• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯಡಿಯೂರಪ್ಪ ಚೊಚ್ಚಲ ಬಜೆಟ್‌ನ ಪಕ್ಷಿನೋಟ

By Staff
|

A birds eye view on Karnataka budget 2008ಬೆಂಗಳೂರು, ಜು.17: ಬಿಜೆಪಿ ಖಂಡಿತವಾಗಿಯೂ ಪರಿಹಾರವಾಗುವತ್ತ ದಾಪುಗಾಲಿಟ್ಟಿದೆ. ರೈತರಿಗೆ ಕಾಮಧೇನಾಗಿರುವ ಯಡಿಯೂರಪ್ಪ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ರಾಜ್ಯದ 15 ಲಕ್ಷ ರೈತರಿಗೆ ಆಗಸ್ಟ್ 1 ರಿಂದ ಉಚಿತ ವಿದ್ಯುತ್ ನೀಡುವುದಾಗಿ ವಾಗ್ದಾನ ನೀಡಿದ್ದಾರೆ. ಇನ್ನೂ ನಗರಾಭಿವೃದ್ಧಿಗೆ ಬಂಪರ್ ಬಹುಮಾನ ವೂ ಸಿಕ್ಕಿದೆ. ಬೆಂಗಳೂರಿಗೆ ಸಿಂಹಪಾಲು ದೊರೆತಿದೆ. ತನ್ನ ಮೊಟ್ಟ ಮೊದಲ ಸ್ವತಂತ್ರ ಬಜೆಟ್‌ ಪ್ರಣಾಳಿಕೆಯಲ್ಲಿ ನೀಡಿದ್ದ ಬಹುತೇಕ ಭರವಸೆಗಳನ್ನು ಚಾಚು ತಪ್ಪದೆ ಈಡೇರಿಸಿದೆ. ಮುಂಬರುವ ಬಿಬಿಎಂಪಿ ಮತ್ತು ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮುಂಗಡಪತ್ರ ಮಂಡಿಸಿದ್ದಾರೆ ಎಂದು ಪ್ರತಿಪಕ್ಷದವರ ಆರೋಪವಾಗಿದೆ. ಇದೊಂದು ಚುನಾವಣೆಯ ಬಜೆಟ್, ಜನಪರ ಬಜೆಟ್, ಬಡವರ ಬಜೆಟ್, ಬೆಂಗಳೂರಿನ ಬಜೆಟ್ ಹೀಗೆ ಅನೇಕ ಮಾತುಗಳು ಕೇಳಿ ಬರುತ್ತಿವೆ.

