• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿದ್ಧಲಿಂಗಪ್ಪನ ಪಾರ್ಥೀವ ಶರೀರ ಹಾವೇರಿಗೆ ಆಗಮನ

By Staff
|

ಹಾವೇರಿ, ಜೂ. 11 : ಮಂಗಳವಾರ ಪೊಲೀಸ್ ಗೋಲಿಬಾರ್ ನಲ್ಲಿ ಮೃತಪಟ್ಟಿದ್ದ ರೈತ ಸಿದ್ಧಲಿಂಗಪ್ಪ ಚೂರಿ ಅವರ ಪಾರ್ಥೀವ ಶರೀರವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಿಂದ ಇಂದು ಬೆಳಗ್ಗೆ ನಗರಕ್ಕೆ ತರಲಾಯಿತು. ಅಕಾಲಿಕವಾಗಿ ಪೊಲೀಸರ ಗುಂಡಿಗೆ ಜೀವ ಕಳೆದುಕೊಂಡಿರುವ ಸಿದ್ಧಲಿಂಗಪ್ಪ ಅವರ ಕುಟುಂಬ ಸದಸ್ಯರ ರೋಧನ ಮುಗಿಲು ಮುಟ್ಟಿತ್ತು. ಗಂಡನನ್ನು ಕಳೆದುಕೊಂಡ ಪತ್ನಿ ಮಕ್ಕಳ ಗೋಳು ಹೇಳತೀರದಾಗಿತ್ತು.

ಪತ್ನಿ ಮತ್ತು ಪುತ್ರಿಯನ್ನು ಅಗಲಿರುವ 35 ಹರೆಯದ ಸಿದ್ಧಲಿಂಗಪ್ಪ ಕುಟುಂಬದ ಆಧಾರ ಸ್ತಂಭವಾಗಿದ್ದ. ಅವರ ಸಾವಿನಿಂದ ಕುಟುಂಬ ಅನಾಥವಾಗಿದೆ. ಸಿದ್ಧಲಿಂಗಪ್ಪ ಅವರ ಪಾರ್ಥೀವ ಶರೀರವನ್ನು ತಂದಾಗ ಸೇರಿದ್ದ ಜನಸಾಗರ ಮುಖದಲ್ಲಿ ಶೋಕ ಮಡುಗಟ್ಟಿತ್ತು. ತನ್ನದಲ್ಲದ ತಪ್ಪಿನಿಂದ ವಿನಾಕಾರಣ ಜೀವ ಕಳೆದುಕೊಂಡಿರುವ ಸಿದ್ಧಲಿಂಗಪ್ಪನ ಅಗಲುವಿಕೆಯಿಂದ ಜನಸಾಮಾನ್ಯರು ಕೂಡಾ ಕಣ್ಣಂಚಲ್ಲಿ ನೀರು ತುಂಬಿಕೊಂಡಿರುವುದು ಸಾಮಾನ್ಯ ದೃಶ್ಯವಾಗಿತ್ತು.

ನಿನ್ನೆಯ ಘಟನೆಯಿಂದ ಹಾವೇರಿಯಲ್ಲಿ ಸ್ಮಶಾನಮೌನ ಆವರಿಸಿದೆ. ಸ್ವಯಂಘೋಷಿತ ನಿಷೇದಾಜ್ಞೆ ಜಾರಿಗೊಳಿಸಿದ ಭಾಷವಾಗುತ್ತಿದೆ. ಜನನಿಬಿಡ ಸ್ಥಳಗಳು ಖಾಲಿ ಹೊಡೆತೊಡಗಿವೆ. ಭದ್ರತೆ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

ಗಣ್ಯರ ಭೇಟಿ

ಜಸಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ, ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ, ಮಾಜಿ ಸಚಿವ ಎಚ್.ಕೆ.ಪಾಚೀಲ್, ಕೆ.ಬಿ.ಕೋಳಿವಾಡ ಅವರು ನಿನ್ನೆಯ ಘಟನೆಯಲ್ಲಿ ಮೃತಪಟ್ಟಿರುವ ಸಿದ್ಧಲಿಂಗಪ್ಪ ಅವರ ಮನೆಗೆ ಭೇಟಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಸಿದ್ಧಲಿಂಗಪ್ಪ ಅವರ ಸಾವು ನಮಗೂ ಕೂಡಾ ಅತೀವ ನೋವುಂಟು ಮಾಡಿದೆ. ಇಂತಹ ಘಟನೆಗಳು ಜರುಗಬಾರದಿತ್ತು ಎಂದು ಉಭಯ ಸಚಿವರು ವಿಷಾದ ವ್ಯಕ್ತಪಡಿಸಿದರು.

ನಿನ್ನೆ ಘಟನೆಯಲ್ಲಿ ಕೆಲ ದುರ್ಷ್ಕರ್ಮಿಗಳ ಕೈವಾಡವಿದೆ ಎಂದು ಆರೋಪಿಸಿದ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ, ಸ್ಥಾಪಿತ ಹಿತಾಶಕ್ತಿಗಳ ಕೆಲಸದಿಂದ ಈ ಅನಾಹುತ ಸಂಭವಿಸಿದೆ. ಘಟನೆ ಕುರಿತು ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರನ್ನು ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮತ್ತೆ ಗಲಭೆ ಸಂಭವ, ಭೀತಿ: ನಗರದ ಸಿದ್ದಪ್ಪ ಸರ್ಕಲ್ ನಲ್ಲಿ ಪೊಲೀಸರಿಗೆ ಕಲ್ಲು ತೂರಾಟ ನಡೆಸಿದ ಪರಿಣಾಮ, ಕೊಂಚ ಕಾಲ ಗೊಂದಲಮಯ ವಾತಾವರಣ ಉಂಟಾಗಿತ್ತು. ಪೊಲೀಸರು ಹಾಗೂ ಜನರು ಗುಂಪಾಗಿ ಸಿಕ್ಕಿದೆಡೆಗಳಲ್ಲಿ ಒಟ್ಟಿಗೆ ಓಡಿದರು. ಜನರಿಗೆ ಪೊಲೀಸರು ಮತ್ತೆ ಲಾಠಿಚಾರ್ಚ್ ಮಾಡುವ ಶಂಕೆಯಲ್ಲಿ ಜನರು ಭಯಭೀತರಾಗಿ ಎಲ್ಲೆಡೆ ಚದುರಿದರು. ಆದರೆ ಯಾವುದೇ ಅಹಿತಕರ ಘಟನೆ ಸಂಭವಿಸದೆ ಹಾವೇರಿ ನಗರ ಮಧ್ಯಾಹ್ನದ ವೇಳೆಯಲ್ಲಿ ಶಾಂತಿಯುತವಾಗಿತ್ತು

(ದಟ್ಸ್ ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more