ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರುಷಿ ಕೊಲೆ ಪ್ರಕರಣ: ರಾಜೇಶ್ ತಲ್ವಾರ್ ನಿರ್ದೋಷಿ

By Staff
|
Google Oneindia Kannada News

ನವದೆಹಲಿ, ಜು. 12 : ಇಡೀ ದೇಶದ ಗಮನ ಸೆಳೆದಿದ್ದ ನೋಯಿಡಾ ಜೋಡಿ ಕೊಲೆ ಪ್ರಕರಣ ತನಿಖೆ ಬಹುತೇಕ ಕೊನೆ ಹಂತ ತಲುಪಿದೆ. ಡಾ.ರಾಜೇಶ್ ತಲ್ವಾರ್ ಆಸ್ಪತ್ರೆಯ ಕಾಂಪೌಂಡರ್ ಕೃಷ್ಣ , ಆರುಷಿ ತಲ್ವಾರ್ ಮತ್ತು ಹೇಮರಾಜ್ ಜೋಡಿ ಕೊಲೆ ಪ್ರಕರಣ ಮುಖ್ಯ ಆರೋಪಿ ಹಾಗೂ ರಾಜ್ ಕುಮಾರ್ ಮತ್ತು ವಿಜಯ್ ಮಂಡಲ್ ಸಹ ಆರೋಪಿಗಳೆಂದು ಸಿಬಿಐನ ಜಂಟಿ ನಿರ್ದೇಶಕ ಅರುಣಕುಮಾರ್ ತಿಳಿಸಿದ್ದಾರೆ.

ಈ ಕುರಿತು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರುಷಿ ತಂದೆ ಡಾ.ರಾಜೇಶ್ ತಲ್ವಾರ್ ನಿರ್ದೋಷಿ ಎಂದು ಪ್ರಕಟಿಸಿದರು. ಕಳೆದ ಅನೇಕ ತಿಂಗಳಿನಿಂದ ದೇಶದಲ್ಲಿ ಭಾರಿ ಪ್ರಚಾರ ಪಡೆದಿದ್ದ ಜೋಡಿ ಕೊಲೆ ಪ್ರಕರಣ ಈ ಮೂಲಕ ಅಂತಿಮ ತೆರೆ ಬಿದ್ದಂತಾಯಿತು. ಕೃಷ್ಣ, ರಾಜ್ ಕುಮಾರ್ ಮತ್ತು ವಿಜಯ್ ಮಂಡಲ್ ಅವರೊಂದಿಗೆ ನಡೆಸಿದ ಸುದೀರ್ಘ ವಿಚಾರಣೆ ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯದ ಮೇರೆಗೆ ತನಿಖೆ ಒಂದು ಹಂತವನ್ನು ಬಂದು ತಲುಪಿದ್ದು, ಈ ಮೂವರು ಜೋಡಿಯ ಪಾಲುದಾರರು ಎಂದು ಅರುಣ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಈ ಮೂವರು ಕೊಲೆಯಾದ ಹೇಮರಾಜ್ ಕೊಠಡಿಯಲ್ಲಿ ಕುಳಿತು ಮಧ್ಯ ಸೇವಿಸಿ ಕೊಲೆ ಸಂಚು ರೂಪಿಸಿದ್ದಾರೆ. ಮೂದಲು ಹೇಮರಾಜ್ ನನ್ನು ಕೊಲೆ ಮಾಡಿ ನಂತರ ಆರುಷಿ ಕೊಠಡಿಗೆ ತೆರಳಿ ಅತ್ಯಾಚಾರಕ್ಕೆ ಪ್ರಯತ್ನಿಸಿ ವಿಫಲವಾಗಿ ಕೊನೆಯಲ್ಲಿ ಹತ್ಯೆ ಮಾಡುವ ನಿರ್ಧಾರಕ್ಕೆ ಈ ಮೂವರು ಆರೋಪಿಗಳು ಬಂದಿದ್ದಾರೆ ಎಂದು ಸುದ್ದಿಗಾರರಿಗೆ ವಿವರಿಸಿದರು. ರಕ್ತ ಪರೀಕ್ಷೆ, ಎನ್ ಡಿಎ ಪರೀಕ್ಷೆಗಳು ಈ ಮೂವರು ಆರೋಪಿಗಳು ಎನ್ನುವುದನ್ನು ಸಾಬೀತುಪಡಿಸುತ್ತವೆ ಎಂದು ಅವರು ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X