• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದ ವಿ.ಎಸ್.ಆಚಾರ್ಯ

By Staff
|

ನವದೆಹಲಿ,ಜೂ.16 : ಮಾಧ್ಯಮಗಳ ದುಡುಕಿನಿಂದ ಪದ್ಮಪ್ರಿಯಾ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಕರ್ನಾಟಕ ಗೃಹ ಸಚಿವ ಡಾ. ವಿ.ಎಸ್.ಆಚಾರ್ಯ ಗಂಭೀರವಾಗಿ ಆರೋಪಿಸಿದ್ದಾರೆ.

ಮಾಧ್ಯಮದವರು ತಾಳ್ಮೆ ವಹಿಸಿದ್ದರೆ ಬಹುಶಃ ಪದ್ಮಪ್ರಿಯಾ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ, ಸಿಹಿ ಸುದ್ದಿಯೊಂದನ್ನು ನಿರೀಕ್ಷಿಸಬಹುದಾಗಿತ್ತು ಎಂದು ಪ್ರತಿಕ್ರಿಯಿಸಿರುವ ಆಚಾರ್ಯ, ಪೊಲೀಸರಿಗೆ ಪದ್ಮಪ್ರಿಯಾ ದೆಹಲಿಯಲ್ಲಿರುವ ಮಾಹಿತಿ ಖಚಿತವಾಗಿ ದೊರಕಿತ್ತು. ಆದರೆ ಮುಂಜಾಗ್ರತಾ ಕ್ರಮವಾಗಿ ಮಾಧ್ಯಮಗಳಿಗೆ ಬಹಿರಂಗಗೊಳಿಸಲಿಲ್ಲ. ಆದರೂ ಕೂಡಾ ಟಿವಿ ವಾಹಿನಿಗಳು ಅದನ್ನು ಬಹಿರಂಗ ಮಾಡಿದವು. ಅದರಿಂದ ಹೆದರಿದ ಪದ್ಮಪ್ರಿಯಾ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದಿದ್ದಾರೆ.

ಭಾನುವಾರ ಪೊಲೀಸರು ಆಕೆ ಇದ್ದ ಫ್ಲಾಟ್ ನ ಬಾಗಿಲನ್ನು ಒಡೆದಾಗ ಟಿವಿ ಚಾಲನೆಯಲ್ಲಿತ್ತು. ಜತೆಗೆ ತೆರೆದ ದಿನಪತ್ರಿಕೆಯೊಂದು ಆಕೆಯ ಕನ್ನಡಕದೊಂದಿಗೆ ಅಲ್ಲಿಯೇ ಬಿದ್ದಿತ್ತು. ಅದರಲ್ಲಿ ಪದ್ನಪ್ರಿಯಾ ನಾಪತ್ತೆ ಪ್ರಕರಣದ ವಿವರಗಳು ಪ್ರಕಟವಾಗಿತ್ತು. ಪೊಲೀಸರು ಮಾಹಿತಿ ಸಿಕ್ಕಿ ತಕ್ಷಣವೇ ಧಾವಿಸಿದ್ದರೂ ಅದಾಗಲೇ ತಡವಾಗಿತ್ತು. ಇದು ನಿಜವಾಗಿಯೂ ಆಘಾತಕಾರಿ ಸುದ್ದಿ ಎಂದು ಗೃಹಸ ಚಿವರು ವಿಷಾದ ವ್ಯಕ್ತಪಡಿಸಿದ್ದಾರೆ.

ತನಿಖೆಗೆ ಆಗ್ರಹ

ಶಾಸಕರ ಪತ್ನಿಗೆ ಇಂತಹ ಗತಿಯಾದರೆ, ಬಿಜೆಪಿ ಸರ್ಕಾರ ಜನಸಾಮಾನ್ಯರನ್ನು ಹೇಗೆ ನೋಡಿಕೊಳ್ಳುತ್ತದೆ ಎನ್ನುವುದು ಈ ಘಟನೆಯಿಂದ ತಿಳಿಯುತ್ತದೆ.ಈ ಸಾವಿನ ಬಗ್ಗೆ ಸೂಕ್ತ ತನಿಖೆಯಾಗಲಿ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.

ರಾಜಿನಾಮೆಗೆ ಎಚ್‌ಡಿಕೆ ಒತ್ತಾಯ

ಪದ್ಮಪ್ರಿಯಾ ನಿಗೂಢ ಸಾವಿನ ಸುತ್ತ ಅನೇಕ ಅನುಮಾನಗಳು ಹುಟ್ಟಿಕೊಂಡಿದ್ದು, ಪ್ರಕರಣದ ಉದ್ದಕ್ಕೂ ವ್ಯತಿರಿಕ್ತ ಹೇಳಿಕೆ ನೀಡುತ್ತ ಬಂದಿರುವ ಗೃಹ ಸಚಿವ ವಿ.ಎಸ್.ಆಚಾರ್ಯ ಅವರ ರಾಜಿನಾಮೆಗೆ ಒತ್ತಾಯ ಕೇಳಿ ಬಂದಿದೆ. ಘಟನೆಯ ನೈತಿಕ ಹೊಣೆ ಹೊತ್ತು ಸಚಿವ ಆಚಾರ್ಯ ರಾಜಿನಾಮೆ ನೀಡಲಿ. ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

(ಏಜೆನ್ಸೀಸ್)

ಪೂರಕ ಓದಿಗೆ:

ಶಾಸಕ ರಘುಪತಿ ಪತ್ನಿ ಪದ್ಮಪ್ರಿಯಾ ನಿಗೂಢ ಸಾವು

ಶಾಸಕರಘುಪತಿ ಪತ್ನಿ ಪದ್ಮಪ್ರಿಯ ಮಾಲೂರಿನಲ್ಲಿ ಪತ್ತೆ

ಇನ್ನೂ ಕಗ್ಗಂಟಾಗಿರುವ ಪದ್ಮಪ್ರಿಯಾ ನಾಪತ್ತೆ ಪ್ರಕರಣ

ಪದ್ಮಪ್ರಿಯಾ ಪತಿ ಕೆ. ರಘುಪತಿ ಭಟ್

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more