ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಕ್ಷದಿಂದ ಸೋಮನಾಥ್ ಚಟರ್ಜಿಗೆ ಗೇಟ್‌ಪಾಸ್

By Staff
|
Google Oneindia Kannada News

ನವದೆಹಲಿ, ಜು. 23 : ಪಕ್ಷದ ಶಿಸ್ತನ್ನು ಉಲ್ಲಂಘಿಸಿದ ಆರೋಪದ ಮೇಲೆ ಸಿಪಿಐ(ಎಂ) ಸಂಸದ ಹಾಗೂ ಲೋಕಸಭಾಧ್ಯಕ್ಷ ಸೋಮನಾಥ್ ಚಟರ್ಜಿ ಅವರನ್ನು ಪಕ್ಷದಿಂದ ಇಂದು ಉಚ್ಚಾಟಿಸಲಾಗಿದೆ.

ಯುಪಿಎ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಎಡಪಕ್ಷಗಳು ಹಿಂತೆಗೆದಕೊಂಡ ನಂತರ ಲೋಕಸಭಾಧ್ಯಕ್ಷ ಸ್ಥಾನವನ್ನು ತ್ಯಜಿಸಿ ಎಂದು ಪಕ್ಷದ ಮುಖಂಡರು ಅವರಿಗೆ ಸೂಚಿಸಿದ್ದರು. ಆದರೆ ಚಟರ್ಜಿ ಅದಕ್ಕೆ ನಿರಾಕರಿಸಿದ ಹಿನ್ನಲೆಯಲ್ಲಿ ಪಕ್ಷದ ಸಂವಿಧಾನ ಉಲ್ಲಂಘನೆ ಆರೋಪ ಮೇಲೆ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ಸಿಪಿಐ(ಎಂ) ಪಾಲಿಟ್ ಬ್ಯೂರೋ ಮುಖ್ಯಸ್ಥ ಬಿಮನ್ ಬೋಸ್ ಸುದ್ದಿಗಾರರಿಗೆ ಬುಧವಾರ ತಿಳಿಸಿದ್ದಾರೆ.

ಜು.22 ರಂದು ವಿಶ್ವಾಸಮತ ದಿನವನ್ನು ನಿಗದಿ ಮಾಡಲಾಯಿತು. ಚಟರ್ಜಿ ಅವರಿಗೂ ಕೂಡಾ ಆ ಸಮಯದ ಒಳಗೆ ರಾಜೀನಾಮೆ ನೀಡಬೇಕು ಎಂದು ಹೇಳಲಾಗಿತ್ತು. ಜು.22 ರೊಳಗೆ ಪಕ್ಷದ ಪರವಾಗಿ ವಿಶ್ವಾಸಮತದ ವಿರುದ್ಧ ಮತ ಚಲಾಯಿಯಬೇಕು ಎಂದು ಮೊದಲೇ ಸೂಚಿಸಲಾಗಿತ್ತು. ಒಂದು ವೇಳೆ ಅವರು ಜು.22 ರೊಳಗೆ ಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ ಪಕ್ಷದಿಂದ ಉಚ್ಛಾಟನೆ ಮಾಡುವ ನಿರ್ಧಾರವನ್ನು ವಾರದ ಹಿಂದೆಯೇ ತೆಗೆದುಕೊಳ್ಳಲಾಗಿತ್ತು ಎಂದು ಅವರು ವಿವರಿಸಿದರು.

ಸೋಮನಾಥ್ ಚಟರ್ಜಿ ಅವರಿಗೆ ಲೋಕಸಭಾಧ್ಯಕ್ಷ ಸ್ಥಾನವನ್ನು ತ್ಯಜಿಸಿ ಎಂದು ಅನೇಕ ಒತ್ತಡಗಳು ಬಂದಿದ್ದವು. ಆದರೆ ಚಟರ್ಜಿ ಸಭಾಧ್ಯಕ್ಷ ಸ್ಥಾನವನ್ನು ತ್ಯಜಿಸುವುದಾದರೆ, ಸಂಸದ ಸ್ಥಾನಕ್ಕೂ ರಾಜೀನಾಮೆ ನೀಡವೆ ಎಂದು ಎಚ್ಚರಿಕೆ ನೀಡಿದ್ದರು. ವಿಶ್ವಾಸಮತದ ಮುಂಚೆ ರಾಜೀನಾಮೆ ನೀಡದರೆ ಒಂದು ಮತ ಹಾಳಾಗಲಿದೆ ಎಂದು ಅರಿತ ಪಾಲಿಟ್ ಬ್ಯೂರೋ ವಿಶ್ವಾಸಮತದ ನಂತರ ಶಿಸ್ತು ಉಲ್ಲಂಘನೆ ಆರೋಪದ ಮೇಲೆ ಚಟರ್ಜಿ ಅವರನ್ನು ಉಚ್ಛಾಟಿಸಿದ್ದಾರೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X