ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಂಚ ಪ್ರಪಂಚದ ಚೆಂದದ ಚಿತ್ರಗಳ ಅನಾವರಣ

By Staff
|
Google Oneindia Kannada News

ಬೆಂಗಳೂರು, ಜು.2: ಎಸ್. ಒ. ಎಸ್. ಮಕ್ಕಳ ಗ್ರಾಮದ ಸಹಾಯ ನಿಧಿಯ ಉದ್ದೇಶದಿಂದ ಮೂರ್ನಾಲ್ಕು ಕಲಾವಿದರು ಒಟ್ಟಿಗೆ ತಮ್ಮ ಚಿತ್ರಗಳನ್ನು ಪ್ರದರ್ಶನ ಮಾಡುತ್ತಿದ್ದೇವೆ. ಚಿತ್ರಪ್ರದರ್ಶನದ ಜತೆ ಶಿಲ್ಪ ಕಲಾಕೃತಿಗಳ ಪ್ರದರ್ಶನವನ್ನು ಚಿತ್ರಕಲಾ ಪರಿಷತ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಲಾವಿದ ಪ್ರಮೋದ್ ಪಿ.ಟಿ ತಿಳಿಸಿದರು.

ಜುಲೈ 3 ರಿಂದ ಚಿತ್ರಕಲಾ ಪರಿಷತಿನ ಗ್ಯಾಲರಿ 1 ರಲ್ಲಿ ಸ್ತ್ರೀತ್ವದ ಚಿತ್ರ ವ್ಯಾಖ್ಯೆ ಎಂಬ ವಿಷಯದ ಮೇಲಿನ ಚಿತ್ರಗಳ ಪ್ರದರ್ಶನ ಹಾಗೂ ಬಾಲಕಾಂಡದ ಮೋಜು ಹಾಗೂ ಕಲ್ಪನೆ ಎಂಬ ಕಲ್ಪನೆಯ ಶಿಲ್ಪಕಲಾಕೃತಿಯ ಪ್ರದರ್ಶನವಿರುತ್ತದೆ. ಎಸ್.ಓ.ಎಸ್. ಮಕ್ಕಳ ಗ್ರಾಮ ದ ನಿರ್ದೇಶಕರಾದ ಎಂ. ಕೆ. ಲೋಕೇಶ್ ಅವರು ಮುಖ್ಯ ಅತಿಥಿಗಳಾಗಿ ಬರಲಿದ್ದಾರೆ. ಕುಂಚಕಲಾವಿದ ಕೈಚಳಕವನ್ನು ನೋಡಿ ಹಾರೈಸಲು ಆಸಕ್ತರು ಭೇಟಿ ನೀಡಬಹುದು

(ದಟ್ಸ್ ಸಭೆಸಮಾರಂಭ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X