿದರು.

(ಏಜೆನ್ಸೀಸ್)

ಪೂರಕ ಓದಿಗೆ
ಸೂರತ್ ನಲ್ಲಿ 10 ಜೀವಂತ ಬಾಂಬ್ ಗಳು ಪತ್ತೆ
ಉಗ್ರವಾದ ಹೊಸ ಮುಖ ಇಂಡಿಯನ್ ಮುಜಾಹಿದ್ದೀನ್
ಅಪರಾಧಿ ನಿಗ್ರಹ ದಳಕ್ಕೆ ಸೆರೆಸಿಕ್ಕ 3 ಉಗ್ರರು
ಅಹಮದಾಬಾದ್ ಸ್ಫೋಟ ಸಿಮಿ ಉಗ್ರನ ಬಂಧನ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X