ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಪಕ್ಷ ನಾಯಕ ಖರ್ಗೆ ಅವರಿಗೆ 67ನೇ ಹುಟ್ಟುಹಬ್ಬ

By Staff
|
Google Oneindia Kannada News

ಬೆಂಗಳೂರು, ಜು.21 : ವಿಧಾನಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಇಂದು 67 ನೇ ವಸಂತಕ್ಕೆ ಅಡಿಯಿಟ್ಟರು. ನಗರದ ಕೆಪಿಸಿಸಿ ಕಚೇರಿಯಲ್ಲಿ ಸಮಾರಂಭದಲ್ಲಿ ಪಕ್ಷದ ಹಿರಿಯ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳ ಸಮ್ಮುಖದಲ್ಲಿ ಕೇಕು ಕತ್ತರಿಸುವ ಮೂಲಕ ಖರ್ಗೆ ಸರಳವಾಗಿ ಹುಟ್ಟಹಬ್ಬವನ್ನು ಆಚರಿಸಿಕೊಂಡರು.

ಕಾಂಗ್ರೆಸ್ ಪಕ್ಷದಲ್ಲಿ ಹಿರಿಯ ಮುಖಂಡರಾಗಿರುವ ಖರ್ಗೆ ಅಜಾತಶತ್ರು. ಸ್ನೇಹಮಯಿ ವ್ಯಕ್ತಿತ್ವದ ಖರ್ಗೆ ಸತತ ಒಂಬತ್ತು ಭಾರಿ ಶಾಸಕರಾಗಿ ಶಾಸನಸಭೆ ಪ್ರವೇಶಿಸುವ ಮೂಲಕ ದಾಖಲೆ ಬರೆದಿದ್ದಾರೆ. ಗುರುಮಿಟಕಲ್ ಮೀಸಲು ಕ್ಷೇತ್ರದಿಂದ ಎಂಟು ಭಾರಿ ವಿಧಾನಸಭೆ ಪ್ರವೇಶಿಸಿರುವ ಅವರು, ಈ ಸಲದ ಕ್ಷೇತ್ರ ಮರುವಿಂಗಡಣೆ ಹಿನ್ನಲೆಯಲ್ಲಿ ಚಿತ್ತಾಪುರ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಬಡ ಕುಟುಂಬದಲ್ಲಿ ಹುಟ್ಟಿದ ಖರ್ಗೆ, ತಮ್ಮ ಹೋರಾಟದ ಮೂಲಕ ಇಂದು ರಾಜ್ಯ ರಾಜಕಾರಣದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಖರ್ಗೆ ಮುಖ್ಯಮಂತ್ರಿ ಅಭ್ಯರ್ಥಿಯಾಗುತ್ತಿದ್ದರೇನೂ, ಆದರೆ ದುರದೃಷ್ಠವಶಾತ್ ಕಾಂಗ್ರೆಸ್ ನೆಲಕಚ್ಚಿತು ಜತೆಗೆ ಅವರ ಆಸೆಯೂ ಕಮರಿತು.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಸೇರಿದಂತೆ ಕಾಂಗ್ರೆಸ್ ಪಕ್ಷದ ಎಲ್ಲ ಹುದ್ದೆಗಳನ್ನು ಅಲಂಕರಿಸಿರುವ ಖರ್ಗೆ, ಅನುಭವಿ ನಾಯಕರೂ ಕೂಡಾ. ಆದರೆ ಇವರ ನಾಯಕತ್ವದಲ್ಲಿ ವಿಧಾನಸಭೆ ಚುನಾವಣೆಯನ್ನು ಎದುರಿಸಿದ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋಲನುಭವಿಸಿತು. ನಾಯಕರ ಕೊರತೆ ಇಲ್ಲದೆ ಕಂಗಾಲಾಗಿರುವ ಕಾಂಗ್ರೆಸ್ ಗೆ ಇದೀಗ ಖರ್ಗೆ ಅವರೇ ಗತಿ. 67 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಖರ್ಗೆ ಆರೋಗ್ಯ ಉತ್ತಮವಾಗಿರಲಿ, ರಾಜಕೀಯ ಕ್ಷೇತ್ರದಲ್ಲಿ ಇನ್ನಷ್ಟು ಬೆಳೆಯಲಿ, ಅವರ ಕನಸು ನನಸಾಗಲಿ ಎಂದು ಕೆಪಿಸಿಸಿ ಕಚೇರಿಯಲ್ಲಿ ಸೇರಿದ್ದ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು, ಮುಖಂಡರು ಪ್ರೀತಿಯಿಂದ ಹಾರೈಸಿ ಶುಭ ಕೋರಿದರು. ದಲಿತ ನಾಯಕ ಇಷ್ಟೆತ್ತರಕ್ಕೆ ಬೆಳೆಯುವುದು ಸುಮ್ಮನೆ ಮಾತಲ್ಲ. ಸಮಾಜದ ಎಲ್ಲ ಕಷ್ಟಕಾರ್ಪಣ್ಯಗಳನ್ನು ಅನುಭವಿಸಿ ದೊಡ್ಡವರಾಗಿರುವ ಅವರು ಮತ್ತಷ್ಟು ಎತ್ತರಕ್ಕೆ ಏರಲಿ ಎಂಬುದು ಅವರ ಅಭಿಮಾನಿಗಳಹಾರೈಕೆ.

(ದಟ್ಸ್‍ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X