• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಾಸಕ ರಘುಪತಿ ಪತ್ನಿ ಪದ್ಮಪ್ರಿಯಾ ನಿಗೂಢ ಸಾವು

By Staff
|

MLA's wife Padmapriyaಉಡುಪಿ/ ನವದೆಹಲಿ,ಜೂ.16 : ಕಳೆದ ಕೆಲ ದಿನಗಳಿಂದ ಹಿಂದೆ ರಾಜ್ಯಾದ್ಯಂತ ಸಾಕಷ್ಟು ಸುದ್ದಿ ಮಾಡಿದ್ದ ಉಡುಪಿ ಶಾಸಕ ರಘುಪತಿ ಭಟ್ ಅವರ ಪತ್ನಿ ಪದ್ಮಪ್ರಿಯ ಅಪಹರಣ ಪ್ರಕರಣ ದುರಂತದಲ್ಲಿ ಅಂತ್ಯಕಂಡಿದೆ. ರಾಜಧಾನಿ ದೆಹಲಿಯ ಅಪಾರ್ಟ್ ಮೆಂಟ್ ವೊಂದರಲ್ಲಿ ಪದ್ಮಪ್ರಿಯ ಆತ್ಮಹತ್ಯೆ ಮಾಡಿಕೊಂಡಿದ್ದು, ಸೋಮವಾರ ಬೆಳಗ್ಗೆ ಮರಣೋತ್ತರ ಪರೀಕ್ಷೆ ನಡೆಯಲಿದೆ.

ಪದ್ಮಪ್ರಿಯ ನಿಗೂಢ ಸಾವಿನ ಪ್ರಕರಣ ಹಲವು ಶಂಕೆಗೆ ಕಾರಣವಾಗಿದ್ದು, ಶವಪರೀಕ್ಷೆಯ ನಂತರ ಇದು ಆತ್ಮಹತ್ಯೆಯೋ, ಅಥವಾ ಕೊಲೆಯೋ ಎಂದು ತಿಳಿದು ಬರುವ ಸಾಧ್ಯತೆಗಳಿವೆ. ಶನಿವಾರ ಪದ್ಮಪ್ರಿಯ ಕೋಲಾರ ಜಿಲ್ಲೆಯ ಮಾಲೂರಿನ ಫಾರಂ ಹೌಸ್ ಒಂದರಲ್ಲಿ ತಂಗಿದ್ದಾರೆ. ಅವರನ್ನು ಪೊಲೀಸರು ಉಡುಪಿಗೆ ಕರೆದು ಹೋಗಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನುವ ಸುದ್ದಿ ದಟ್ಟವಾಗಿ ಹಬ್ಬಿತ್ತು. ಈ ಬಗ್ಗೆ ಸರ್ಕಾರ ಏನನ್ನೂ ಅಧಿಕೃತವಾಗಿ ಹೇಳಿರಲಿಲ್ಲ. ದೆಹಲಿಯ ಶಮಾ ಅಪಾರ್ಟ್ ಮೆಂಟ್ ವೊಂದರಲ್ಲಿ ಪದ್ಮಪ್ರಿಯ ಅವರ ಶವ ಪತ್ತೆಯಾಗಿದದ್ದರಿಂದ ಈ ಪ್ರಕರಣ ಇದೀಗ ತೀವ್ರ ಕೋಲಾಹಲ ಎಬ್ಬಿಸಿದೆ.

ಜೂ. 10 ರಾತ್ರಿ ದೆಹಲಿಯ ಶಮಾ ಅಪಾರ್ಟ್ ಮೆಂಟ್ ನಲ್ಲಿ ಅತುಲ್ ಜತೆಗೆ ಒಬ್ಬ ಮಹಿಳೆ ಬಂದಿದ್ದರು ಎಂಬ ಮಾಹಿತಿ ಅಪಾರ್ಟ್ ಮೆಂಟ್ ನ ಕಾವಲುಗಾರ ಮೂಲಕ ತಿಳಿದು ಬಂದಿದೆ. ಶಾಸಕರ ಅಪ್ತ ಎನ್ನಲಾದ ಇಂಜಿನಿಯರ್ ಅತುಲ್ ಬಗ್ಗೆ ಪೊಲೀಸರು ಬಲವಾದ ಸಂಶಯ ವ್ಯಕ್ತಪಡಿಸಿದ್ದಾರೆ.

