ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸಮಾಧಾನಕ್ಕೆ ಕುಮ್ಮಕ್ಕು ನೀಡಿರುವ ಖಾತೆ ಹಂಚಿಕೆ

By Staff
|
Google Oneindia Kannada News

Portfolios distributed at midnightಬೆಂಗಳೂರು, ಜೂ. 8 : ಖಾತೆ ಹಂಚಿಕೆ ಕುರಿತಂತೆ ಬಿಜೆಪಿ ಸರ್ಕಾರ ಪ್ರಮಾಣ ವಚನ ಸ್ವೀಕರಿಸಿದಾಗಿನಿಂದ ಎದ್ದಿದ್ದ ಊಹಾಪೋಹಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಂತೂ ಇಂತು ತೆರೆ ಎಳೆದಿದ್ದಾರೆ.

ಪಕ್ಷೇತರರೂ ಸೇರಿದಂತೆ ಬಿಜೆಪಿ ಸರ್ಕಾರದಲ್ಲಿರುವ 116 ಶಾಸಕರಲ್ಲಿ ವಿಧಾನಸೌಧಕ್ಕೆ ಅಡಿ ಇಟ್ಟಾಗಿನಿಂದಲೇ ಎದ್ದಿದ್ದ ಸಂತಸ, ಅಸಮಾಧಾನಗಳು ಖಾತೆ ಹಂಚಿಕೆ ಕುರಿತಂತೆಯೂ ತಲೆಯೆತ್ತಿವೆ. ಹಣಕಾಸು, ಗಣಿ ಸೇರಿದಂತೆ 10 ಪ್ರಮುಖ ಖಾತೆಗಳನ್ನು ತಾವೇ ಉಳಿಸಿಕೊಂಡಿರುವ ಯಡಿಯೂರಪ್ಪನವರು ಮತ್ತೆ ಅಸಮಾಧಾನದ ಹೊಗೆ ಏಳುವಂತೆ ಮಾಡಿದ್ದಾರೆ.

ಗೃಹ, ಗಣಿ, ಹಣಕಾಸು ಮೊದಲಾದ ಖಾತೆಗಳ ಮೇಲೆ ಗಣಿಧಣಿಗಳು ಸೇರಿದಂತೆ ಹಲವರು ಕಣ್ಣಿಟ್ಟಿದ್ದರು. ಪಕ್ಷೇತರರಲ್ಲೊಬ್ಬರಾದ ಗೂಳಿಹಟ್ಟಿ ಶೇಖರ್ ಗಣಿ ಖಾತೆ ತಮಗೇ ಬೇಕೆಂದು ಕ್ಯಾತೆ ತೆಗೆದಿದ್ದರು. ಹಾಗೆ ನೋಡಿದರೆ ಪಕ್ಷೇತರರ್ಯಾರಿಗೂ ಪ್ರಮುಖ ಖಾತೆಗಳು ಸಿಕ್ಕೇ ಇಲ್ಲ. ಪ್ರತಿ ಪಕ್ಷೇತರರು ಒಂದೊಂದು ಖಾತೆಯ ಬೇಡಿಕೆಯಿಟ್ಟಿದ್ದರು. ಅವರ್ಯಾರಿಗೆ ಅದ್ಯಾವ ಖಾತೆಯೂ ದೊರೆತಿಲ್ಲ.

ಯಡಿಯೂರಪ್ಪನವರ ಬದ್ಧವೈರಿ ಎಂದೇ ಬಿಂಬಿಸಲಾಗಿದ್ದ ಈಶ್ವರಪ್ಪ ಅವರಿಗೆ ಅವರ ಇಷ್ಟ ವಿರುದ್ಧವಾಗಿ ಇಂಧನ ಖಾತೆ ನೀಡಲಾಗಿದೆ. ನೀರಾವರಿ ಅಥವಾ ಗೃಹ ಖಾತೆ ಬೇಕೆಂದು ಅವರು ಬೇಡಿಕೆಯಿಟ್ಟಿದ್ದರು. ಆರ್. ಅಶೋಕ್ ಕೂಡ ಕಂದಾಯ ಖಾತೆಯೇ ಬೇಕೆಂದು ತಂಟೆ ಶುರುಮಾಡಿದ್ದರು. ಗೃಹದ ಮೇಲೆ ಕಣ್ಣಿಟ್ಟಿದ್ದ ಗಣಿಧಣಿಗಳಲ್ಲೊಬ್ಬರಾದ ಕರುಣಾಕರ ರೆಡ್ಡಿ ಅವರನ್ನೂ ಸುಮ್ಮನಾಗಿಸಿರುವ ಯಡಿಯೂರಪ್ಪ ತಮಗಿಷ್ಟದಂತೆ ಖಾತೆ ಹಂಚಿ ತಾವೇ ಬಿಗ್ ಬಾಸ್ ಎಂಬುದನ್ನು ಮನದಟ್ಟು ಮಾಡಿಕೊಟ್ಟಿದ್ದಾರೆ.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್, ರಾಜ್ಯಾಧ್ಯಕ್ಷ ಸದಾನಂದ ಗೌಡ ಮತ್ತು ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರೊಡನೆ ಚರ್ಚಿಸಿ ಯಡಿಯೂರಪ್ಪನವರು ಶನಿವಾರ ಮಧ್ಯರಾತ್ರಿ ಖಾತೆ ಹಂಚಿಕೆಯ ಫಾರ್ಮಾಲಿಟಿಯನ್ನು ಪೂರ್ತಿಗೊಳಿಸಿದ್ದಾರೆ.