ಮುಂಗಡ ಪತ್ರದ ಮುಖ್ಯಾಂಶಗಳು

ಕೃಷಿ

ಹತ್ತು ಅಶ್ವಶಕ್ತಿಗಿಂತ ಕಡಿಮೆ ನೀರಾವರಿ ವಿದ್ಯುತ್ ಪಂಪುಗಳಿಗೆ ಉಚಿತ ವಿದ್ಯುತ್. ಆಗಸ್ಟ್ 1 ರಿಂದ ರಾಜ್ಯದ 15 ಲಕ್ಷ ಬಡತನ ರೇಖೆಗಿಂತ ಕೆಳಗಿರುವ ರೈತರು ಉಚಿತ ವಿದ್ಯುತ್ತಿನ ಪ್ರಯೋಜನವನ್ನು ಪಡೆಯಲಿದ್ದಾರೆ. ಶೇ. 3ರ ಬಡ್ಡಿ ದರದಲ್ಲಿ ರೈತರಿಗೆ ಸಾಲ. ಕೃಷಿಗೆ ಬೆಂಬಲ ಬೆಲೆ ಮತ್ತು ಕೃಷಿ ಬೆಲೆ ಕುಸಿತಕ್ಕೆ ಬೆಂಬಲ ಬೆಲೆಗಾಗಿ 500 ಕೋಟಿ ರುಪಾಯಿ ಆವರ್ತ ನಿಧಿ. ಕೃಷಿ ಉತ್ಪನ್ನ ಖರೀದಿಗಾಗಿ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ. ಕೃಷಿ ಮಿಷನ್ ರಚನೆ. ಸಾವಯುವ ಕೃಷಿಗೆ ಒಂದು ಸಾವಿರ ರುಪಾಯಿ ಸಹಾಯಧನ. ರಾಜ್ಯದ 36 ಸಾವಿರ ಕೆರೆಗಳ ಅಭಿವೃದ್ಧಿ. ಕೃಷಿ ಪಂಪಸೆಟ್ ಗಳಿಗೆ ಮೀಟರ್ ಅಳವಡಿಕೆ. ರೇಷ್ಮೆ ಸಾಗಾಣಿಕೆ ಕೇಂದ್ರ ಸ್ಥಾಪನೆಗೆ ಶೇ. 75 ರಷ್ಟು ಸಹಾಯಧನ. ಕೃಷಿ ಗೋದಾಮುಗಳು ಮತ್ತು ಸಂಸ್ಕರಣ ಘಟಕಗಳ ಸ್ಥಾಪನೆ. ಕುರಿ ಮತ್ತು ಕೋಳಿ ಸಾಗಾಣಿಕೆಗೆ ಉತ್ತೇಜನ. ಸಾವಯುವ ಬೇಸಾಯಕ್ಕೆ ಚಾಲನೆ. ರೇಷ್ಮೆ ಕೈಗಾರಿಕೆಗೆ 100 ಘಟಕಗಳ ಸ್ಥಾಪನೆ. ರೇಷ್ಮೆ ತಾಂತ್ರಿಕ ಚರಕ ಉಳ್ಳವರಿಗೆ ಶೇ.25 ಸಹಾಯಧನ. ಬಾಗಲಕೋಟೆ ಮತ್ತು ರಾಯಚೂರುಗಳಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ. ಮಲ್ಪೆ ಮೀನುಗಾರಿಕೆ ಅಭಿವೃದ್ದಿಗೆ ರು.1200 ಕೋಟಿ ಅನುದಾನ. ಮೀನುಗಾರರಿಗೆ 2500 ವಸತಿ ಗೃಹಗಳ ನಿರ್ಮಾಣ. ಮೀನುಗಳ ಶೇಖರಣೆ ಕೇಂದ್ರ ಸ್ಥಾಪನೆ. ಸಹಕಾರಿ ಸಂಘಗಳ ಪುನಶ್ಚೇತನ. ವೈದ್ಯನಾಥನ್ ಆಯೋಗ ಅನುಷ್ಠಾನ. ನಕ್ಸಲ್ ಪೀಡಿತ ಪ್ರದೇಶಗಳ ಪುನಶ್ಚೇತನ.

ಶಿಕ್ಷಣ

ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿನ ಶಿಕ್ಷಣ ಗುಣಮಟ್ಟ ಹೆಚ್ಚಳಕ್ಕೆ ಕ್ರಮ. ಸರ್ವ ಶಿಕ್ಷಣ ಅಭಿಯಾನದ ಮೊತ್ತ 958 ಕೋಟಿ ರು.ಗಳಿಗೆ ಹೆಚ್ಚಳ.

