ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಬ್ರಿ ಮಸೀದಿ ಧ್ವಂಸಕ್ಕೆ ಆಡ್ವಾಣಿ ಕಾರಣರಲ್ಲವೆ?: ಪ್ರಧಾನಿ

By Staff
|
Google Oneindia Kannada News

PM's reply to the trust vote discussionನವದೆಹಲಿ, ಜು.23: ಅಣು ಒಪ್ಪಂದದ ಕೋಲಾಹಲದಲ್ಲಿ ಇಡೀ ಲೋಕಸಭೆಮುಳುಗಿ,ಪ್ರಧಾನಿ ಮನಮೋಹನ್ ಸಿಂಗ್ ಎರಡನೇ ದಿನದ ವಿಶೇಷ ಅಧಿವೇಶನದಲ್ಲಿ(ಜು.22) ಪ್ರತಿಪಕ್ಷಗಳ ಗಲಾಟೆಯ ನಡುವೆ ಮಾತನಾಡಲು ಸಾಧ್ಯವಾಗಲಿಲ್ಲ. ಕ್ಷೀಣ ಸ್ವರದ ಪ್ರಧಾನಿ ಮಾತನಾಡಲು ಯತ್ನಿಸಿ ಕೊನೆಗೆ ತಮ್ಮ ಆರು ಪುಟಗಳ ಭಾಷಣದ ಪ್ರತಿಯನ್ನು ಲೋಕಸಭಾಧ್ಯಕ್ಷ ಸೋಮನಾಥ್ ಚಟರ್ಜಿ ಅವರಿಗೆ ಸಲ್ಲಿಸಿ ಮುಗುಮ್ಮಾಗಿ ಕುಳಿತುಬಿಟ್ಟರು. ಪ್ರಧಾನಿ ಭಾಷಣದ ಒಟ್ಟಾರೆ ಸಾರಾಂಶ ಇಲ್ಲಿದೆ.

ತಮ್ಮ ಗುರಿ ಸಾಧನೆಗಾಗಿ ಆಡ್ವಾಣಿ 3 ಸಲ ಯುಪಿಎ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸಿದರು. ಆದರೆ 3 ಸಲವೂ ಅವರ ಜ್ಯೋತಿಷಿಗಳು ಆಡ್ವಾಣಿ ಅವರ ದಾರಿ ತಪ್ಪಿಸಿದರು. ಮತ್ತೊಬ್ಬರ ಮೇಲೆ ಆರೋಪ ಹೊರಿಸುವ ಮೊದಲು ಆಡ್ವಾಣಿ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ನಾನು ಈ ದೇಶ ಕಂಡ ಅತ್ಯಂತ ದುರ್ಬಲ ಪ್ರಧಾನಿ ಎಂದು ಹೇಳಿ ಬಳಸಬಾರದ ಪದಗಳನ್ನು ಬಳಸಿ ಪ್ರಧಾನಿ ಹುದ್ದೆಗೆ ಅವಮಾನ ಮಾಡಿದರು. ಈ ಇಳಿ ವಯಸ್ಸಿನಲ್ಲಿ ತಮ್ಮ ಚಿಂತನೆಗಳನ್ನು ಬದಲಿಸಿಕೊಳ್ಳಿ ಎಂದು ನಾನು ಅವರಿಗೆ ಹೇಳುವುದಿಲ್ಲ. ಈ ದೇಶದ ಹಾಗೂ ಅವರ ಹಿತದೃಷ್ಟಿಯಿಂದ ಹೇಳುತ್ತಿದ್ದೇನೆ; ಮೊದಲು ಅವರು ತಮ್ಮ ಜ್ಯೋತಿಷಿಗಳನ್ನು ಬದಲಾಯಿಸಿಕೊಳ್ಳಬೇಕು. ಆಗಷ್ಟೇ ಅವರಿಗೆ ಭವಿಷ್ಯತ್ತಿನ ನಿಖರ ಲೆಕ್ಕಾಚಾರ ಸಿಗುತ್ತದೆ.

