ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಸರಣಿ ಸ್ಫೋಟ ಎಲ್ಲಿ, ಯಾವಾಗ?

By Staff
|
Google Oneindia Kannada News

Bangalore police searching for cluesಬೆಂಗಳೂರು, ಜು.25: ಬೆಂಗಳೂರಿನಲ್ಲಿ ನಡೆದಿರುವ ಸರಣಿ ಸ್ಪೋಟಕ್ಕೆ ಸಂಬಂಧಿಸಿದಂತೆ ಯಾರು ಕಾರಣರು, ಸ್ಫೋಟ ನಡೆದದ್ದು ಎಲ್ಲಿ, ಸ್ಫೋಟ ಯಾವಾಗ ಸಂಭವಿಸಿತು ಮುಂತಾದ ಪ್ರಶ್ನೆಗಳಿಗೆ ಇಲ್ಲಿ ದೆ ಉತ್ತರ.

* ಸುಬ್ರಹ್ಮಣ್ಯನಗರ ಪೊಲೀಸರ ವಶದಲ್ಲಿ ಮೂವರು ಶಂಕಿತರು.
*ಗೋಪಾಲನ್ ಮಾಲ್‌ ಬಳಿಯ ಟ್ರಾನ್ಸ್‌ಫಾರ್ಮರ್ ಬಳಿ ಇಟ್ಟಿದ್ದ ಮತ್ತೊಂದು ಬಾಂಬ್ ಸ್ಫೋಟ. ಶಾಂತಿನಗರದ ಬಳಿ ಕೂಡ ಸ್ಫೋಟದ ಮಾಹಿತಿ.
* ಸ್ಫೋಟಕ್ಕೆ ಬಳಸಿದ ರಾಸಾಯನಿಕಗಳು ಒಂದು ಅಥವಾ ಎರಡು ಗ್ರೇನೈಡ್‌ಗೆ ಸಮನಾಗಿದೆ. ಸ್ಫೋಟಕ್ಕೆ ಟೈಮರ್ ಮತ್ತು ಮೊಬೈಲ್ ಬಳಕೆ.
*ಯುರಿಯಾ, ಅಮೋನಿಯಂ ನೈಟ್ರೈಟ್ ರಾಸಾಯನಿಕ ಬಳಕೆ ಮಾಡಲಾಗಿದೆ.
*ಮಡಿವಾಳದಲ್ಲಿ 1:20 ಕ್ಕೆ, ನಾಯಂಡನಹಳ್ಳಿ ಪಂತರಪಾಳ್ಯ1:25, ಆಡುಗೋಡಿ 1:40, ಕೋರಮಂಗಲ ಈಗಲ್ ಸ್ಟ್ರೀಟ್ 2:10,ಮಲ್ಯ ಆಸ್ಪತ್ರೆ 2:25, ಲಾಂಗ್ ಫೋರ್ಡ್ ರಸ್ತೆ 2:35 ಗಂಟೆಗೆ ಸ್ಫೋಟ.
*ಕಚ್ಚಾ ಸ್ಫೋಟಕಗಳನ್ನು ಬಳಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಕಮೀಷನರ್ ಎಂ.ಆರ್.ಪೂಜಾರಿ ತಿಳಿಸಿದರು.
*ಕಡಿಮೆ ತೀವ್ರತೆಯಿಂದ ಕೂಡಿದ ಸ್ಪೋಟ 3 ಮಂದಿಯನ್ನು ಬಲಿತೆಗೆದುಕೊಂಡು 15 ರಿಂದ 20ರಷ್ಟು ಜನರನ್ನು ತೀವ್ರವಾಗಿ ಗಾಯಗೊಳಿಸಿದೆ. ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ.
*3 ಶ್ವಾನದಳ, 4 ಕ್ಕೂ ಹೆಚ್ಚು ಬಾಂಬ್ ನಿಷ್ಕ್ರಿಯ ದಳದವರು ಕಾರ್ಯನಿರತ.
