ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್‌ವೈ ಚೊಚ್ಚಲ ಬಜೆಟ್‌‌ಗೆ ಕ್ಷಣ ಗಣನೆ

By Staff
|
Google Oneindia Kannada News

ಬೆಂಗಳೂರು, ಜು. 16 : ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ(ಜು.17) ಮಧ್ಯಾಹ್ನ 12 ಗಂಟೆಗೆ ಬಿಜೆಪಿ ಸರ್ಕಾರದ ಚೊಚ್ಚಲ ಬಜೆಟ್ ಅನ್ನು ಮಂಡಿಸಲಿದ್ದಾರೆ. ರೈತಪರ ಮತ್ತು ಜನಪರ ಎಂದು ಈಗಾಗಲೇ ಘೋಷಿಸಿರುವ ಅವರು, ಪ್ರಣಾಳಿಕೆಯಲ್ಲಿ ನೀಡಿರುವ ಎಲ್ಲ ಭರವಸಗಳನ್ನು ಈಡೇರಿಸುವ ಅನಿವಾರ್ಯತೆ ಎದುರಾಗಿದೆ.

ಆದರೆ ಮುಂಗಾರು ಮಳೆಯ ಕಣ್ಣಾ ಮುಚ್ಚಾಲೆಯಿಂದ ಜಲಾಶಯಗಳ ನೀರಿನ ಮಟ್ಟ ಕುಸಿದಿದೆ. ವಿದ್ಯುತ್ ಕ್ಷಾಮ ಮತ್ತು ಬರಗಾಲದ ಬಿಸಿ ಸರ್ಕಾರದ ಮೇಲೆ ಕರಿ ನೆರಳು ಚೆಲ್ಲಿದೆ. ಈ ಹಿನ್ನಲೆಯಲ್ಲಿ ಯಡಿಯೂರಪ್ಪ ಅವರಿಗೆ ಈ ಬಜೆಟ್ ಸವಾಲಾಗಿ ಪರಿಣಮಿಸಿದೆ. ಜನರ ನಿರೀಕ್ಷೆಯನ್ನು ಹುಸಿಗೊಳಿಸದೆ ಪ್ರಣಾಳಿಕೆಯಲ್ಲಿ ನೀಡಿರುವ ಬಹುತೇಕ ಆಶ್ವಾಸನೆಗಳನ್ನು ಬಜೆಟ್ ನಲ್ಲಿ ಮಂಡಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಪ್ರಣಾಳಿಕೆಯಲ್ಲಿನ ಭರವಸೆಗಳು
*ಹತ್ತು ಅಶ್ವಶಕ್ತಿಗಿಂತ ಕಡಿಮೆ ನೀರಾವರಿ ವಿದ್ಯುತ್ ಪಂಪುಗಳಿಗೆ ಉಚಿತ ವಿದ್ಯುತ್. ಬಾಕಿ ಇರುವು ವಿದ್ಯುತ್ ಬಿಲ್ ಮನ್ನಾ. ಗ್ರಾಮೀಣ ವಿದ್ಯುತ್ ಗ್ರಿಡ್ ಸ್ಥಾಪನೆ.
*ಭಾಗ್ಯಲಕ್ಷ್ಮಿಯ ಯೋಜನೆಯ ಪೂರ್ಣಫಲದ ಮೊತ್ತವನ್ನು 34 ಸಾವಿರ ರುಪಾಯಿಯಿಂದ 1ಲಕ್ಷದ ರುಗಳಿಗೆ ಹೆಚ್ಚಿಸುವುದು.
*60 ಸಾವಿರ ರುಪಾಯಿ ಆದಾಯವಿರುವ ಎಲ್ಲಾ ಕುಟುಂಬಗಳಿಗೆ ಸಮುದಾಯ ಆರೋಗ್ಯ ವಿಮೆ.
*ಆಸ್ಪತ್ರೆಗಳಲ್ಲಿ ಸುರಕ್ಷಿತ ಹೆರಿಗೆಗಾಗಿ ಪ್ರತಿ ಹೆರಿಗೆಗೆ ಒಂದು ಸಾವಿರ ಸಹಾಯಧನ.
*ಸ್ವಸಹಾಯ ಮತ್ತು ಸ್ತ್ರೀಶಕ್ತಿಸಂಘಗಳಿಗೆ ನೀಡುವ ಮೂಲಧನವನ್ನು 5 ರಿಂದ 10 ಸಾವಿರಕ್ಕೆ ಹೆಚ್ಚಿಸುವುದು ಮತ್ತು ಈ ಗುಂಪುಗಳಿಗೆ ಶೇ. 6ರ ಬಡ್ಡಿ ದರದಲ್ಲಿ ಸಾಲ.
