ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

12 ಲಕ್ಷ ಹೊಸ ಪಡಿತರ ಚೀಟಿ ಹಂಚಿಕೆ:ಸಚಿವೆ ಶೋಭಾ

By Staff
|
Google Oneindia Kannada News

ಬೆಂಗಳೂರು, ಜು. 6 :ಇನ್ನೆರಡು ತಿಂಗಳಲ್ಲಿ 12 ಲಕ್ಷ ಹೊಸ ಪಡಿತರ ಚೀಟಿಗಳನ್ನು ವಿತರಿಸುವುದಾಗಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಬಡತನ ರೇಖೆಗಿಂತ ಕೆಳಗಿರುವ ಜನ(ಬಿಪಿಎಲ್)ರ ವಾರ್ಷಿಕ ವರಮಾನದ ಮಿತಿಯನ್ನು ಹಿಗ್ಗಿಸಲಾಗಿದೆ. ಈ ವರೆಗೂ ವಾರ್ಷಿಕವಾಗಿ 11, 800 ರು ಆದಾಯ ಇದ್ದರೆ ಈ ಕಾರ್ಡ್ ನೀಡಲಾಗುತ್ತಿತ್ತು ಇದನ್ನು ವಾರ್ಷಿಕ 30,000 ರು ಆದಾಯವಿರುವವರಿಗೂ ಸಹಾ ನೀಡಲಾಗುತ್ತದೆ. 65 ವಯಸ್ಸಿನ ವಯೋವೃದ್ಧರಿಗಾಗಿ ಮಾಸಿಕ 400 ರುಮಾಸಿಕವಾಗಿ ನೀಡಲು 250 ಕೋಟಿ ತೆಗೆದಿರಿಸಲಾಗಿದೆ. ಎಂದು ಯಶವಂತಪುರ ಕ್ಷೇತ್ರದ ತಿಪ್ಪೇನಹಳ್ಳಿಯಲ್ಲಿ ಹೇಳಿದ್ದಾರೆ.

ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಗ್ರಾಮಸ್ಥರಿಗೆ ಹೊಲಿಗೆ ಯಂತ್ರ, ಬಾಣಂತಿಗೆ ಆರೈಕೆ ಕಿಟ್, ವಿಧವೆಯರಿಗೆ ಮಾಸಿಕ ಹಣ, ರೈತರಿಗೆ ಬೀಜ ಹಾಗೂ ಸಸಿಗಳನ್ನು ಸಚಿವೆ ಶೋಭಾ ವಿತರಿಸಿದರು.

(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X