ಸಚಿವರು ಖಾತೆ
ಯಡಿಯೂರಪ್ಪ ಹಣಕಾಸು, ನಗರಾಭಿವೃದ್ಧಿ, ಗುಪ್ತಚರ, ಕನ್ನಡ ಮತ್ತು ಸಂಸ್ಕೃತಿ, ಗಣಿ ಮತ್ತು ಭೂವಿಜ್ಞಾನಿ, ಅರಣ್ಯ, ಪರಿಸರ, ಸಂಪುಟ ವ್ಯವಹಾರ, ಸಾರ್ವಜನಿಕ ಉದ್ದಿಮೆ, ವಾರ್ತಾ ಮತ್ತು ಪ್ರಚಾರ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ
ಕೆ.ಎಸ್.ಈಶ್ವರಪ್ಪ ಇಂಧನ
ಸಿ.ಎಂ.ಉದಾಸಿ ಲೋಕೋಪಯೋಗಿ
ಗೋವಿಂದ ಕಾರಜೋಳ ಸಣ್ಣ ನೀರಾವರಿ, ಯೋಜನೆ, ಅಂಕಿ-ಸಂಖ್ಯೆ
ಅರವಿಂದ ಲಿಂಬಾವಳಿ ಉನ್ನತ ಶಿಕ್ಷಣ
ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
ಡಾ.ವಿ.ಎಸ್.ಆಚಾರ್ಯ ಗೃಹ (ಗುಪ್ತಚರ ಹೊರತುಪಡಿಸಿ)
ರಾಮಚಂದ್ರಗೌಡ ವೈದ್ಯ ಶಿಕ್ಷಣ
ಶೋಭಾ ಕರಂದ್ಲಾಜೆ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ
ಕಟ್ಟಾ ಸುಬ್ರಹ್ನಣ್ಯ ನಾಯ್ಡು ಅಬಕಾರಿ, ಐಟಿ-ಬಿಟಿ, ವಿಜ್ಞಾನ
ಆರ್. ಅಶೋಕ್ ಸಾರಿಗೆ
ಎಸ್. ಸುರೇಶ್ ಕುಮಾರ್ ಕಾನೂನು ಮತ್ತು ಸಂಸದೀಯ ವ್ಯವಹಾರ, ಪೌರಾಡಳಿತ
ಶ್ರೀರಾಮುಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಕೆ.ಕರುಣಾಕರ ರೆಡ್ಡಿ ಕಂದಾಯ
ಕೆ.ಜನಾರ್ದನ ರೆಡ್ಡಿ ಪ್ರವಾಸೋದ್ಯಮ, ಮೂಲಸೌಲಭ್ಯ
ಎಸ್.ಎ. ರವೀಂದ್ರನಾಥ್ ಕೃಷಿ
ಬಿ.ಎನ್. ಬಚ್ಚೇಗೌಡ ಕಾರ್ಮಿಕ ಕಲ್ಯಾಣ
ಬಸವರಾಜ ಬೊಮ್ಮಾಯಿ ಜಲಸಂಪನ್ಮೂಲ
ರೇವೂ ನಾಯಕ್ ಬೆಳಮಗಿ ಪಶು ಸಂಗೋಪನೆ
ಲಕ್ಷ್ಮಣ ನವದಿ ಸಹಕಾರ
ಮುರುಗೇಶ್ ನಿರಾಣಿ ಬೃಹತ್ ಕೈಗಾರಿಕೆ
ಎಸ್.ಕೆ.ಬೆಳ್ಳುಬ್ಬಿ ತೋಟಗಾರಿಕೆ
ಕೃಷ್ಣ ಪಾಲೇಮಾರ್ ಬಂದುರು ಮತ್ತು ಮೀನುಗಾರಿಕೆ, ಲಾಟರಿ ಮತ್ತು ಸಣ್ಣ ಉಳಿತಾಯ
ಎಸ್.ಎನ್. ಕೃಷ್ಣಯ್ಯಶೆಟ್ಟಿ ವಸತಿ ಮತ್ತು ಮುಜರಾಯಿ
ಎಚ್. ಹಾಲಪ್ಪ ಆಹಾರ ಮತ್ತು ನಾಗರಿಕ ಪೂರೈಕೆ
ಮುಮ್ತಾಜ್ ಅಲಿಖಾನ್ ಹಜ್, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ
ನರೇಂದ್ರಸ್ವಾಮಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಗೂಳಿಹಟ್ಟಿ ಶೇಖರ್ ಜವಳಿ, ಯುವ ಜನ ಮತ್ತು ಕ್ರೀಡೆ
ಶಿವರಾಜ್ ತಂಗಡಗಿ ಕೃಷಿ ಮಾರುಕಟ್ಟೆ, ಸಕ್ಕರೆ
ವೆಂಕಟರಮಣಪ್ಪ ಸಣ್ಣ ಕೈಗಾರಿಗೆ, ರೇಷ್ಮೆ
ಡಿ. ಸುಧಾಕರ್ ಸಮಾಜ ಕಲ್ಯಾಣ

ಕರ್ನಾಟಕ 13ನೇ ವಿಧಾನಸಭೆ ಚುನಾವಣೆ ಫಲಿತಾಂಶ ಪಟ್ಟಿ
ರೈತನ ಹೆಸರಿನಲ್ಲಿ ಯಡಿಯೂರಪ್ಪ ಪ್ರಮಾಣವಚನ

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X