* ಸ್ಫೊಟದ ಸ್ಥಳಕ್ಕೆ ಸಚಿವರಾದ ಕಟ್ಟಾಸುಬ್ರಮಣ್ಯ ನಾಯ್ಡು, ಶೋಭಾ ಕರಂದಾಜ್ಲೆ ಭೇಟಿ.
*ಸೇಂಟ್ ಜಾನ್ ಆಸ್ಪತ್ರೆ ಬಸ್ ನಿಲ್ದಾಣದಲ್ಲಿ ನಡೆದ ಸ್ಫೋಟದ ತೀವ್ರತೆಗೆ ಸನಿಹದಲ್ಲೇ ಇದ್ದ ಅಂಗಡಿಯೊಂದರ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ.
*ಸ್ಪೋಟ ಪ್ರಕರಣವನ್ನ್ನುಗಮನಿಸಿದಾಗ ಸಿಮಿ, ಹುಜಿ, ಲಷ್ಕರ್ ಇ ತೋಯ್ಬಾ ಕೈವಾಡದ ಶಂಕೆ.
*ಬೆಂಗಳೂರಿನಲ್ಲಿ ಉಂಟಾದ ಸರಣಿ ಬಾಂಬ್ ಸ್ಪೋಟದಿಂದ ಮುಂಬೈ ಷೇರುಪೇಟೆ ಸೂಚ್ಯಂಕ ಶೇ.3.5ರಷ್ಟು ಕುಸಿಯಿತು.
*ಸ್ಫೋಟದ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಎಸ್‌ಎಂಎಸ್ ಕಳುಹಿಸಬೇಕಾದ ದೂರವಾಣಿ ಸಂಖ್ಯೆ 98440 51677.
*ಸರಣಿ ಸ್ಫೋಟ ಸಂಭವಿಸಿದ ಹಿನ್ನಲೆಯಲ್ಲಿ ಬೆಂಗಳೂರು ನಗರದಲ್ಲಿ ತೀವ್ರ ಕಟ್ಟೆಚರ ವಹಿಸಲಾಗಿದೆ.
*ಸಾಫ್ಟ್‌ವೇರ್ ಕಂಪನಿಗಳಿಗೆ ಮಧ್ಯಾಹ್ನದ ನಂತರ ರಜೆ ಘೋಷಿಸಲಾಯಿತು.
*ಬೆಂಗಳೂರಿನಲ್ಲಿ ದೂರವಾಣಿ ಸಂಪರ್ಕ ವ್ಯತ್ಯಯ. ಮೊಬೈಲ್ ನೆಟ್ ವರ್ಕ್ ಸ್ಥಗಿತ
*ಸ್ಫೋಟ ನಡೆದ ಸ್ಥಳದಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತ. ಸಂಜೆ ವೇಳೆಗೆ ತಿಳಿಯಾಯಿತು.
*ಸ್ಫೋಟಕ್ಕೆ ಕೋಲಾರ ಸೇರಿದಂತೆ ಅನೇಕ ಕಡೆ ಪ್ರತಿಭಟನೆ.

(ದಟ್ಸ್‌ಕನ್ನಡ ವಾರ್ತೆ)

ಮತ್ತಷ್ಟು ಸುದ್ದಿಗಳು
ಸ್ಪೋಟದ ಹಿನ್ನಲೆಯಲ್ಲಿ ಸಂಜೆ ತುರ್ತು ಸಂಪುಟ ಸಭೆ
ಬೆಂಗಳೂರಿಗರಿಗೆ ಇಂದು ಕರಾಳ ಶುಕ್ರವಾರ
ಸ್ಪೋಟಗಳ ಹಿಂದೆ ಭಯೋತ್ಪಾದಕರ ಕೈವಾಡ :ಬಿದರಿ
ಬೆಂಗಳೂರಿನಲ್ಲಿ 3 ಕಡೆ ನಿಗೂಢ ಸ್ಫೋಟ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X