ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಹಮದಾಬಾದನಲ್ಲಿ ಜೀವಂತ ಬಾಂಬ್ ಪತ್ತೆ, ನಿಷ್ಕ್ರಿಯ

By Staff
|
Google Oneindia Kannada News

Two live bomb found in Ahmedabad, defused ಅಹ್ಮದಾಬಾದ್, ಜು. 27 : ಶುಕ್ರವಾರ ಬೆಂಗಳೂರಿನಲ್ಲಿ ಸರಣಿ ಸ್ಫೋಟದ ನಡೆದ ಬೆನ್ನಲ್ಲೇ ಗುಜರಾತ್‌ನ ಅಹಮದಾಬಾದ್ ನಗರದ 17 ಕಡೆ ಸರಣಿ ಬಾಂಬ್ ಸ್ಫೋಟ ಸಂಭಸಿದ ಪರಿಣಾಮ ಇದುವರೆಗೂ 39 ಮಂದಿ ಮೃತಪಟ್ಟಿದ್ದು ನೂರಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ನಡೆದಿದೆ.

ಶನಿವಾರ ಸಂಜೆ ಸುಮಾರು 6.45ರ ಹೊತ್ತಿಗೆ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಪ್ರತಿನಿಧಿಸುವ ಮಣಿನಗರ ಸೇರಿದಂತೆ ಹತ್ ಕೇಶ್ವರ್, ಜವಾಹರ್ ಚೌಕ್, ಸರ್ ಖೇಜ್, ನರೋಲ್ ಸರ್ಕಲ್, ಇಸಾನ್ ಪುರ್, ಜಲಾರಾಂ ಪ್ಲಾಜಾ, ಅಮರೈವಾಡಿ, ಚಕ್ಲಾ, ಎಲ್.ಜಿ. ಆಸ್ಪತ್ರೆ, ಗೋವಿಂದವಾಡಿ, ಸಾರಂಗಪುರ, ಕಿಶನ್ ಪುರ್,ನರೋದ ಪಟಿಯಾ, ಥಕ್ಕರ್ ನಗರಗಳಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟಗಳು ಬಹುತೇಕ ನಗರದ ಪೂರ್ವ ಭಾಗದ ಮೇಲ್ಮಧ್ಯಮ ವರ್ಗದವರು ವಾಸಿಸುವ ಪ್ರದೇಶಗಳಲ್ಲಿ ಸಂಭವಿಸಿವೆ.

ಈ ಸ್ಫೋಟಗಳ ಪೈಕಿ ಒಂದು ಎಎಂಪಿಎಸ್ ಬಸ್ಸೊಳಗೆ ಹಾಗೂ ಎಎನ್ ಜಿ ಬಸ್ಸಿನ ಒಳಗೆ ಸಂಭವಿಸಿವೆ. ವಾರಾಂತ್ಯದಲ್ಲಿ ಜನದಟ್ಟಣೆ ಇರುವ ಪ್ರದೇಶಗಳನ್ನು ಆಯ್ದು ಟಿಫಿನ್ ಡಬ್ಬಿಗಳಲ್ಲಿ ಮತ್ತು ,ಸೈಕಲ್ ಗಳಲ್ಲಿ ಬಾಂಬ್ ಇಡಲಾಗಿತ್ತು ಎಂದು ಪ್ರಾಥಮಿಕ ವರದಿಗಳು ಡೃಢಪಡಿಸಿವೆ.
ನಗರದ ವಿವಿಧಡೆ ಸಂಭವಿಸಿರುವ ಸ್ಫೋಟ ಕೃತ್ಯವನ್ನು ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಹೊತ್ತುಕೊಂಡಿದೆ. ಈ ಮಧ್ಯೆ ಗುಜರಾತ್ ಸರ್ಕಾರ ಉಗ್ರರನ್ನು ಪತ್ತೆಹಚ್ಚಲು ಎನ್ ಎಸ್ ಜಿಪಿ ವಿಶೇಷ ತಂಡವನ್ನು ಕಳುಹಿಸಲಾಗಿದೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X