ಸರ್ಕಾರಿ ಮತ್ತು ಅನುದಾನಿತ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣೆ ಇದಕ್ಕಾಗಿ ರು.140 ಕೋಟಿ ಮೀಸಲು. ಬಿಸಿಯೂಟ ಸಿಬ್ಬಂದಿಗಳ ಗೌರವ ಸಂಭಾವನೆ ಹೆಚ್ಚಳ. ಪ್ರೌಢ ಶಾಲೆಗಳ ಕೊಠಡಿ ಮತ್ತು ಕಟ್ಟಡಗಳಿಗಾಗಿ ರು.53 ಕೋಟಿಗಳ ಅನುದಾನ. 1993-94ರಲ್ಲಿ ಸ್ಥಾಪಿಸಲಾಗಿರುವ ಪ್ರೌಢ ಶಾಲೆಗಳಿಗೆ ಸರ್ಕಾರಿ ಸಹಾಯಧನ. ಉನ್ನತ ಶಿಕ್ಷಣ ಪಡೆಯುವ ಬಡವಿದ್ಯಾರ್ಥಿಗಳಿಗೆ ಶೇ. 6ರ ಬಡ್ಡಿದರದಲ್ಲಿ ಸಾಲ. ಪಾಲಿಟೆಕ್ನಿಕ್ ಮತ್ತು ಎಂಜನಿಯರಿಂಗ್ ಕಾಲೇಜುಗಳ ಅಬಿವೃದ್ಧಿಗೆ 100 ಕೋಟಿ ರು.ಗಳ ಅನುದಾನ. ಗೋಖಲೆ ಶಿಕ್ಷಣ ಸಂಸ್ಥೆಗೆ ನೆರವು. ಕರ್ನಾಟಕ ಉನ್ನತ ಜ್ಞಾನ ಆಯೋಗ ರಚನೆ. ಸರ್ಕಾರಿ ನೌಕರರ ನಿವೃತ್ತಿ ವಯಸ್ಸಿನ ಮೀತಿ 58 ರಿಂದ 60ಕ್ಕೆ ಏರಿಕೆ. ಐಟಿಐ ಕಾಲೇಜುಗಳನ್ನು ಮೇಲ್ದರ್ಜೆಗೆ ಏರಿಕೆ.

ಆರೋಗ್ಯ

ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ. ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ, ತಾಲ್ಲೂಕು ಆಸ್ಪತ್ರೆಗಳಿಗೆ ರು. 87 ಕೋಟಿಗಳ ಅನುದಾನ. ಮಡಿಲು ಮತ್ತು ಆರೈಕೆ ಯೋಜನೆಗಳು ಮುಂದುವರಿಕೆ. ಆಸ್ಪತ್ರೆಗಳಲ್ಲಿ ಸುರಕ್ಷಿತ ಹೆರಿಗೆಗಾಗಿ ಪ್ರತಿ ಹೆರಿಗೆಗೆ ಒಂದು ಸಾವಿರ ರು.ಗಳ ಸಹಾಯಧನ. ಆರೋಗ್ಯ ಕವಚ ಎಂಬ ಹೆಸರಿನಡಿಯಲ್ಲಿ ಯೋಜನೆ, ಗ್ರಾಮೀಣ ಪ್ರದೇಶದಲ್ಲಿ ಆಂಬುಲೆನ್ಸ್ ಸೌಲಭ್ಯ. ಬೆಂಗಳೂರಿನ ವಿಕ್ಟೋರಿಯಾ ಮತ್ತು ಬೌರಿಂಗ್ ಆಸ್ಪತ್ರೆಗಳ ಅಭಿವೃದ್ಧಿಗೆ ರು. 8 ಕೋಟಿಗಳ ಅನುದಾನ. ರಾಜ್ಯದಲ್ಲಿ ಸ್ಥಾಪಿಸಲಾಗಿರುವ ಆರು ನೂತನ ವೈದ್ಯಕೀಯ ಕಾಲೇಜುಗಳ ಮೂಲಭೂತ ಸೌಕರ್ಯಗಳಿಗೆ 120 ಕೋ. ರುಗಳ ಅನುದಾನ. ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಅಭಿವೃದ್ಧಿಗೆ 36 ಕೋ.ರು ಗಳ ಅನುದಾನ. ಇದೇ ವರ್ಷದಲ್ಲಿ ವೈದ್ಯರು, ದಾದಿಯರು ಸೇರಿದಂತೆ ಇಲಾಖೆಗೆ 5000 ಸಿಬ್ಬಂದಿಗಳ ನೇಮಕ.ವಾರ್ಷಿಕ 60 ಸಾವಿರ ರುಪಾಯಿ ಆದಾಯವಿರುವ ಎಲ್ಲಾ ಕುಟುಂಬಗಳಿಗೆ ಸಮುದಾಯ ಆರೋಗ್ಯ ವಿಮೆ.

