ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹುಬ್ಬಳ್ಳಿಯಲ್ಲಿ ಡಕಾಯಿತಿ, 15 ಲಕ್ಷ ರು ದರೋಡೆ
ಹುಬ್ಬಳ್ಳಿ, ಜು. 12 : ಐದು ಜನರಿರುವ ಡಕಾಯಿತರ ತಂಡವೊಂದು ಇಲ್ಲಿನ ವ್ಯಾಪಾರಿಯೊಬ್ಬರ ಮನೆಗೆ ನುಗ್ಗಿ 15 ಲಕ್ಷ ರು. ನಗದು ಮತ್ತು ಅಪಾರ ಪ್ರಮಾಣದ ಚಿನ್ನ ಮತ್ತು ಬೆಳ್ಳಿ ಒಡವೆಗಳನ್ನು ದೋಚಿ ಪರಾರಿಯಾಗಿದೆ.
ಶುಕ್ರವಾರ ರಾತ್ರಿ ಮಾರಕಾಸ್ತ್ರಗಳಿದ್ದ ಐವರ ತಂಡ ಬಲವಂತವಾಗಿ ವ್ಯಾಪಾರಿಯ ಮನೆಯೊಳಗೆ ನುಗ್ಗಿದೆ. ಮನಮಂದಿಯನ್ನೆಲ್ಲ ಬೆದರಿಸಿ ಕೋಣೆಯೊಂದಕ್ಕೆ ನೂಕಿದ ಡಕಾಯಿತರು ಮನೆಯನ್ನೆಲ್ಲ ಹುಡುಕಾಡಿ ನಗದು ಮತ್ತು ಆಭರಣಗಳೊಂದಿಗೆ ಜಾಗ ಖಾಲಿ ಮಾಡಿದ್ದಾರೆ.
ಡಕಾಯಿತರನ್ನು ಹಿಡಿಯಲು ವಿಶೇಷ ದಳವನ್ನು ರಚಿಸಲಾಗಿದ್ದು ಬೆರಳಚ್ಚು ತಜ್ಞರು ಮತ್ತು ಶ್ವಾನದಳವನ್ನೂ ಕಾರ್ಯಾಚರಣೆಗಿಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಕಾಯಿತರು ಕನ್ನಡದಲ್ಲಿ ಮಾತನಾಡುತ್ತಿದ್ದರು. ವ್ಯಾಪಾರಿಯ ಕುಟುಂಬದವರಿಗೆ ತಿಳಿದ ಯಾರಿಂದಲೋ ನಡೆದ ಪೂರ್ವ ನಿಯೋಜಿತ ಕೃತ್ಯವಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
(ಯುಎನ್ಐ)
Comments
Story first published: Saturday, July 12, 2008, 15:16 [IST]