ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಗೇನಕಲ್ ನೀರಿನ ಯೋಜನೆಗೆ ಅಡ್ಡಿ ಬೇಡ

By Staff
|
Google Oneindia Kannada News

ನವದೆಹಲಿ, ಜೂ. 7 : ಪರಸ್ಪರ ಕುಡಿಯುವ ನೀರಿನ ಯೋಜನೆಗಳಿಗೆ ಅಡ್ಡಿ ಆಕ್ಷೇಪಣೆ ಬೇಡ ಎಂಬ ಅರ್ಥದ ಸಲಹೆಯನ್ನು ಕೇಂದ್ರ ಸರ್ಕಾರ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಗೆ ತಿಳಿಸಿದೆ. ಹೊಗೇನಕಲ್ ಯೋಜನೆಗೆ ಕುರಿತು ರಾಜ್ಯಸಭಾ ಸದಸ್ಯರಾಗಿದ್ದ ಜನಾರ್ಧನ ಪೂಜಾರಿ ಕಳೆದ ಏಪ್ರಿಲ್ ತಿಂಗಳಲ್ಲಿ ಬರೆದಿದ್ದ ಪತ್ರವೊಂದಕ್ಕೆ ಕೆಲ ದಿನಗಳ ಹಿಂದೆ ಜಲಸಂಪನ್ಮೂಲ ಸಚಿವ ಸೈಫುದ್ದೀನ್ ಸೋಜ್ ಬರೆದಿರುವ ಪತ್ರದ ಸಾರವಿದು.

ಪ್ರೊ.ಸೈಫುದ್ದೀನ್ ಸೋಜ್
ಜಲಸಂಪನ್ಮೂಲ ಸಚಿವರು
ಭಾರತ ಸರ್ಕಾರ
ಶಕ್ತಿ ಭವನ
ರಫಿ ಅಹ್ಮದ್ ಕಿದ್ವಾಯಿ ಮಾರ್ಗ
ನವದೆಹಲಿ-110001

ಮಾನ್ಯ ಪೂಜಾರಿಯವರೇ.

ತಮಿಳುನಾಡಿನ ಹೊಗೇನಕಲ್ ಕುಡಿಯುವ ನೀರು ಸರಬರಾಜು ಯೋಜನೆ ಕುರಿತ ನಿಮ್ಮ 2008ರ ಏಪ್ರಿಲ್ ಎರಡರ ಪತ್ರವನ್ನು ನೆನಪಿಸಿಕೊಳ್ಳಿ. ಅದರಲ್ಲಿರುವ ಸಂಗತಿಯನ್ನು ಪರಿಶೀಲಿಸಲಾಗಿದೆ. ಬೆಂಗಳೂರಿನ ತುರ್ತು ಕುಡಿಯುವ ನೀರಿನ ಅಗತ್ಯ ಪೂರೈಕೆಗೆಂದು ಕರ್ನಾಟಕ ತನ್ನ ಕಾವೇರಿ ನೀರಿನ ಪಾಲನ್ನು ಬಳಸಿಕೊಳ್ಳಲು 1997ರ ಫೆಬ್ರುವರಿ 28 ರಂದು ಜಲಸಂಪನ್ಮೂಲ ಮಂತ್ರಾಲಯ ಆಕ್ಷೇಪವಿಲ್ಲ ಪತ್ರವನ್ನು ನೀಡಿದ್ದುಂಟು.

ಆನಂತರ ಬೆಂಗಳೂರಿನ ಕುಡಿಯುವ ನೀರಿನ ಯೋಜನೆಗೆ ನೀಡಿದ ಮಾದರಿಯಲ್ಲೇ ತನ್ನ ಹೊಗೇನಕಲ್ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆಗೂ ತನ್ನ ಕಾವೇರಿಯ ನೀರಿನ ಪಾಲಿನಲ್ಲಿ 1.4 ಸಾವಿರ ದಶಲಕ್ಷ ಘನ ಅಡಿಗಳಷ್ಟು(ಟಿಎಂಸಿಎಫ್ ಟಿ) ನೀರನ್ನು ಬಳಸಿಕೊಳ್ಳಲು ಅನುಮತಿ ನೀಡುವಂತೆ 1998ರ ಮಾರ್ಚ್ ಮೂರರಂದು ತಮಿಳುನಾಡು ಕೋರಿತು.

ಕರ್ನಾಟಕ ಮತ್ತು ತಮಿಳುನಾಡು ಕುಡಿಯುವ ನೀರಿನ ಯೋಜನೆಗಳ ಕುರಿತು ಕಾವೇರಿ ಕಣಿವೆ ರಾಜ್ಯಗಳ ಸಭೆಯೊಂದನ್ನು ಕೇಂದ್ರ ಜಸಸಂಪನ್ಮೂಲ ಮಂತ್ರಾಲಯದ ಕಾರ್ಯದರ್ಶಿ 1998 ಜೂನ್ 29ರಂದು ಕರೆದಿದ್ದರು. ತಮ್ಮ ಪಾಲಿನ ಕಾವೇರಿ ನೀರಿನಲ್ಲೇ ಬಳಕೆ ಮಾಡಿಕೊಳ್ಳಬೇಕಿರುವ ಹಿನ್ನಲೆಯಲ್ಲಿ ಉಭಯ ರಾಜ್ಯಗಳು ಪರಸ್ಪರ ಕುಡಿಯುವ ನೀರಿನ ಯೋಜನೆಗಳಿಗೆ ಆಕ್ಷೇಪಣೆ ಎತ್ತದೆ ತಮ್ಮ ಹಿತಗಳಿಗೆ ಅನುಗುಣವಾಗಿ ವರ್ತಿಸುತ್ತವೆ ಎಂದು ಆಶಿಸುವುದಾಗಿ ಸಭೆಯ ಅಂತ್ಯದಲ್ಲಿ ಕಾರ್ಯದರ್ಶಿ ಹೇಳಿದರು.

ಈ ಸಭೆಯಲ್ಲಿ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೂಡಾ ಭಾಗವಹಿಸಿದ್ದರು. ಆನಂತರ ಹೊಗೇನಕಲ್ ಕುಡಿಯುವ ನೀರಿನ ಯೋಜನೆಗೆ 1.4 ಟಿಎಂಸಿಎಫ್ ಟಿ ನೀರನ್ನು ಬಳಸಿಕೊಳ್ಳಲು ಆಕ್ಷೇಪವಿಲ್ಲ ಪತ್ರವನ್ನು ಜಲಸಂಪನ್ಮೂಲ ಮಂತ್ರಾಲಯ 1998ರ ಸೆಪ್ಟಂಬರ್ 21ರಂದು ತಮಿಳುನಾಡು ಸರ್ಕಾರಕ್ಕೆ ನೀಡಿತು. ಈ ಪತ್ರದ ಪ್ರತಿಯೊಂದನ್ನು ಕರ್ನಾಟಕ ಸರ್ಕಾರಕ್ಕೂ ಕಳಿಸಿಕೊಡಲಾಯಿತು.

ಆದರಗಳೊಂದಿಗೆ
ಸೈಫುದ್ದೀನ್ ಸೋಜ್

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X