ಸಮಾಜ ಕಲ್ಯಾಣ ಇಲಾಖೆ

ಪರಿಶಿಷ್ಠ ಜಾತಿ, ಪಂಗಡ ಮತ್ತು ಅಲ್ಪಸಂಖ್ಯಾತ ಇಲಾಖೆಗೆ 925 ಕೋಟಿ ರು.ಗಳ ಅನುದಾನ. ಸಮಾಜ ಕಲ್ಯಾಣ ವಸತಿ ನಿಲಯಗಳ ಗುಣಮಟ್ಟಹೆಚ್ಚಳ ಮತ್ತು ವಿದ್ಯಾರ್ಥಿಗಳಿಗೆ ರು.600 ಸಹಾಯಧನ. ಗಂಗಾಕಲ್ಯಾಣ ಯೋಜನೆ ಮೊತ್ತ ರು.150 ಕೋಟಿಗೆ ಏರಿಕೆ. ಭಾಗ್ಯಲಕ್ಷ್ಮಿ ಯೋಜನೆಯ ಪೂರ್ಣಫಲದ ಮೊತ್ತವನ್ನು 34 ಸಾವಿರ ರುಪಾಯಿಯಿಂದ 1ಲಕ್ಷದ ರು.ಗಳಿಗೆ ಹೆಚ್ಚಳ. ಅಲ್ಪಸಂಖ್ಯಾತರ ಕಲ್ಯಾಣಕ್ಕೆ 143 ಕೋಟಿ ರು. ಅನುದಾನ. ಶಾದಿ ಮಹಲ್ ನಿರ್ಮಾಣಕ್ಕೆ 15 ಕೋ. ರು ಮೀಸಲು. ಬಾಲ ವಿಕಾಸ ಅಕಾಡಮಿ ಸ್ಥಾಪನೆ. ಅಂಗನವಾಡಿ ಕೇಂದ್ರಗಳ ಕೊಠಡಿಗೆ 50 ಕೋ.ರುಗಳ ಅನುದಾನ. ಬಡವರಿಗೆ 3 ಲಕ್ಷ ವಸತಿ ನಿರ್ಮಾಣ, ಇದಕ್ಕಾಗಿ 821 ಕೋಟಿ ರು.ಗಳ ಅನುದಾನ. ಗ್ರಾಮೀಣ ಆಶ್ರಯ ಯೋಜನೆ ಮುಂದುವರಿಕೆ. ಎರಡು ವರ್ಷದೊಳಗೆ ಎಲ್ಲಾ ತಾಲ್ಲೂಕು ಕೇಂದ್ರಗಳಿಗೆ ಸ್ತ್ರೀ ಶಕ್ತಿ ಭವನ. ವಿಚ್ಛೇದಿತ ಬಡ ಮಹಿಳೆಯರು ಪುನರ್ ವಿವಾಹ ಆಗುವವರೆಗೆ 400 ರುಪಾಯಿ ಮಾಶಾಸನ.