*ಎರಡು ವರ್ಷದೊಳಗೆ ಎಲ್ಲಾ ತಾಲ್ಲೂಕು ಕೇಂದ್ರಗಳಿಗೆ ಸ್ತ್ರೀ ಶಕ್ತಿ ಭವನ.
*ವಿಚ್ಛೇದಿತ ಬಡ ಮಹಿಳೆಯರು ಪುನರ್ ವಿವಾಹ ಆಗುವವರೆಗೆ 400 ರುಪಾಯಿ ಮಾಸಾಶನ.
*ಆಶ್ರಯ ಮನೆಗಳಿಗೆ ಪಡೆದ ಸಾಲ ಮನ್ನಾ.
*ಸಮಾಜ ಕಲ್ಯಾಣ ವಸತಿ ನಿಲಯದಲ್ಲಿರುವ ವಿದ್ಯಾರ್ಥಿಗಳಿಗೆ ಈಗಿರುವ 500 ರುಪಾಯಿಯಿಂದ 750 ರುಪಾಯಿ ಸಹಾಯದನ.
*ಅಂಗವಿಕಲರ ಮಾಸಾಶನಕ್ಕೆ ಆದಾಯ ಮಿತಿ ತೆಗೆದುಹಾಕುವುದು.
*ಆಟೋ ಅಪಘಾತ ಪರಿಹಾರವನ್ನು 50 ಸಾವಿರದಿಂದ 1 ಲಕ್ಷ ರುಪಾಯಿವರೆಗೆ ಹೆಚ್ಚಿಸುವುದು.
*ಸಮಗ್ರ ಗ್ರಾಮೀಣಾಭಿವೃದ್ಧಿಗೆ ಪುರ ಯೋಜನೆ ಜಾರಿ. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗಾವಕಾಶ ಸೃಷ್ಟಿ.
*ಶೇ. 3ರ ಬಡ್ಡಿ ದರದಲ್ಲಿ ರೈತರಿಗೆ ಸಾಲ. ಕೃಷಿಗೆ ಬೆಂಬಲ ಬೆಲೆ ಮತ್ತು ಕೃಷಿ ಬೆಲೆ ಕುಸಿತಕ್ಕೆ ಬೆಂಬಲ ಬೆಲೆಗಾಗಿ ಆವರ್ತ ನಿಧಿ.
*ಕೃಷಿ ಉತ್ಪನ್ನ ಖರೀದಿಗಾಗಿ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ.
*ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಗೆ 2 ರುಪಾಯಿ ಪ್ರೋತ್ಸಾಹ ಧನ.
*ರೇಷ್ಮೆಗೆ ಬೆಂಬಲ ಬೆಲೆ.
*ಕೊಳಚೆ ರಹಿತ ನಗರಗಳ ನಿರ್ಮಾಣ.
*ವಿದ್ಯುತ್ ಉತ್ಪಾದನೆ ಹೆಚ್ಚಳ. ಮುಂದಿನ 5 ವರ್ಷಗಳಲ್ಲಿ 10 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಗೆ ಕ್ರಮ.
*ಕೃಷ್ಣಾ-ಕಾವೇರಿ ಕಣಿವೆಯ ಬಾಕಿ ಕಾಮಗಾರಿ ಪೂರ್ಣ. ಕಳಸಾ- ಬಂಡೂರಿ ಕಾಮಗಾರಿ ಮುಂದುವರಿಕೆ. ಸಮಗ್ರ ಜಲ ನಿರ್ವಹಣೆಗಾಗಿ ಸೂಕ್ತ ನೀತಿ ರೂಪಿಸುವುದು.
*ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳ ಜೋಡಣೆ.
*ಮುಂದಿನ 5 ವರ್ಷಗಳಲ್ಲಿ 25 ಸಾವಿರ ಕೋಟಿ ರುಪಾಯಿಗಳ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X