• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಡಪಕ್ಷಗಳಿಗೆ ಕಿವಿಹಿಂಡಿದ ಪ್ರಣಬ್ ಮುಖರ್ಜಿ

By Staff
|

Pranab during the sessionನವದೆಹಲಿ, ಜು. 21 : ಎಡಪಕ್ಷದ ನಾಯಕರೇ ಮತ್ತೆ ಇತಿಹಾಸವನ್ನು ಮರುಕಳಿಸಬೇಡಿ. 1978 ಮತ್ತು 88 ರಲ್ಲಿ ಬಿಜೆಪಿ ಪರವಾಗಿ ನಿಂತ ನಿಮಗೆ ಎಂಥ ಅನುಭವವಾಗಿದೆ ಎನ್ನುವುದನ್ನು ಹೇಳಬೇಕಿಲ್ಲ. ಆದ್ದರಿಂದ ಮಂಗಳವಾರ ನಡೆಯುವ ವಿಶ್ವಾಸಮತದಲ್ಲಿ ಯುಪಿಎ ವಿರೋಧವಾಗಿ ಮತ ಚಲಾಯಿಸಿ ಮತ್ತೊಮ್ಮೆ ಇನ್ನೊಂದು ಇತಿಹಾಸಕ್ಕೆ ಕಾರಣರಾಗಬೇಡಿ ಎಂದು ಕೇಂದ್ರದ ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ಎಡಪಕ್ಷಗಳಿಗೆ ಇಂದು ಕಿವಿಮಾತು ಹೇಳಿದರು.

ಸಂಸತ್ತಿನಲ್ಲಿ ವಿಶ್ವಾಸಮತ ಅಧಿವೇಶನದಲ್ಲಿ ಸದನವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ನಿಮಗೆ ಈಗಾಗಲೇ ಬಿಜೆಪಿ ಬಲವಾದ ಹೊಡೆತ ಕೊಟ್ಟಿದೆ. ಅದನ್ನು ನೆನಪಿಸಿಕೊಳ್ಳಿ ಎಂದರು. ಪರಮಾಣು ಒಪ್ಪಂದವನ್ನು ಯುಪಿಎ ಸರ್ಕಾರ ಏಕಾಏಕಿ ತೆಗೆದುಕೊಂಡಿದ್ದಲ್ಲ. ಕಾನೂನು ರೀತಿಯಲ್ಲಿ ಸಂವಿಧಾನದ ಮೂಲಕ ಅಮೆರಿಕದೊಂದಿಗೆ ಅಣು ಒಪ್ಪಂದಕ್ಕೆ ಮುಂದಾಗಿರುವುದು. ಇದರಿಂದ ಆಗುವ ಲಾಭವನ್ನು ಸಹ ನಾವು ಎಲ್ಲಿರಿಗೂ ತಿಳಿಸಿದ್ದೇವೆ ಎಂದು ಒಪ್ಪಂದವನ್ನು ಪ್ರಣವ್ ಮುಖರ್ಜಿ ಬಲವಾಗಿ ಸಮರ್ಥಿಸಿಕೊಂಡರು.

ಅಣು ಒಪ್ಪಂದವನ್ನು ಸರ್ಕಾರ ಅಲ್ಪ ಮತದಲ್ಲಿದ್ದಾಗ ಕೈಗೊಂಡ ನಿರ್ಣಯವಲ್ಲ ಎಂದು ಸ್ಪಷ್ಟಪಡಿಸಿದ ಅವರು, ಸರ್ಕಾರದ 273 ಸದಸ್ಯರು ಸಹಿ ಹಾಕಿರುವ ಪತ್ರ ನಮ್ಮ ಬಳಿ ಇದೆ. ಸದನ ಅಪೇಕ್ಷಿಸಿದರೆ ಅದನ್ನು ತೋರಿಸಲು ಸಿದ್ಧ. ಅದರೆ ಯುಪಿಎ ಸರ್ಕಾರವನ್ನು ಉರುಳಿಸುವ ಕೆಲವು ಷಡ್ಯಂತ್ರಗಳು ಕೆಲ ದಿನಗಳ ಹಿಂದೆ ಅವ್ಯಾಹತವಾಗಿ ನಡೆಯತೊಡಗಿವೆ. ಒಂದು ಮಾತಂತೂ ಸತ್ಯ, ಯುಪಿಎ ಸರ್ಕಾರ ಅದೆಲ್ಲವನ್ನೂ ಸುಳ್ಳು ಮಾಡಿ ಗೆಲುವು ಸಾಧಿಸಲಿದೆ. ಆ ಮೂಲಕ ಅಣು ಒಪ್ಪಂದಕ್ಕೆ ಅಬಾಧಿತವಾಗಿ ಮುಂದುವರೆಸಲಿದೆ ಎಂದು ಅವರು ಹೇಳಿದರು.

ಅಣು ಒಪ್ಪಂದದಿಂದ ದೇಶಕ್ಕೆ ಮಾರಕ ಎಂದು ಹುಯಿಲೆಬ್ಬಿಸಲಾಗುತ್ತಿದೆ. ಕೆಲ ವ್ಯಕ್ತಿಗಳು ಸಾರ್ವಜನಿಕರ ಮನಸ್ಸನ್ನು ಕೆಡಿಸುತ್ತಿದ್ದಾರೆ. ಆದರೆ ನಿಜ ಸ್ಥಿತಿ ಏನೆಂದರೆ ಅಣು ಒಪ್ಪಂದದಿಂದ 1.45 ಲಕ್ಷ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಬಹುದು. ದೇಶದ ಅನೇಕ ಕಡೆಗೆ ವಿದ್ಯುತ್ ಕ್ಷಾಮ ತಲೆದೋರಿದ್ದು, ಈ ಮೂಲಕ ಅದನ್ನು ನಿವಾರಿಸಬಹುದು. 2030 ರ ವೇಳೆಗೆ ಇದರ ಸಾಮರ್ಥ್ಯ ಇನ್ನೂ ಹೆಚ್ಚಲಿದ್ದು, ಸುಮಾರು 4.70 ಲಕ್ಷ ಮೆಗಾವ್ಯಾಟ್ ವಿದ್ಯುತ್ ನ್ನು ಉತ್ಪಾದಿಸಬಹುದು ಇಂಥ ಎಲ್ಲ ಅನುಕೂಲಗಳಿವೆ. ಅದರ ಸಾಧಕಬಾಧಕಗಳನ್ನು ವಿರೋಧಿಸುವ ಎಲ್ಲರಿಗೂ ಗೊತ್ತಿದೆ ಎಂದ ಅವರು, ಯುಪಿಎ ಸರ್ಕಾರವನ್ನು ಉರುಳಿಸುವ ಒಂದೇ ಕಾರಣದಿಂದ ಈ ಎಲ್ಲ ನಾಟಕಗಳು ನಡೆಯತೊಡಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

(ಏಜೆನ್ಸೀಸ್)

 • 'ಮಾಯಾ'ಲೋಕದಲ್ಲಿ ಅಣು ಒಪ್ಪಂದಕ್ಕೆ ವಿರೋಧ!
 • ಸೋಮವಾರ ಸಂಜೆ ಮಮತ ನಿರ್ಧಾರ ಪ್ರಕಟ
 • ಯುಪಿಎ ಸರ್ಕಾರದ ಜುಟ್ಟು ಏಳು ಮಂದಿ ಕೈಯಲ್ಲಿ !
 • ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more