ನಗರಾಭಿವೃದ್ಧಿ

ಬಿಜೆಪಿ ಸರ್ಕಾರ ನಗರಾಭಿವೃದ್ಧಿಗೆ 4574 ಕೋಟಿ ರು.ಗಳ ಅನುದಾನ ಮೀಸಲಿರಿಸಿದೆ. ಅದರಲ್ಲಿ 2419 ಕೋಟಿ ರು.ಗಳನ್ನು ಹಣಕಾಸು ಆಯೋಗದಿಂದ ಪಡೆದುಕೊಳ್ಳಲಾಗಿದೆ. ಕುಡಿಯುವ ನೀರು ಸಮರ್ಪಕವಾಗಿ ಪೂರೈಸಲು 381 ಕೋಟಿ ರು.ಗಳ ಅನುದಾನ. ಹುಬ್ಬಳ್ಳಿ-ಧಾರವಾಡ ಕುಡಿಯುವ ನೀರಿಗೆ 3 ಕೋ.ರುಗಳ ಅನುದಾನ. ಕರಾವಳಿ ಪ್ರದೇಶದ ಕುಡಿಯುವ ನೀರಿನ ಯೋಜನೆಗೆ 65 ಕೋ.ರುಗಳ ಅನುದಾನ. ವಾಹನ ದಟ್ಟಣೆ ನಿಯಂತ್ರಿಸಲು ಬೆಂಗಳೂರು, ಮಂಗಳೂರು ಮತ್ತು ಉಡುಪಿ ನಗರಗಳಿಗೆ ಮೋನೊ ರೈಲು ವ್ಯವಸ್ಥೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ. ಬಿಡಿಎ ಸಹಯೋಗದಲ್ಲಿ 60 ನಿವೇಶನಗಳ ಕೆಂಪೇಗೌಡ ಬಡಾವಣೆಗೆ ಚಾಲನೆ. ಖಾಸಗಿ ಸಹಭಾಗಿತ್ವದಲ್ಲಿ 36 ಸಾವಿರ ಕೋಟಿ ರು.ಗಳ ಬಂಡವಾಳ ಹೂಡಿಕೆ. ಬೆಂಗಳೂರು ಸಮಗ್ರ ಅಭಿವೃದ್ಧಿಗೆ 1800 ಕೋಟಿ ರು.ಗಳ ಅನುದಾನ. 10 ಅಂಡರ್ ಪಾಸ್ ಮತ್ತು ಮೇಲು ಸೇತುವೆ ನಿರ್ಮಾಣ. ಖಾಸಗಿ ಸಹಭಾಗಿತ್ವದಲ್ಲಿ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಹೈ ಸ್ಪೀಡ್ ರೈಲುಗಳ ಕಾರ್ಯರಂಭಕ್ಕೆ ಚಾಲನೆ, 295 ಕೋ.ರುಗಳ ಅನುದಾನ. ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ರಾಷ್ಟ್ರೀಯ ಮಟ್ಟಕ್ಕೆ ಏರಿಸುವುದು. ಶಿವಮೊಗ್ಗ, ಹಾಸನ, ಬೆಳಗಾವಿ ವಿಮಾನ ನಿಲ್ದಾಣಗಳ ಮೇಲ್ದರ್ಜೆಗೆ 40 ಕೋಟಿ ರು.ಗಳ ಅನುದಾನ. ಸಮರ್ಪಕ ರೈಲು ಪ್ರಯಾಣಕ್ಕೆ 253 ಕೋ.ರುಗಳ ಅನುದಾನ. ಹುಬ್ಬಳ್ಳಿ ಮತ್ತು ಗುಲ್ಬರ್ಗಾ ಹೈಕೋರ್ಟ್ ಸಂಚಾರಿ ಪೀಠದ ಮೂಲಭೂತ ಸೌಕರ್ಯಕ್ಕೆ ಅನುದಾನ. ವಿದ್ಯುತ್ ಉತ್ಪಾದನೆ ಹೆಚ್ಚಳ. ಮುಂದಿನ 5 ವರ್ಷಗಳಲ್ಲಿಸ 10 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಗೆ ಕ್ರಮ. ರಾಜ್ಯಾದ್ಯಂತ 33 ಕೆವಿ ವಿದ್ಯುತ್ ಘಟಕಗಳ ಸ್ಥಾಪನೆಗೆ ಕ್ರಮ. ಗಾಳಿ ಯಂತ್ರಗಳ ಪುನರ್ ನವೀಕರಣ.