ಅಪಹರಣಕ್ಕೂ ಮುಂಚೆ ಪದ್ಮಪ್ರಿಯ ಅತುಲ್ ಎಂಬುವವರಿಗೆ ಕರೆ ಮಾಡಿದ್ದರಿಂದ ಅ ಪ್ರಕರಣ ಅನೇಕ ರೆಕ್ಕೆ ಪುಕ್ಕಗಳು ದೊರೆತಿವೆ. ಇದು ಕೊಲೆಯೋ, ಅತ್ಮಹತ್ಯೆಯೋ, ಅನೈತಿಕ ಸಂಬಂಧವೋ, ಇಲ್ಲವೇ ಕೌಟುಂಬಿಕ ಕಲಹವೋ. ಈ ಪ್ರಕರಣ ಅನೇಕ ಸಂಶಯಗಳಿಗೆ ಕಾರಣವಾಗಿದೆ.

ಗಂಡನಿಂದ ಬಿಡುಗಡೆ ಬಯಸಿದ್ದರೇ?

ಪದ್ನಪ್ರಿಯ ಈ ಹಿಂದೆಯೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅತುಲ್ ಗೆ ಹೇಳಿದ್ದರು ಎಂಬುದು ದೆಹಲಿ ಪೊಲೀಸರ ವಿಚಾರಣೆಯಿಂದ ತಿಳಿದು ಬಂದಿದೆ. ಪತಿಯ ಜತೆಗೆ ಇರುವುದು ಸಾಧ್ಯವಿಲ್ಲ. ನನಗೆ ಸ್ವಾವಲಂಬಿಯಾಗಿ ಬದುಕಲು ನೆರವಾಗಿ, ನನಗಾಗಿ ನೀವು ಮಾಡುವ ಖರ್ಚಿನ ಹಣವನ್ನು ನಾನು ಕಾಲ್ ಸೆಂಟರ್ ಅಥವಾ ಬಿಪಿಓಗಳಲ್ಲಿ ಕೆಲಸ ಮಾಡಿ ತಿಂಗಳಿಗೆ 10 ಸಾವಿರ ರುಪಾಯಿಯಂತೆ ನಿಮಗೆ ಕೊಡುವೆ. ನನಗೆ ನೀವು ನೆರವಾಗದಿದ್ದರೆ ನಾನು ಅತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪದ್ಮಪ್ರಿಯ ಹೇಳಿದ್ದಾಗಿ ಅತುಲ್ ವಿಚಾರಣೆ ವೇಳೆ ದೆಹಲಿಯ ದ್ವಾರಕಾ ಠಾಣೆಯ ಪೊಲೀಸರಿಗೆ ತಿಳಿಸಿದ್ದಾನೆ. ಪದ್ನಪ್ರಿಯ ಮತ್ತು ನಮ್ಮ ನಡುವೆ ಬೇರೆ ಯಾವ ಸಂಬಂಧವೂ ಇಲ್ಲ ಎಂದು ಅತುಲ್ ಹೇಳಿರುವುದಾಗಿ ತಿಳಿದು ಬಂದಿದೆ.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ:

ಶಾಸಕರಘುಪತಿ ಪತ್ನಿ ಪದ್ಮಪ್ರಿಯ ಮಾಲೂರಿನಲ್ಲಿ ಪತ್ತೆ

ಇನ್ನೂ ಕಗ್ಗಂಟಾಗಿರುವ ಪದ್ಮಪ್ರಿಯಾ ನಾಪತ್ತೆ ಪ್ರಕರಣ

ಪದ್ಮಪ್ರಿಯಾ ಪತಿ ಕೆ. ರಘುಪತಿ ಭಟ್

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more