ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ತಂತ್ರಜ್ಞಾನ ದುರ್ಬಳಕೆಯ ಪರಮಾವಧಿ

By Staff
|
Google Oneindia Kannada News

Google Earth Sample imageಲಂಡನ್, ಜೂ.18: ತಂತ್ರಜ್ಞಾನದ ದುರ್ಬಳಕೆಗೆ ಇತ್ತೀಚೆಗೆ ಉದಾಹರಣೆ ಎಂಬಂತೆ, ಗೂಗಲ್ ಅರ್ಥ್ ಬಳಸಿ, ಶ್ರೀಮಂತ ನಾಗರೀಕರ ಮನೆಯ ಈಜುಕೊಳವನ್ನು ಆಯ್ದುಕೊಂಡು, ಫೇಸ್ ಬುಕ್ ಮುಂತಾದ ಸಮಾಜಮುಖಿ ಜಾಲಗಳನ್ನು ಬಳಸಿ ಇಂಗ್ಲೆಂಡಿನ ಯುವ ಪೀಳಿಗೆಗೆ ಕಂಡಕಂಡವರ ಈಜುಕೊಳದಲ್ಲಿ ಮೋಜಿನ ವಿಹಾರ ಮಾಡುವುದು ಈಗ ಸಾಮಾನ್ಯ ಸಂಗತಿಯಾಗಿದೆ.

ಕ್ರಷ್ ಪಾರ್ಟಿಗಳನ್ನು ಆಯೋಜನೆಗೆ ಫೇಸ್ ಬುಕ್ ಬಳಸಿ, ರಾತ್ರೋರಾತ್ರಿ ನಾಗರೀಕರ ಮನೆಗೆ ನುಗ್ಗಿ ಅವರ ಈಜುಕೊಳದಲ್ಲಿ ಬೇಡದ ಅತಿಥಿಗಳಾಗಿ, ಮಜ ಮಾಡುತ್ತಿದ್ದಾರೆ. ಬೀಯರ್ ಸೇವಿಸಿ, ರಾತ್ರಿಯಿಡಿ ಕುಣಿದು, ಕುಪ್ಪಳಿಸಿ, ಅರಚಾಡಿ ಗಲೀಜು ಮಾಡಿ ಮನೆಯವರಿಗೆ ಹುಚ್ಚು ಹಿಡಿಸುತ್ತಿದ್ದಾರೆ. ಇವರ ದುಂಡಾವರ್ತನೆನಿಂದ ಬೇಸತ್ತ ನಾಗರೀಕರು ಪೊಲೀಸರ ಮೊರೆ ಹೊಕ್ಕಿದ್ದಾರೆ.

ಈ ರೀತಿ ಅಪರ ರಾತ್ರಿಯಲ್ಲಿ ಅಭ್ಯಾಗತರಾಗಿ ಪಾರ್ಟಿಗಳಿಗೆ ನುಗ್ಗಿ ಅಲ್ಲಿನ ವಾತವರಣ ಹಾಳು ಮಾಡುವುದು ಬ್ರಿಟಿಷರಿಗೆ ಹೊಸ ವಿಚಾರವೇನಲ್ಲ. ಆದರೆ ತಂತ್ರಜ್ಞಾನ ಬಳಸಿ, ಈಜುಕೊಳವಿರುವ ಒಂಟಿ ಮನೆಗಳಿಗೆ ನುಗ್ಗಿ ದಾಂಧಲೆ ನಡೆಸುತ್ತಿರುವುದು ಹೊಸ ಸಂಗತಿಯಾಗಿದೆ. ಹಿಂದೆಲ್ಲಾ ಕೆಲವೊಮ್ಮೆ ನೂರಾರು ಜನ ನುಗ್ಗಿ, ಸಾವಿರಾರು ಪೌಂಡ್ ಗಳಷ್ಟು ಆಸ್ತಿ ಪಾಸ್ತಿ ನಷ್ಟ ಮಾಡಿದ್ದು ಇದೆ. ಇತ್ತೀಚೆಗೆ ಬೌರ್ನ್ ಮೌಥ್ ಸಮೀಪದಎರಡುಈಜುಕೊಳಗಳಿಗೆ ಸುಮಾರು 16 ಜನ ಅತಿಕ್ರಮ ವಾಗಿ ನುಗ್ಗಿ ದಾಂಧಲೆ ಮಾಡಿದ್ದಾರೆ. ಈ ಡಿಪ್ಪಿಂಗ್ ಕಾರ್ಯಕ್ರಮಕ್ಕೆ ಸುಮಾರು 500 ಕ್ಕೂ ಅಧಿಕ ಆಹ್ವಾನಗಳು ಫೇಸ್ ಬುಕ್ ತಾಣದಲ್ಲಿ ಸುಳಿದಾಡಿವೆ.

ಕಾರ್ನ್ ವಾಲ್ ಪೊಲೀಸರು ನಾಗರೀಕರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದ್ದಾರೆ. ಇದು ಅತಿಕ್ರಮ ಪ್ರವೇಶ ಹಾಗೂ ನ್ಯಾಯಾಂಗ ಉಲ್ಲಂಘನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರ ಜತೆಗೆ ಅನಿರೀಕ್ಷಿತವಾಗಿ ಈಜಾಡಲು ಬರುವ ಅಭ್ಯಾಗತರನ್ನು ಓಡಿಸಲು ನಾಯಿಗಳನ್ನು ಸಾಕುವಂತೆ ಪೊಲೀಸರು ಕಿವಿಮಾತು ಹೇಳಿದ್ದಾರೆ.

(ಏಜೆನ್ಸೀಸ್ )

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X