ಸಂಸತ್ತಿನ ಮೇಲೆ ಉಗ್ರರು ದಾಳಿ ಮಾಡಿದಾಗ ನಿದ್ದೆ ಮಾಡುತ್ತಿದ್ದ ಗೃಹ ಸಚಿವರನ್ನು ಈ ದೇಶ ಕ್ಷಮಿಸೀತೇ? ಏನೆಲ್ಲಾ ಅವಾಂತರಗಳಿಗೆ ಕಾರಣವಾದ ಬಾಬ್ರಿ ಮಸೀದಿ ಧ್ವಂಸವಾಗುತ್ತಿದ್ದರೆ ಕಣ್ಣು ಮುಚ್ಚಿ ಕುಳಿತು ಅದರ ನಂತರದ ಘಟನೆಗಳಿಗೆ ಒಂಟಿ ಹಸ್ತದಿಂದ ಕುಮ್ಮಕ್ಕು ನೀಡಿದ ವ್ಯಕ್ತಿಯನ್ನು ಈ ದೇಶ ಕ್ಷಮಿಸೀತೇ?ತಾವು ಮಾಡಿದ ಪಾಪಗಳನ್ನು ಆಡ್ವಾಣಿ ತೊಳೆದುಕೊಳ್ಳಲು ಹಠಾತ್ತನೆ ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ನಿರ್ಣಯಿಸಿದರು. ಅಲ್ಲಿ ಜಿನ್ನಾರ ಯಾವ ಹೊಸ ಸದ್ಗುಣಗಳು ಅವರ ಕಣ್ಣಿಗೆ ಬಿದ್ದವೋ?ಸ್ವಂತ ಪಕ್ಷ, ಆರೆಸ್ಸೆಸ್‌ನಲ್ಲಿನ ಅವರ ಗುರುಗಳೇ ಈ ವಿಷಯದಲ್ಲಿ ಆಡ್ವಾಣಿ ಅವರನ್ನು ಹಣ್ಣುಗಾಯಿ ನೀರುಗಾಯಿ ಮಾಡಿದವು. ಒಂದು ಕಡೆ ಹೊತ್ತಿ ಉರಿಯುತ್ತಿರುವ ಗುಜರಾತ್‌ನಲ್ಲಿ ಮುಗ್ಧರು ಆಹುತಿಯಾಗುತ್ತಿದ್ದರೆ...ಬೆಚ್ಚಗೆ ನಿದ್ದೆ ಮಾಡುತ್ತಿದ್ದ ಗೃಹ ಮಂತ್ರಿಯನ್ನು ನಮ್ಮ ದೇಶ ಮೆಚ್ಚುತ್ತದಾ? ಕಂದಾಹಾರ್‌ಗೆ ವಿಮಾನ ಅಪಹರಣ ಮಾಡಿದಾಗ ಅವರೇನು ಮಾಡುತ್ತಿದ್ದರು?

ನಾನು ಸದಾ ಗುಲಾಮನಂತೆ ಇರಬೇಕು, ಎಲ್ಲದಕ್ಕೂ ಕೋಲೆ ಬಸವನ ತರಹ ತಲೆಯಾಡಿಸುತ್ತಿರ ಬೇಕು ಎಂದು ಎಡಪಕ್ಷಗಳ ನಾಯಕರು ಬಯಸುತ್ತಿದ್ದರು. ಅಣು ಒಪ್ಪಂದದ ಮಾತುಕತೆಗೆ ಅವಕಾಶ ಮಾಡಿಕೊಡಲಿಲ್ಲ. ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಸಂಸತ್ತಿಗೆ ಬರುತ್ತೇನೆ ಎಂದು ಹೇಳಿದರೂ ನನ್ನ ಮಾತನ್ನ್ನುಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಅವರಿರಲಿಲ್ಲ. ಅಣು ಒಪ್ಪಂದದ ಪ್ರತಿ ಹೆಜ್ಜೆ ಮೇಲೂ ತಮ್ಮ ಹಿಡಿದ ಸಾಧಿಸಲು ಅವರು ಬಯಸುತ್ತಿದ್ದರು. ನಾವು ರಹಸ್ಯ ಒಪ್ಪಂದ ಮಾಡಿಕೊಳ್ಳುತ್ತಿದ್ದೇವೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. 123 ಒಪ್ಪಂದ ಹೊರತಾಗಿ ಬೇರೆ ಯಾವ ರೀತಿಯ ರಹಸ್ಯ ಒಪ್ಪಂದವೂ ಇಲ್ಲ. ಹೈಡ್ ಕಾಯಿದೆಗೆ ಸಹಿ ಹಾಕದಿದ್ದರೂ ಭಾರತದೊಂದಿಗೆ ಪರಮಾಣು ಒಪ್ಪಂದ ಮಾಡಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸುತ್ತದೆ. ಅಲ್ಲಿರುವ ಕೆಲವು ಅಂಶಗಳು ನಮ್ಮ ವಿದೇಶಾಂಗ ನೀತಿಗೆ ಯಾವುದೇ ಧಕ್ಕೆ ತರುವುದಿಲ್ಲ. ಭಾರತ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಲು ಅವಶ್ಯಕವಾದ ದೊಡ್ಡ ನಿರ್ಣಯ ತೆಗೆದುಕೊಂಡಿದಕ್ಕೆ ಯುಪಿಎ ಸರ್ಕಾರ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ನಿಲ್ಲಲಿದೆ.

(ದಟ್ಸ್‌ಕನ್ನಡ ವಾರ್ತೆ)

ವಿಶ್ವಾಸ ಮತ : ಯುಪಿಎಗೆ ನಿಚ್ಚಳ ಗೆಲುವು
7.15ಕ್ಕೆ ವಿಶ್ವಾಸಮತ ಪ್ರದರ್ಶನ: ಸ್ಪೀಕರ್
ಲೋಕಸಭೆಯಲ್ಲಿ ಓಟಿಗಾಗಿ ಕಂತೆಕಂತೆ ನೋಟು!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X