ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಂಬ್ ನಿಷ್ಕ್ರಿಯಗೊಳಿಸಿದ ಸುಕುಮಾರ್‌ಗೆ ಬಹುಮಾನ

By Staff
|
Google Oneindia Kannada News

Sukumar member of State Bomb Disposal Squadಬೆಂಗಳೂರು, ಜು. 27 : ಜೀವವನ್ನೇ ಪಣವಾಗಿಟ್ಟು ನಗರದ ಫೋರಂ ಮಾಲ್ ಬಳಿ ಇಡಲಾಗಿದ್ದ ಜೀವಂತ ಬಾಂಬ್ ವೊಂದನ್ನು ನಿಷ್ಕ್ರಿಯಗೊಳಿಸಿದ ಬಾಂಬ್ ನಿಷ್ಕ್ರಿಯ ದಳದ ಸುಕುಮಾರ್ ಅವರಿಗೆ ರಾಜ್ಯ ಸರ್ಕಾರ ಒಂದು ಲಕ್ಷ ರುಪಾಯಿಗಳ ಬಹುಮಾನ ನೀಡಿ ಅಭಿನಂದಿಸಿದೆ. ಜೀವದ ಹಂಗನ್ನು ತೊರೆದು ಬಾಂಬ್ ನಿಷ್ಕ್ರಿಯಗೊಳಿಸಿದ ಸುಕುಮಾರ್ ಅವರ ಸಾಹಸವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಕ್ತಕಂಠದಿಂದ ಪ್ರಶಂಸಿದರು.

ಶುಕ್ರವಾರ ನಗರದ ವಿವಿಧೆಡೆ ಸರಣಿ ಬಾಂಬ್ ಸ್ಫೋಟ ಸಂಭವಿಸಿದ್ದು, ಒಬ್ಬರು ಮೃತಪಟ್ಟು ಅನೇಕರಿಗೆ ಗಾಯವಾದ ಭೀಕರ ಘಟನೆ ಜರುಗಿತ್ತು. ಈ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡ ಸರ್ಕಾರ ನಗರಾದ್ಯಂತ ಭಾರಿ ಬಿಗಿ ಬಂದೋಬಸ್ತ್ ವಹಿಸಿತ್ತು. ಕಳೆದ ಎರಡು ದಿನಗಳಿಂದ ಫೋರಂ ಮಾಲ್ ಬಳಿ ಇಡಲಾಗಿದ್ದ ಜೀವಂತ ಬಾಂಬ್ ನ್ನು ಜೀವದ ಹಂಗನ್ನು ತೊರೆದು ಮತ್ತೊಂದು ಅನಾಹುತವನ್ನು ತಪ್ಪಿಸಿದ ಸುಕುಮಾರ ಎಂಬುವವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 1 ಲಕ್ಷ ರು.ಗಳನ್ನು ಬಹುಮಾನವಾಗಿ ನೀಡಿದೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಸುಕುಮಾರ್ ಅವರ ಸಾಹಸವನ್ನು ಮೆಚ್ಚುವಂಥಹದ್ದು, ಜೀವದ ಹಂಗು ಬಿಟ್ಟು ಜೀವಂತ ಬಾಂಬ್ ನ್ನು ನಿಷ್ಕ್ರಿಯಗೊಳಿಸಿದ್ದು ದೊಡ್ಡ ಸಾಹಸ. ಆತನನ್ನು ಸಾಹಸಕ್ಕೆ ಎಷ್ಟು ಅಭಿನಂದನೆ ಸಲ್ಲಿಸಿದರೂ ಸಾಲದು. ನಗರದಲ್ಲಿ ಇನ್ನೊಂಜು ಅನಾಹುತ ಸಂಭವಿಸಿ ಅನೇಕರ ಸಾವು ನೋವುಗಳಿಗೆ ಕಾರಣವಾಗುತ್ತಿದ್ದ ಅನಾಹುತವನ್ನು ತಪ್ಪಿಸಿದ್ದು ಪ್ರಶಸಂನೀಯ. ಸುಕುಮಾರ್ ಅವರ ಸಮಯ ಪ್ರಜ್ಞೆ ಮತ್ತು ಸಾಹಸಕ್ಕೆ ಸರ್ಕಾರದ ವತಿಯಿಂದ ಬಹಮಾನ ನೀಡುತ್ತಿರುವುದಾಗಿ ಹೇಳಿದರು.

ಇದು ಉಗ್ರರ ಕೃತ್ಯವಾಗಿವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ರಾಜ್ಯದಾದ್ಯಂತ ಭಾರಿ ಕಟ್ಟೆಚ್ಚರ ವಹಿಸಿಲಾಗಿದೆ. ಜನತೆ ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಎಂದಿನಂತೆ ತಮ್ಮ ಕಾರ್ಯಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕೆಂದು ಮುಖ್ಯಮಂತ್ರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.

(ದಟ್ಸ್‍ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X