ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನ ವಿರೋಧಿ ಬಜೆಟ್ ಎಂದು ಪ್ರತಿಪಕ್ಷಗಳ ಟೀಕೆ

By Staff
|
Google Oneindia Kannada News

ಬೆಂಗಳೂರು, ಜು. 17 : ರಸಗೊಬ್ಬರ ಕೊರತೆ, ರೈತರ ಆತ್ಮಹತ್ಯೆ, ವಿದ್ಯುತ್ ಅಭಾವ, ಬರಗಾಲದ ಛಾಯೆ ಈ ಎಲ್ಲ ಗೊಂದಲ, ಸಮಸ್ಯೆಗಳ ನಡುವೆ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 2008-09ರ ಬಜೆಟ್ ಮಂಡಿಸಿದ್ದಾರೆ. ಬಿಜೆಪಿ ಶಾಸಕರು, ಸಚಿವರು ಯಡಿಯೂರಪ್ಪ ಅವರ ಆಯವ್ಯಯವನ್ನು ಜನಪರ ಬಜೆಟ್ ಎಂದು ಸ್ವಾಗತಿಸಿದ್ದಾರೆ. ಅನ್ನದಾತನಿಗೆ ಅಕ್ಷಯ ಪಾತ್ರೆ ಎಂದಿರುವ ಅವರು ದೇಶದಲ್ಲಿ ಮೊದಲ ಬಾರಿಗೆ ಬಿಜೆಪಿ ರೈತರಿಗೆ ಉಚಿತ ವಿದ್ಯುತ್ ನೀಡಿದೆ ಎಂದು ಹೇಳಿದ್ದಾರೆ. ಆದರೆ ವಿರೋಧ ಪಕ್ಷದ ಮುಖಂಡರು ಇದೊಂದು ಭರವಸೆಗಳ ಬಜೆಟ್, ಚುನಾವಣೆ ಬಜೆಟ್ ಎಂದು ಟೀಕಿಸಿದ್ದಾರೆ.

ಜನ ವಿರೋಧಿ ಬಜೆಟ್: ಸಿದ್ದರಾಮಯ್ಯ
ಇದೊಂದು ಅಸಮಾನತೆ ಬಜೆಟ್. ಪ್ರಣಾಳಿಕೆಯಲ್ಲಿನ ಕೆಜಿ ಅಕ್ಕಿಗೆ ರು. 2 ಏನಾಯಿತು. ಈ ಬೆಜೆಟ್ ಬಡವರಿಗೆ ಬರೆ ಹಾಕುವಂತ ಬಜೆಟ್ ಆಗಿದೆ. ಕೃಷಿ ವಲಯಕ್ಕೆ ಯಾರು ಮಾಡದಂತಹ ಕೆಲಸ ಮಾಡುತ್ತೇವೆ ಎಂದು ಹೇಳುತ್ತಿದ್ದ ಯಡಿಯೂರಪ್ಪನವರಿಗೆ ಏನು ಮಾಡಲು ಸಾಧ್ಯವಾಗಿಲ್ಲ. ಅಸಮಾನತೆ, ಸಾಮಾಜಿಕ ನ್ಯಾಯದಂತಹ ಹೋಗಲಾಡಿಸುವ ವಿಷಯಗಳು ಅದರಲ್ಲಿ ಕಾಣುತ್ತಿಲ್ಲ. ಜನವಿರೋಧಿ ಬಜೆಟ್ ಎಂದು ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಾಖ್ಯಾನಿಸಿದ್ದಾರೆ.

ಚುನಾವಣೆ ಬಜೆಟ್:ಮಲ್ಲಿಕಾರ್ಜುನ ಖರ್ಗೆ
ನೀರಾವರಿಗೆ ಆದ್ಯತೆಯಿಲ್ಲ. ಅಭಿವೃದ್ಧಿ ಪರವಿಲ್ಲ. ಅವರು ಪ್ರಣಾಳಿಕೆಯಲ್ಲಿ ಹೇಳಿದ್ದ ಯಾವ ಭರವಸೆಗಳನ್ನು ಈಡೇರಿಸಿಲ್ಲ. ಜನವಿರೋಧಿ ಬಜೆಟ್ ಎಂದು ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ. ಇದನ್ನು ಚುನಾವಣೆ ಬಜೆಟ್ ಎನ್ನಬಹುದು ಎಂದು ವಿಮರ್ಶಿಸಿದ್ದಾರೆ.

ನಿರಾಶಾದಾಯಕ ಬಜೆಟ್: ಕುಮಾರಸ್ವಾಮಿ
ಯಡಿಯೂರಪ್ಪ ಅವರ ಬಜೆಟ್ ತುಂಬಾ ನಿರಾಶಾದಾಯಕವಾಗಿದೆ. ಅನುದಾನದ ಬಜೆಟ್ ಎನ್ನಬಹುದು. ರೈತರನ್ನು ದಾರಿತಪ್ಪಿಸುವ ಬಜೆಟ್ ಎಂದರೂ ತಪ್ಪಲ್ಲ. ಹಳೆಯ ಯೋಜನೆಗಳನ್ನು ಜಾರಿಗೆ ತರಲಾಗಿಲ್ಲ. ಇನ್ನೂ ಹೊಸ ಯೋಜನೆಗಳು ಯಾವ ಪುರಷಾರ್ಥಕ್ಕೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X