ಕೈಗಾರಿಕೆ

ರಾಜ್ಯಾದ್ಯಂತ ಉಕ್ಕು, ಸಿಮೆಂಟ್, ಆಹಾರ, ವಿಜ್ಞಾನ ತಂತ್ರಜ್ಞಾನ, ಅಟೋಮೊಬೈಲ್ ಸೇರಿ 6 ವಿಶೇಷ ವಿತ್ತ ವಲಯಗಳನ್ನು ಬೆಂಗಳೂರು, ಹಾಸನ, ರಾಮನಗರ, ಗದಗ, ಹಾವೇರಿ, ಶಿವಮೊಗ್ಗ, ಬಳ್ಳಾರಿ, ಬೆಳಗಾವಿಯಲ್ಲಿ ಸ್ಥಾಪಿಸಲು 500 ಕೋ. ರುಗಳ ಅನುದಾನ. ಬಂಡವಾಳ ಆಕರ್ಷಿಸಲು ಮುಂದಿನ ವರ್ಷ ಜನವರಿಯಲ್ಲಿ ವಿಶ್ವ ಬಂಡವಾಳ ಸಮ್ಮೇಳನ ಆಯೋಜಿಸುವುದು ಸರ್ಕಾರದ ಉದ್ದೇಶವಾಗಿದೆ. ಹುಬ್ಬಳ್ಳಿಯಲ್ಲಿ ಆಮದು ರಪ್ತು ಕಚೇರಿ ಸ್ಥಾಪನೆ. ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಐಟಿ-ಬಿಟಿಗೆ ಉತ್ತೇಜನ. ಬಿಪಿಓ ಕಂಪನಿಗಳು ತಾಲ್ಲೂಕು ಕೇಂದ್ರಗಳಲ್ಲಿ ಸ್ಥಾಪನೆ ಮಾಡಿದಲ್ಲಿ ಸಂಪೂರ್ಣ ರಿಯಾಯಿತಿ ಹಾಗೂ ರು. 5 ಕೋ.ಗಳ ಅನುದಾನ. ಐಟಿ-ಬಿಟಿ ಪಾರ್ಕ್ ಸ್ಥಾಪನೆಗೆ 10 ಕೋ. ರುಗಳ ನಿಧಿ. ತಾಲೂಕು ಕೇಂದ್ರದಲ್ಲಿ ಸೈಬರ್ ಕೇಂದ್ರ ಸ್ಥಾಪನೆ. ಉದ್ಯೋಗ ತರಬೇತಿ ಕೌಶಲ್ಯ ಆಯೋಗ ಜಾರಿ. ಕಾರ್ಮಿಕರು ಮತ್ತು ಬಿಡಿ ಕಾರ್ಮಿಕರ ವೇತನಕ್ಕೆ ಕ್ರಮ.

ಕಂದಾಯ

ನೂತನ ತಾಲೂಕು ರಚನೆಗೆ ಚಾಲನೆ. ಆರಾಧನಾ ಯೋಜನೆಗೆ 20 ಕೋ.ರುಗಳ ಅನುದಾನ. ಪಂಚಾಯಿತಿ ಗ್ರಾಮೀಣಾಭಿವೃದ್ಧಿ ಅಧಿಕಾರಿ ನೇಮಕ. ಗ್ರಾಮ ಪಂಚಾಯಿತಿಗಳನ್ನು ಗಣಕೀಕರಗೊಳಿಸುವುದು. ಪೊಲೀಸ್ ವಸತಿ ಗೃಹಗಳನ್ನು ದುರಸ್ಥಿ ಮಾಡಲು 90 ಕೋ.ರುಗಳ ಅನುದಾನ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ 3500 ನೂತನ ಬಸ್ಸುಗಳು. ಗ್ರಾಮ ಅರಣ್ಯ ಸಮಿತಿ ಮುಂದುವರಿಕೆ. ಅಂಗವಿಕಲರ ಮಾಸಾಶನಕ್ಕೆ ಆದಾಯ ಮಿತಿ ತೆಗೆದುಹಾಕುವುದು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಕ್ಕೆ ಒತ್ತಡ. ಡಾ.ರಾಜ್ ಕುಮಾರ್ ಸ್ಮಾರಕ ಅಭಿವೃದ್ಧಿಗೆ 5 ಕೋ.ರುಗಳ ಅನುದಾನ. ಬೆಳಗಾವಿ ವಿಶ್ವ ಕನ್ನಡ ಸಮ್ಮೇಳನಕ್ಕೆ 25 ಕೋ.ರುಗಳ ಅನುದಾನ. ಅನಿವಾಸಿ ಭಾರತೀಯ ಸಂಸ್ಥೆ ಸ್ಥಾಪನೆ. ಇಲಾಖೆ ಅಭಿವೃದ್ದಿಗೆ 184 ಕೋ.ರುಗಳ ಅನುದಾನ. ಸಂತಶಿಶುನಾಳ ಷರೀಪ, ಕನಕದಾಸ ಕ್ಷೇತ್ರಗಳ ಅಭಿವೃದ್ಧಿಗೆ ತಲಾ 1 ಕೋ.ರುಗಳ ಅನುದಾನ.

