ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್ ಅಭಾವದ ದಿನಗಳು ಬರಲಿವೆ?

By Staff
|
Google Oneindia Kannada News

ಬೆಂಗಳೂರು, ಜು. 2 : ತೈಲ ಬೆಲೆ ಏರಿಕೆಯಾಗಿರುವುದು ನಿಜ. ಗ್ರಾಹಕರು ಸರ್ಕಾರ ನಿಗದಿಪಡಿಸಿರುವ ಬೆಲೆಯನ್ನು ತೆತ್ತು ಪೆಟ್ರೋಲ್ ಮತ್ತು ಡಿಸೇಲ್ ತುಂಬಿಸಿಕೊಳ್ಳಬೇಕೆಂದರೆ ಬಂಕ್ ಗಳಲ್ಲಿ ಪೆಟ್ರೋಲ್ ಸಿಗುತ್ತಿಲ್ಲ. ಈ ಕಾರಣಕ್ಕೆ ಬಂಕ್ ಮಾಲೀಕರು 'ನೋ ಸ್ಟಾಕ್ 'ಬೋರ್ಡ್ ನ್ನು ನೇತು ಹಾಕಿದ್ದಾರೆ. ಹೌದು ನಂಬಲೇಬೇಕು, ಕಳೆದ ಎರಡು ಮೂರು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆ ಪೆಟ್ರೋಲ್ ಅಭಾವ ಕಂಡುಬಂದಿದೆ. ಒಂದು ಅಂದಾಜಿನ ಪ್ರಕಾರ ಬೆಂಗಳೂರು ನಗರದಲ್ಲಿ ಪ್ರತಿ ದಿನ 1.5 ಲಕ್ಷ ಲೀಟರ್ ಪೆಟ್ರೋಲ್ ಕೊರತೆ ಎದುರಾಗಿದೆ.

ಒಂದು ಮೂಲದ ಪ್ರಕಾರ, ಇದೊಂದು ವ್ಯವಸ್ಥಿತವಾದ ಸಮಸ್ಯೆಯಾಗಿದ್ದು, ಕೃತಕ ಅಭಾವವನ್ನು ಸೃಷ್ಟಿಸಿರುವ ತೈಲ ಕಂಪನಿಗಳು ಬ್ರಾಂಡೆಡ್ ಪೆಟ್ರೋಲ್ ಮತ್ತು ಡಿಸೇಲ್ ಮಾರಾಟ ಮಾಡುವುದಕ್ಕೆ ಹೂಡಿರುವ ತಂತ್ರ ಎನ್ನಲಾಗಿದೆ. ನಗರದ ಅನೇಕ ಕಡೆಗಳಲ್ಲಿ ಅನ್ ಲೆಡೆಡ್ ಪೆಟ್ರೋಲ್ ಸಿಗುತ್ತಿಲ್ಲ. ಇದೀಗ ಮಂಗಳವಾರದಿಂದ ಲಾರಿ ಮಾಲೀಕರ ಅನಿರ್ಧಿಷ್ಟಾವದಿ ಮುಷ್ಕರ ಆರಂಭವಾಗಿರುವ ಹಿನ್ನಲೆಯಲ್ಲಿ ಈ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆಗಳಿವೆ.

ನಗರಕ್ಕೆ ಪ್ರತಿ ದಿನ 5 ಲಕ್ಷ ಲೀಟರ್ ಪೆಟ್ರೋಲ್ ಹಾಗೂ ಡಿಸೇಲ್ ಅಗತ್ಯವಿದೆ. ಆದರೆ ಪೆಟ್ರೋಲಿಯಂ ಕಂಪನಿಗಳು ಸ್ಟಾಕ್ ಇಲ್ಲ ಎಂಬ ಕಾರಣ ನೀಡುತ್ತವೆ ಎಂದು ಪೆಟ್ರೋಲ್ ಡಿಸೇಲ್ ಅಸೋಸಿಯೇಷನ್ ತಿಳಿಸಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ತೈಲ ಬೆಲೆ ಏರಿರುವುದು ಇದಕ್ಕೆ ಕಾರಣವಾಗಿದೆ. ಈಗಾಗಲೇ ತಮಿಳುನಾಡಿನಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಕೊರತೆಯಿಂದ ಭಾರಿ ಸಮಸ್ಯೆ ಎದುರಾಗಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X