ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೂರುಪಾರು: ಮೈಶುಗರ್ ಕಾರ್ಖಾನೆಗೆ ಪುನಶ್ಚೇತನ

By Staff
|
Google Oneindia Kannada News

ಮಂಡ್ಯ, ಜೂ. 30 : ನಗರದಲ್ಲಿರುವ ಮೈಶುಗರ್ ಕಾರ್ಖಾನೆಯ ಪುನಶ್ಚೇತನಕ್ಕೆ 80 ಕೋಟಿ ರುಪಾಯಿಗಳ ಯೋಜನೆಯೊಂದನ್ನು ಸಿದ್ಧಪಡಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರಗೌಡ ಅವರು ಇಂದು (ಜೂ.30) ತಿಳಿಸಿದರು.ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಸರ್ಕಾರ ಮೈಶುಗರ್ ಸಕ್ಕರೆ ಕಾರ್ಖಾನೆಗೆ ಪುನಶ್ಚೇತನದ ಕಡೆಗೆ ಗಮನಹರಿಸಿದ್ದು, ಅದರ ಅಭಿವೃದ್ಧಿಗೆ 80 ಕೋಟಿ ರುಪಾಯಿಗಳ ಯೋಜನೆಯನ್ನು ರೂಪಿಸಿಲಾಗಿದೆ. ಶೀಘ್ರದಲ್ಲಿ ಯೋಜನೆಗೆ ಚಾಲನೆ ನೀಡಲಾಗುವುದು ಎಂದರು.

ಮತ್ತೆ ಗುಡುಗಿದ ಈಶ್ವರಪ್ಪ
ಸುಭದ್ರ ಸರ್ಕಾರ ನೀಡುವುದೇ ಬಿಜೆಪಿ ಗುರಿ. ಅದಕ್ಕಾಗಿ ಅನ್ಯ ಪಕ್ಷಗಳನ್ನು ಒಡೆಯಲು ಸಿದ್ಧ ಎನ್ನುವ ವಿವಾದಾಸ್ಪದ ಹೇಳಿಕೆಯನ್ನು ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ಇಂಧನ ಸಚಿವ ಈಶ್ವರಪ್ಪ ಪಕ್ಷ ಒಡೆಯುವ ಅರ್ಥದಲ್ಲಿ ಮಾತನಾಡಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತೇಪೆ ಹಚ್ಚಲು ಮುಂದಾಗಿದ್ದರು. ಇದರ ಬೆನ್ನಲ್ಲೇ ಈಶ್ವರಪ್ಪ ಮತ್ತೆ ಗುಡುಗಿದ್ದಾರೆ. ಗದಗನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಜನಪರ ಆಡಳಿತ ನೀಡಲಿದೆ. ಒಂದು ವೇಳೆ ಬೇರೆ ಪಕ್ಷದವರು ಬಿಜೆಪಿ ಪಕ್ಷವನ್ನು ಒಡೆಯಲು ಮುಂದಾದಲ್ಲಿ, ನಾವು ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ ಎಂದು ಗುಡುಗಿದರು.

ಬಲೆಗೆ ಬಿದ್ದ ಸಣ್ಣ ಮೀನುಗಳು!
ಚಾಮರಾಜನಗರದಲ್ಲಿ ಲಂಚ ಸ್ವೀಕರಿಸುತ್ತಿದ್ದ ಇಬ್ಬರು ಸರ್ವೇಯರ್ ಇಲಾಖೆಯ ನೌಕರರು ಸೋಮವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಶಶಿಕಾಂತ ಮತ್ತು ಮಹದೇವ ಪ್ರಸಾದ ಸಿಕ್ಕಿಬಿದ್ದ ಸರ್ವೇಯರ್ ಗಳು. ಜಮೀನು ವಿಷಯಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರಿಂದ 4 ಸಾವಿರ ರುಪಾಯಿಗಳ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ಲೋಕಾಯುಕ್ತರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X