ಪ್ರವಾಸೋದ್ಯಮ

ರಾಜ್ಯದ ಎಲ್ಲ ರಸ್ತೆಗಳ ಮೇಲ್ದರ್ಜೆಗೆ ವಿಶೇಷ ಅನುದಾನ. ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಕ್ರಮ. ಮೈಸೂರಿನ ಕುಕ್ಕರಹಳ್ಳಿ ಕೆರೆ ಅಭಿವೃದ್ಧಿ. ಸಸ್ಯ ಮತ್ತು ಪ್ರಾಣಿ ಸಂಪತ್ತು ಉಳಿಸಲು ಕ್ರಮ. ಕೃಷ್ಣಾ-ಕಾವೇರಿ ಕಣಿವೆಯ ಬಾಕಿ ಕಾಮಗಾರಿ ಪೂರ್ಣ. ಕಳಸಾ- ಬಂಡೂರಿ ಕಾಮಗಾರಿ ಮುಂದುವರಿಕೆ. ಸಮಗ್ರ ಜಲ ನಿರ್ವಹಣೆಗಾಗಿ ಸೂಕ್ತ ನೀತಿ ರೂಪಿಸುವುದು. ಮುಂದಿನ 5 ವರ್ಷಗಳಲ್ಲಿ 25 ಸಾವಿರ ಕೋಟಿ ರುಪಾಯಿಗಳ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ.

ವಾರ್ತಾ

ವಾರ್ತಾ ಇಲಾಖೆಗೆ 10 ಕೋ.ರುಗಳ ಅನುದಾನ. ಕನ್ನಡ ಚಲನಚಿತ್ರ ಅಕಾಡಮಿ ಸ್ಥಾಪನೆ. ಪತ್ರಕರ್ತರಿಗೆ 1 ಕೋ.ರುಗಳ ಕಲ್ಯಾಣ ನಿಧಿ. ಹಿರಿಯ ಪತ್ರಕರ್ತರಿಗೆ 50 ಲಕ್ಷ ರು.ಗಳ ಸಹಾಯಧನ. ಸ್ವರ್ಣ ಕಮಲ ಪ್ರಶಸ್ತಿ ಪಡೆದ ಚಿತ್ರಕ್ಕೆ ವಿಶೇಷ ಅನುದಾನ. ರಿಮೇಕ್ ಹೊರತುಪಡಿಸಿ ಉಳಿದ ಎಲ್ಲ ಕನ್ನಡ ಚಿತ್ರಗಳಿಗೆ ಅನುದಾನ. ಹಿರಿಯ ಕ್ರೀಡಾಪಟುಗಳಿಗೆ ಮಾಸಿಕ ಗೌರವಧನ ನೀಡಲು ನಿರ್ಧಾರ. ಸ್ಕೌಟ್ಸ್ ಮತ್ತು ಗೈಡ್ಸ್ ಅಕಾಡಮಿ ಅಭಿವೃದ್ದಿಗೆ 2 ಕೋ.ರುಗಳ ಅನುದಾನ. ಕ್ರೀಡಾಪಟುಗಳಿಗೆ ವಿಮೆ ಸೌಲಭ್ಯ. ಆಡಳಿತ ಸುಧಾರಣೆಗಾಗಿ ಹೆದ್ದಾರಿ ಮಾಹಿತಿ ಯೋಜನೆ ಜಾರಿ. ಗಣಕೀಕರಣ ಅಳವಡಿಕೆ. ಸೈಬರ್ ಕೆಫೆ ಸ್ಥಾಪನೆ.

(ದಟ್ಸ್ ಕನ್ನಡ ವಾರ್ತೆ)

ಶ್ರೀಸಾಮಾನ್ಯರ ಬಜೆಟ್ ಮಂಡಿಸಿದ ಯಡಿಯೂರಪ್ಪ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more