ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್ ಟೆಲ್ ಗ್ರಾಮೀಣ ಮೊಬೈಲ್ ಕ್ರಾಂತಿ ಆರಂಭ

By Staff
|
Google Oneindia Kannada News

ಬೆಂಗಳೂರು, ಜೂ.6:ರೈತವರ್ಗಕ್ಕೆ ಅಗತ್ಯವಾದ ಹವಾಮಾನ ಮಾಹಿತಿ, ಬೆಳೆಗಳ ದರ, ಮಾರುಕಟ್ಟೆ ಏರುಪೇರು ಮುಂತಾದ ವಿಷಯಗಳು ಮೊಬೈಲ್ ನಲ್ಲಿ, ಅದರಲ್ಲೂ ಕನ್ನಡದಲ್ಲಿ ಲಭ್ಯವಾಗುವಂತಾದರೆ ಎಷ್ಟು ಅನುಕೂಲ. ಈ ಕನಸು ನನಸಾಗಿಸುವ ನಿಟ್ಟಿನಲ್ಲಿ ಏರ್ ಟೆಲ್ ಮೊಬೈಲ್ ಸಂಸ್ಥೆಯು 'ಗ್ರಾಮೀಣ ಮೊಬೈಲ್ ಕ್ರಾಂತಿ'ಯನ್ನು ಆರಂಭಿಸಿದ್ದು, ಇಫ್ಕೋ ಸಂಸ್ಥೆಯ ಕಿಸಾನ್ ಸಂಚಾರ್ ಲಿಮಿಟೆಡ್ ಸಹಕಾರದಿಂದ ರೈತರಿಗೆ ಅಗತ್ಯ ಮಾಹಿತಿಯನ್ನು ನೀಡಲಿದೆ.

ಕೈಗೆಟಕುವ ಬೆಲೆ ಹಾಗೂ ಸರಳ ರೂಪದಲ್ಲಿ ಗ್ರಾಮೀಣರಿಗೆ ಮೊಬೈಲ್ ಸೇವೆಯನ್ನು ನೀಡಲಾಗುವುದು. ಕನ್ನಡ ಸೌಲಭ್ಯವುಳ್ಳ ಮೊಬೈಲ್ ಗಳನ್ನು ನೋಕಿಯಾ ಸಂಸ್ಥೆಯ ಸಹಕಾರದಿಂದ ನೀಡಲಾಗುತ್ತಿದೆ. ರಾಜ್ಯದಲ್ಲಿ ಸುಮಾರು 1.7 ಕೋಟಿ ಮೊಬೈಲ್ ಬಳಕೆದಾರರಿದ್ದು, ಅವರಲ್ಲಿ ಶೇ.13ರಷ್ಟು ಗ್ರಾಮೀಣ ಪ್ರದೇಶದವರು. ಪ್ರಸ್ತುತ 20 ಸಾವಿರ ಹಳ್ಳಿಗಳಲ್ಲಿ ಏರ್ ಟೆಲ್ ಜಾಲ ವಿಸ್ತರಿಸಲಾಗಿದೆ. ರಾಜ್ಯಾದ್ಯಂತ ಒಟ್ಟು ಜನಸಂಖ್ಯೆಯ ಶೇ. 80 ರಷ್ಟು ಮಂದಿಯನ್ನು ತಲುಪುತ್ತದೆ. ಮುಖ್ಯವಾಗಿ ರೈತ ಬಾಂಧವರನ್ನು ಗಮನದಲ್ಲಿಟ್ಟುಕೊಂಡು ಗ್ರಾಮೀಣ ಮೊಬೈಲ್ ಕ್ರಾಂತಿ ಆರಂಭಿಸಿದ್ದೇವೆ ಎನ್ನುತ್ತಾರೆ ಏರ್ ಟೆಲ್ ಪ್ರಾದೇಶಿಕ ಕಾರ್ಯ ನಿರ್ವಾಹಕ ಅಧಿಕಾರಿ ವೆಂಕಟೇಶ್.

ರೈತರಿಗೆ ಸಲಹೆ: ಇಫ್ಕೋಸೊಸೈಟಿ ಗುರುತಿಸುವ ಜಾಗಗಳಲ್ಲಿ ಏರ್ ಟೆಲ್ ಮೊಬೈಲ್ ಟವರ್ ಗಳನ್ನು ಸ್ಥಾಪಿಸಿ, ರೈತರಿಗೆ ಸಲಹೆ ನೀಡಲು ನಿರ್ಧರಿಸಲಾಗಿದೆ. ಏರ್ ಟೆಲ್ ನಿಂದ ಇಫ್ಕೋ ಕೇಂದ್ರಕ್ಕೆ ಬರುವ ಎಲ್ಲಾ ಕರೆಗಳಿಗೆ 50 ಪೈಸೆ ಎಂದು ನಿಗದಿಪಡಿಸಲಾಗಿದೆ. ರೈತರಿಗಾಗಿ ಪ್ರತಿದಿನ ನಿಯಮಿತ ಅವಧಿಯಲ್ಲಿ ವಾಯ್ಸ್ ಸಂದೇಶವನ್ನು ಕಳಿಸಲಾಗುವುದು. ಇದರಿಂದ ಹವಾಮಾನ, ಮಾರುಕಟ್ಟೆದರ ಸೇರಿದಂತೆ ಅಗತ್ಯ ಮಾಹಿತಿಗಳನ್ನು ಆಲಿಸಬಹುದು ಎಂದು ಇಫ್ಕೋ ