ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೈಕೊಟ್ಟ ಆರ್ಎಲ್ ಡಿ, ಅದೇ ಹಾದಿಯಲ್ಲಿ ಜೆಡಿಎಸ್

By Staff
|
Google Oneindia Kannada News

ನವದೆಹಲಿ, ಜು. 20 : ಕೇಂದ್ರ ಸರ್ಕಾರದ ವಿಶ್ವಾಸಮತ ದಿನ ಹತ್ತಿರವಾಗುತ್ತಿದ್ದಂತೆಯೇ ವಿವಿಧ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆ ನಡೆಯುತ್ತಿರುವ ಬೆನ್ನಲ್ಲೇ ಜೆಎಂಎಂ ಪಕ್ಷ ಭಾನುವಾರ ಯುಪಿಎಗೆ ಬೆಂಬಲ ಸೂಚಿಸುವುದಾಗಿ ಹೇಳಿದೆ. ಈ ವಿಷಯ ಸ್ಪಷ್ಟಪಡಿಸಿರುವ ಜೆಎಂಎಂ ನಾಯಕ ಶಿಬು ಸೋರೇನ್ ವಿಶ್ವಾಸಮತದ ಸಂದರ್ಭದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಮತ ಚಲಾಯಿಸುವುದಾಗಿ ಅವರು ಹೇಳಿದ್ದಾರೆ.

ಭಾನುವಾರ ಬೆಳಗ್ಗೆ ಜಾರ್ಖಂಡ್ ಮುಖ್ಯಮಂತ್ರಿ ಮಧು ಕೋಡಾ ಅವರೊಂದಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ ಸೋರೇನ್, ಸುದೀರ್ಘ ಮಾತುಕತೆಯ ನಂತರ ಯುಪಿಎಗೆ ಮತ ನೀಡುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಕೆಲವು ಷರತ್ತುಗಳನ್ನು ವಿಧಿಸಿರುವ ಸೋರೇನ್ ಸಂಪುಟದಲ್ಲಿ ಕಲ್ಲಿದ್ದಲು ಸಚಿವ ಸ್ಥಾನ ಮತ್ತು ಇನ್ನೊಬ್ಬ ಸಂಸದರಿಗೆ ರಾಜ್ಯ ಸಚಿವ ಸ್ಥಾನ ನೀಡಲು ಸೋನಿಯಾ ಗಾಂಧಿ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಜತೆಗೆ ಶಿಬು ಸೋರೇನ್ ಅವರ ಪುತ್ರನನ್ನು ಜಾರ್ಖಂಡ್ ಉಪಮುಖ್ಯಮಂತ್ರಿ ಮಾಡಬೇಕು ಎನ್ನುವ ಷರತ್ತಿಗೂ ಸೋನಿಯಾ ಗಾಂಧಿ ತಲೆಯಾಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆರ್ಎಲ್ ಡಿ ಮಾಯಾವತಿಗೆ ಜೈ

ರಾಷ್ಟ್ರೀಯ ಲೋಕತಾಂತ್ರಿಕ ದಳದ ನಾಯಕ ಅಜೀತ್ ಸಿಂಗ್ ಯುಪಿಎ ಪರ ಮತ ಚಲಾಯಿಸಲು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಈ ಮೂಲಕ ಸಣ್ಣಪುಟ್ಟ ಪಕ್ಷಗಳ ಕಡೆ ಎದುರು ನೋಡುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಹೊಡತೆ ಬಿದ್ದಿದೆ. ಜೆಡಿಎಸ್ ವರಿಷ್ಟ ಕೂಡಾ ಬಿಎಸ್ ಪಿ ನಾಯಕಿ ಮಾಯಾವತಿ ಅವರೊಂದಿಗೆ ಮಾತುಕತೆ ನಡೆಸಿರುವುದು ಯುಪಿಎ ಸರ್ಕಾರದ ಸ್ಥಿತಿ ತೂಗುಯ್ಯಾಲೆಯಲ್ಲಿದೆ.

ಭಾನುವಾರ ಪಕ್ಷದ ನಿರ್ಧಾರವನ್ನು ಸ್ಪಷ್ಟಪಡಿಸಿದ ಅಜೀತ್ ಸಿಂಗ್, ಮಾಯಾವತಿ ದೇಶದ ದೊಡ್ಡ ನಾಯಕಿಯಾಗಿದ್ದು, ಅವರನ್ನು ಪ್ರಧಾನಮಂತ್ರಿಯನ್ನಾಗಿಸುವ ಮೂಲಕ ಸೇರಿದಂತೆ ತೃತೀಯ ಬಲಪಡಿಸುವ ನಿಟ್ಟಿನಲ್ಲಿ ಹೆಜ್ಜೆ ಇರಿಸಲಾಗಿದೆ. ಆದ್ದರಿಂದ ಯುಪಿಎಗೆ ಮತ ಹಾಕದಿರಲು ನಿರ್ಧರಿಸಲಾಗಿದೆ ಎಂದರು. ಇದರ ಜತೆಗೆ ಸಮಾಜವಾದಿ ಪಕ್ಷದ ಇನ್ನೊಬ್ಬ ಸಂಸದ ಅತೀಖ್ ಅಹ್ಮದ್ ಕೂಡಾ ಯುಪಿಎಗೆ ಮತ ಹಾಕುವುದಿಲ್ಲ ಹೇಳಿದ್ದಾರೆ. ಈ ಎಲ್ಲ ಬೆಳವಣಿಗೆ ಹಿನ್ನಲೆಯಲ್ಲಿ ಯುಪಿಎ ಸರ್ಕಾರದ ಭವಿಷ್ಯ ಅಭದ್ರವಾಗಿದೆ. ನಾಗರಿಕ ಪರಮಾಣು ಒಪ್ಪಂದ ಯುಪಿಎ ಸರ್ಕಾರ ಆಹುತಿ ತೆಗದುಕೊಳ್ಳದೆ ಎನ್ನುವ ಸುದ್ದಿ ದಟ್ಟವಾಗಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X