ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೂರತ್ ನಲ್ಲಿ 19 ಸಜೀವ ಬಾಂಬ್ ಪತ್ತೆ

By Staff
|
Google Oneindia Kannada News

ಸೂರತ್, ಜು. 30 : ಗುಜರಾತಿನ ವಾಣಿಜ್ಯ ನಗರಿ ಸೂರತ್ ಉಗ್ರರ ಕಪಿಮುಷ್ಠಿಯಲ್ಲಿ ಅಕ್ಷರಶಃ ಭಯಾನಕ ಸ್ಥಿತಿಯನ್ನು ಎದುರಿಸುತ್ತಿದೆ. ಮಂಗಳವಾರ ಒಟ್ಟು 18 ಸಜೀವ ಬಾಂಬ್ ಗಳನ್ನು ನಿಷ್ಕ್ರಿಯಗೊಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಮೂಲಕ ಅಹಮದಾಬಾದ್ ಸರಣಿ ಸ್ಫೋಟದಂತೆ ಸೂರತ್ ನಲ್ಲಿಯೂ ಸರಣಿ ಬಾಂಬ್ ಸ್ಫೋಟಿಸುವ ಉಗ್ರರು ಸಂಚನ್ನು ವಿಫಲಗೊಳಿಸುವಲ್ಲಿ ಸಫಲರಾಗಿದ್ದಾರೆ. ಬುಧವಾರ ಬೆಳಗ್ಗೆ ಕೂಡ ವರಚ್ಚಾ ಬಳಿ ಇನ್ನೊಂದು ಸಜೀವ ಬಾಂಬ್ ಪತ್ತೆ ಯಾಗಿರುವ ವರದಿ ಬಂದಿದೆ.

ಜನನಿಬಿಡ ಪ್ರದೇಶ ವರಾಚಾ ರಸ್ತೆಯೊಂದರಲ್ಲೇ ಒಟ್ಟು ಹತ್ತು ಸಜೀವ ಬಾಂಬ್ ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಹಿರಾ ಬಾಗ್ ವೃತ್ತದಲ್ಲಿ ಮೂರು, ಮಣಿ ಹಿರಾ ಬಜಾರ್ ಹಾಗೂ ಭಾವನಿ ವೃತ್ತದಲ್ಲಿ ತಲಾ ಎರಡು, ಮರಾಟವಾಡ ಮತ್ತು ವರಾಚಾ ಪ್ರದೇಶದಲ್ಲಿ ಮೂರು, ಲಭೇಶ್ವರ್ ಎರಡು ಹಾಗೂ ಸಂತೋಷಿ ನಗರ ಮತ್ತು ಮಾತಾವಾಡಿ ಎಂಬಲ್ಲಿ ತಲಾ ಒಂದೊಂದು ಬಾಂಬ್ ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.

ಮಾತಾವಾಡಿ ಪ್ರದೇಶದಲ್ಲಿ ನಿಷ್ಕ್ರಿಯಗೊಳಿಸಲಾದ ಬಾಂಬ್ ನ್ನು ಮರವೊಂದರ ಮೇಲೆ ಇಡಲಾಗಿತ್ತು. ಹಾಗೂ ಅನಾಥವಾಗಿ ಬಿದ್ದಿದ್ದ ಬ್ಯಾಗಿನಲ್ಲಿ ಇನ್ನೊಂದು ಬಾಂಬ್ ಇಡಲಾಗಿದ್ದ ನಿಷ್ಕ್ರಿಯಗೊಳಿಸಲಾಗಿದೆ. ಬಾಂಬ್ ನಿಷ್ಕ್ರಿಗೊಳಿಸಿಸಲು ಮಾಧ್ಯಮಗಳ ಸಹಕಾರ ನೀಡದವು. ರಾಜ್ಯಾದ್ಯಂತ ಭಾರಿ ಕಟ್ಟೆಚ್ಚರ ವಹಿಸಿಲಾಗಿದೆ. ಸಾಕಷ್ಟು ಸಂಖ್ಯೆ ಪೊಲೀಸರನ್ನು ನಿಯೋಜಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಕಣ್ಗಾವಲು ಇಡಲಾಗಿದೆ. ಯಾವುದೇ ಅಹಿತಕರ ಘಟನೆ ಸಂಭವಿಸಿದಂತೆ ಮುನ್ನಚ್ಚರಿಕೆ ಕ್ರಮಕೈಗೊಳ್ಳಲಾಗಿದೆ.ಸಾರ್ವಜನಿಕರು ಶಾಂತಿ ಕಾಪಾಡಬೇಕು ಎಂದು ಸೂರತ್ ಜಿಲ್ಲಾ ವರಿಷ್ಟ ಆರ್ಎಂಎಸ್ ಬ್ರಾರ್ ತಿಳಿಸಿದ್ದಾರೆ.

ಈ ಮಧ್ಯೆ ಮಹಾರಾಷ್ಟ್ರ ಮೂಲದ ಶಂಕಿತ ಇಬ್ಬರು ಉಗ್ರರನ್ನು ವಶಕ್ಕೆ ತಗೆದುಕೊಳ್ಳಲಾಗಿದ್ದು ವಿಚಾರಣೆ ನಡೆಸಲಾಗಿದೆ. ಈ ಇಬ್ಬರು ಶಂಕಿತರು ಸುರೆಂದರ್ ನಗರದ ದಾಗೇಂದ್ರ ಭಾಗ ಎಂಬಲ್ಲಿ ಪೊಲೀಸರ ಕೈಗೆ ಸಿಕ್ಕುಬಿದ್ದಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)
ಶಂಕಿತ ಭಯೋತ್ಪಾದಕನ ರೇಖಾಚಿತ್ರ ಬಿಡುಗಡೆ
ಸೂರತ್ ನಲ್ಲಿ 10 ಜೀವಂತ ಬಾಂಬ್ ಗಳು ಪತ್ತೆ
ಉಗ್ರವಾದ ಹೊಸ ಮುಖ ಇಂಡಿಯನ್ ಮುಜಾಹಿದ್ದೀನ್
ಅಪರಾಧಿ ನಿಗ್ರಹ ದಳಕ್ಕೆ ಸೆರೆಸಿಕ್ಕ 3 ಉಗ್ರರು
ಅಹಮದಾಬಾದ್ ಸ್ಫೋಟ ಸಿಮಿ ಉಗ್ರನ ಬಂಧನ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X