ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖ್ಯಾತ ಸಾಹಿತಿ ಜಿ.ಟಿ.ನಾರಾಯಣರಾವ್ ಇನ್ನಿಲ್ಲ

By Staff
|
Google Oneindia Kannada News

G T Narayana Raoಮೈಸೂರು, ಜೂ. 27 : ಮೆದುಳಿನ ತೊಂದರೆಯಿಂದ ಬಳಲುತ್ತಿದ್ದ ವೈಜ್ಞಾನಿಕ ಬರಹಗಾರ ಹಾಗೂ ಸಂಗೀತ ಕ್ಷೇತ್ರದ ದಿಗ್ಗಜ ಜಿ.ಟಿ.ನಾರಾಯಣರಾವ್(82) ಶುಕ್ರವಾರ ಬೆಳಗ್ಗೆ ನಗರದ ವಿಕ್ರಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಇತ್ತೀಚೆಗೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ವಿಕ್ರಂ ಆಸ್ಪತ್ರೆಗೆ ಗುರುವಾರ ರಾತ್ರಿ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಾರಾಯಣರಾವ್ ಇಂದು ಬೆಳಗ್ಗೆ ವಿಧಿವಶರಾದರು. ಮೃತರು ಪತ್ನಿ (ಲಕ್ಷ್ಮೀ ದೇವಿ) ಮೂವರು ಮಕ್ಕಳು(ಅಶೋಕವರ್ಧನ,ಆನಂದವರ್ಧನ ಮತ್ತು ಅನಂತವರ್ಧನ), ಅಪಾರ ಬಂಧು ಬಳಗ, ಹಿತೈಷಿಗಳು, ಶಿಷ್ಯರು ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ. ನಾರಾಯಣರಾವ್ ಅವರ ನಿಧನಕ್ಕೆ ಅವರ ಶಿಷ್ಯ ವರ್ಗ, ಸಾಹಿತಿಗಳು, ಅಭಿಮಾನಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಬೆಳಗ್ಗೆ 11 ಗಂಟೆಗೆ ನಿಧನರಾದ ನಾರಾಯಣರಾವ್ ಅವರ ಪಾರ್ಥೀವ ಶರೀರವನ್ನು ನಗರ ಸರಸ್ವತಿ ಪುರಂ ನಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದೆ. ನಾರಾಯಣರಾವ್ ಅವರ ಅಭಿಲಾಷೆಯಂತೆ ನಗರದ ಜೆಎಸ್ಎಸ್ ಮೆಡಿಕಲ್ ಕಾಲೇಜಿಗೆ ಅವರ ದೇಹವನ್ನು ನೀಡಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.

ಜನಪ್ರಿಯ ವಿಜ್ಞಾನ ಲೇಖಕ

'ಮುಗಿಯದ ಪಯಣ' ಜಿಟಿಎನ್ ಅವರ ಆತ್ಮಕಥೆ. 'ಕೊಡಗಿನ ಸುಮಗಳು' ಎಂಬ ಕಥೆ ರಚಿಸಿದ್ದರು. 'ಅತ್ರಿಸುನುವಾಚ' ಎಂಬ ಕಗ್ಗಗಳ ಮಾದರಿಯ ಚುಟುಕಗಳನ್ನು ಅನಾವರಣಗೊಳಿಸುವ ಉದ್ದೇಶಹೊಂದಿದ್ದರು. ಸಂಗೀತ ಬಗ್ಗೆ ಶ್ರುತಗಾನ, ಐನ್ ಸ್ಟೀನ್, ಚಂದ್ರಶೇಖರ್, ನಕ್ಷತ್ರಲೋಕ, ಸೈಂಟಿಫಿಕ್ ಟೆಂಪರ್ಮೆಂಟ್ ಮುಂತಾದ ವೈಜ್ಞಾನಿಕ ಬರಹಗಳನ್ನು ಬರೆದಿದ್ದಾರೆ. ಸಾಹಿತ್ಯಲೋಕ ಮತ್ತು ಸಂಗೀತ ಕ್ಷೇತ್ರದಲ್ಲಿ ಅಪಾರ ಕೃಷಿ ಮಾಡಿದ್ದ ನಾರಾಯರಾವ್ ಅವರು ಸ್ಟಾರ್ ಆಫ್ ಮೈಸೂರು, ಮೈಸೂರು ಮಿತ್ರ ಪತ್ರಿಕೆಗಳು ಸೇರಿದಂತೆ ನಾಡಿನ ಹಲವು ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುತ್ತಿದ್ದರು. ವಿಶೇಷವಾಗಿ ವೈಜ್ಞಾನಿಕ ಬರಹಕ್ಕೆ ಆಧ್ಯತೆ ನೀಡುತ್ತಿದ್ದರು. ರಾಜ್ಯೋತ್ಸವ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ಮೈಸೂರು ವಿವಿಯ ಗೌರವ ಡಾಕ್ಟರೇಟ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಗಳಿಸಿದ್ದರು.

ಸಂತಾಪ : ನಾರಾಯಣರಾವ್ ನಿಧನಕ್ಕೆ ಖ್ಯಾತ ಸಾಹಿತಿಗಳಾದ ಸಿ.ಪಿ.ಕೃಷ್ಣಕುಮಾರ್, ಡಾ.ರಾಮಚಂದ್ರ, ಪ್ರೋ.ಅರವಿಂದ ಮಾಲಗತ್ತಿ, ಪ್ರೋ.ನಟರಾಜ್, ಪ್ರೋ. ಪಂಡಿತರಾಧ್ಯ, ಕೆ.ಟಿ.ವೀರಪ್ಪ, ಸಿ.ನಾಗಣ್ಣ, ಶ್ರೀಕಂಠ ಗುಂಡಪ್ಪ, ಪ್ರೊ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ರಂಗಾಯಣದ ಪ್ರಭಾರಿ ಮುಖ್ಯಸ್ಥ ಮಾಜಿ ಮೇಯರ್ ಮೂಡಾಮಣಿ, ರಂಗಾಯಣದ ಮಾಜಿ ನಿರ್ದೇಶಕ ಸಿ.ಬಸಲಿಂಗಯ್ಯ ಮತ್ತತರರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X