ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರು ಮೂರು ಒಂಬತ್ತು ವಿಶ್ವಾಸಮತ ಪ್ರದರ್ಶನಗಳು!

By Staff
|
Google Oneindia Kannada News

ನವದೆಹಲಿ, ಜು. 21 : ಲೋಕಸಭೆ ಕಳೆದ ಮೂರು ದಶಕಗಳಿಂದ ಅಂದರೆ 1979 ರಿಂದ ಇಲ್ಲಿಯವರೆಗೆ ಒಂಬತ್ತು ಸಲ ವಿಶ್ವಾಸಮತವನ್ನು ಎದುರಿಸಿದೆ. ಅದರಲ್ಲಿ ಮೂರು ಸಲ ಮಾತ್ರ ವಿಶ್ವಾಸಮತದಲ್ಲಿ ಗೆದ್ದಿವೆ. ಸಮ್ಮಿಶ್ರ ಸರ್ಕಾರಗಳ ಯುಗ ಆರಂಭವಾದ ಕಾರಣ ಸಂಸತ್ತಿನಲ್ಲಿ ಸರ್ಕಾರಗಳು ವಿಶ್ವಾಸಮತ ಎದುರಿಸುವಲ್ಲಿ ಆರು ಬಾರಿ ಸೋಲನ್ನು ಅನುಭವಿಸಿವೆ.

1979ರಲ್ಲಿ ಕಾಂಗ್ರೆಸ್ ಪಕ್ಷ ತನ್ನ ಬೆಂಬಲವನ್ನು ಹಿಂದಕ್ಕೆ ಪಡೆದಿದ್ದರಿಂದ ಮೊದಲ ಬಾರಿಗೆ ಸಂಸತ್ತಿನಲ್ಲಿ ಪ್ರಧಾನಮಂತ್ರಿ ಚೌಧರಿ ಚರಣ್ ಸಿಂಗ್ ಅವರ ಸರ್ಕಾರ ವಿಶ್ವಾಸಮತ ಎದುರಿಸಿ ಗೆಲುವು ಸಾಧಿಸಿತ್ತು. ಸದನದಲ್ಲಿ ವಿಶ್ವಾಸಮತ ಕೋರಿದ ಮೊದಲ ಪ್ರಧಾನಮಂತ್ರಿ ಎಂಬ ಹೆಗ್ಗಳಿಕೆಗೆ ಚರಣ್ ಸಿಂಗ್ ಪಾತ್ರರಾಗಿದ್ದಾರೆ. ನಂತರ ವಿ.ಪಿ.ಸಿಂಗ್ ಅವರ ಸರದಿ, ಬಿಜೆಪಿ ಬೆಂಬಲ ಹಿಂತೆಗೆದುಕೊಂಡಾಗ ಸಿಂಗ್ ಸರ್ಕಾರ ಅಲ್ಪ ಮತಕ್ಕೆ ಕುಸಿಯಿತು. ಆಗ ವಿಶ್ವಾಸಮತಕ್ಕೆ ಸದನ ಸಾಕ್ಷಿಯಾಯಿತು.

1996ರಲ್ಲಿ ವಿಶ್ವಾಸಮತ ಕರೆದ ಸಮಯದಲ್ಲಿ ಸರ್ಕಾರ ಬೀಳಲಿದೆ ಎನ್ನುವುದನ್ನು ಅರಿತ ಅಟಲ್ ಬಿಹಾರಿ ವಾಜಪೇಯಿ ಕೂಡಲೇ ರಾಜೀನಾಮೆ ಸಲ್ಲಿಸಿದ್ದರು. ಅದೇ ವರ್ಷ ಎಚ್.ಡಿ.ದೇವೇಗೌಡ ಸರ್ಕಾರ ವಿಶ್ವಾಸಮತ ಪ್ರದರ್ಶನದಲ್ಲಿ ಗೆಲುವು ಸಾಧಿಸಿತ್ತು. ನಂತರ ಇಂದ್ರಕುಮಾರ್ ಗುಜ್ರಾಲ್ ಸರ್ಕಾರ 1997ರಲ್ಲಿ ವಿಶ್ವಾಸಮತ ಯಾಚಿಸಿತ್ತು. ಮತ್ತೆ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ 1999ರಲ್ಲಿ ಕೇವಲ ಒಂದು ಮತದಿಂದ ಸರ್ಕಾರ ಉರುಳಿತ್ತು.

ಇದೀಗ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಸರ್ಕಾರ ಜು.22 ರಂದು ಸಂಸತ್ತಿನಲ್ಲಿ ವಿಶ್ವಾಸಮತ ಯಾಚಿಸಲು ಸಿದ್ಧವಾಗಿದೆ. ಈ ಮೂಲಕ ಕಳೆದ ಮೂರು ದಶಕಗಳಲ್ಲಿ ಆರು ಸರ್ಕಾರಗಳು ವಿಶ್ವಾಸಮತದಲ್ಲಿ ಪಾಲ್ಗೊಂಡಿವೆ. ನಾಳಿನ ವಿಶ್ವಾಸಮತದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಗೆಲುವು ಸಾಧಿಸಿದಲ್ಲಿ ನಾಲ್ಕು ಸರ್ಕಾರಗಳು ವಿಶ್ವಾಸಮತದಲ್ಲಿ ಗೆಲುವು ಸಾಧಿಸಿದಂತಾಗಲಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X