ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀಡಿ, ಸಿಗರೇಟು ಸೇದುವವರಿಗೆ ರಾಮದಾಸ್ ಕಿಡಿ

By Staff
|
Google Oneindia Kannada News

ಪಾಟ್ನಾ, ಜು. 12 : ಧೂಮಪಾನಿಗಳ ವಿರುದ್ಧ ಸಮರ ಸಾರಿರುವ ಕೇಂದ್ರ ಆರೋಗ್ಯ ಸಚಿವ ಅನ್ಬುಮಣಿ ರಾಮದಾಸ್, ಅಕ್ಟೋಬರ್ 2 ರಿಂದ ದೇಶದಾದ್ಯಂತ ಧೂಮಪಾನ ನಿಷೇಧ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು ಎಂದಿದ್ದಾರೆ. ಬಿಹಾರದಲ್ಲಿ ಜನಸಂಖ್ಯಾ ದಿನ(ಜು.11)ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಾಮದಾಸ್ ಮಾತನಾಡುತ್ತಾ ಸಾರ್ವಜನಿಕ ಸ್ಥಳಗಳಲ್ಲಿ ಈಗಾಗಲೇ ಧೂಮಪಾನಕ್ಕೆ ನಿಷೇಧ ಹೇರಲಾಗಿದ್ದು, ಜತೆಗೆ ಖಾಸಗಿ ಹಾಗೂ ಸಾರ್ವಜನಿಕ ಕಟ್ಟಡಗಳಲ್ಲೂ ಸೇದುವುದನ್ನು ತಡೆಗಟ್ಟಲು ಆದೇಶ ಹೊರಡಿಸುವುದಾಗಿ ಹೇಳಿದರು.

ಧೂಮಪಾನಿಗಳು ಇನ್ನು ಮುಂದೆ ಬೀಡಿ, ಸಿಗರೇಟು ಸೇದುವುದಿದ್ದರೆ ಅದಕ್ಕೆ ರಸ್ತೆ(ಸಾರ್ವಜನಿಕವಲ್ಲದ)ಗಳಲ್ಲಿ ಅವಕಾಶವಿದೆ. ಮನೆಯಲ್ಲಿ ಸೇದಬಹುದಾದರೂ, ಮಲಗುವ ಕೋಣೆಯಲ್ಲಿ ಸೇದಲು ಪತ್ನಿಯ ಒಪ್ಪಿಗೆ ಪಡೆಯಬೇಕಾಗುತ್ತದೆ. ಈ ಮುಂಚೆ ಕೇಂದ್ರ ಸರ್ಕಾರ ನೀಡಿದ ಆದೇಶದಂತೆ ಬಸ್ ನಿಲ್ದಾಣ, ರೇಲ್ವೇ ನಿಲ್ದಾಣ, ಶಾಪಿಂಗ್ ಮಾಲ್, ಪೂಜಾ ಸ್ಥಳಗಳು, ಆಸ್ಪತ್ರೆ, ಶಾಲಾ ಕಾಲೇಜು ಆವರಣ ಮುಂತಾದೆಡೆ ಧೂಮಪಾನ ಮಾಡಿದರೆ 100 ರಿಂದ 500 ರು. ದಂಡ ವಿಧಿಸುವ ಸೂಚನೆ ನೀಡಲಾಗಿತ್ತು. ಆದರೆ ಕಾನೂನು ಸರಿಯಾಗಿ ಜಾರಿಯಾಗಿರಲಿಲ್ಲ. ಈಗ ಸದರಿ ಆದೇಶಕ್ಕೆ ಇನ್ನಷ್ಟು ಅಂಶಗಳನ್ನು ಸೇರಿಸಿ ಗಾಂಧಿ ಜಯಂತಿ ದಿನದಂದು ಮತ್ತೆ ಹೊಸ ಆದೇಶ ನೀಡಲಾಗುವುದು ಎಂದು ಸಚಿವ ರಾಮದಾಸ್ ಹೇಳಿದ್ದಾರೆ.

ಆರೋಗ್ಯವೇ ಭಾಗ್ಯ
ತಂಬಾಕು ಸೇವನೆ ಭಾರತದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ. ಪ್ರತಿ ವರ್ಷ ದಶಲಕ್ಷ ಮಂದಿ ಕ್ಯಾನ್ಸರ್ ನಿಂದ ಸಾಯುತ್ತಿದ್ದಾರೆ. ಶಾಲಾ ಕಾಲೇಜಿನ ಮಕ್ಕಳು ತಂಬಾಕು ಹಾಗೂ ಮಾದಕ ದ್ರವ್ಯಗಳಿಗೆ ಅಂಟಿಕೊಳ್ಳುತ್ತಿರುವುದು ಆತಂಕಕಾರಿ ವಿಷಯವಾಗಿದೆ ಎಂದಿದ್ದಾರೆ.ಇದಲ್ಲದೆ ಶಾಲಾ ಆವರಣದಲ್ಲಿ ಕರಿದ ಪದಾರ್ಥ, ಶುಚಿ ಇರದ ಹಣ್ಣುಗಳ ಮಾರಾಟವನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗುವುದು. ತಂಪು ಪಾನೀಯದಿಂದ ಯುವಜನಾಂಗದ ದೇಹಕ್ಕೆ ಅಧಿಕ ಪ್ರಮಾಣದ ಸಕ್ಕರೆ ಅಂಶ ಸೇರುತ್ತಿದೆ.ತಂಪು ಪಾನೀಯಗಳ ವಿರುದ್ಧ ಕ್ರಮ ಕೈಗೊಳ್ಳ ಬೇಕಾಗಿದೆ ಎಂದು ಡಾ. ರಾಮದಾಸ್ ಹೇಳಿದರು.

(ಏಜನ್ಸೀಸ್ )

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X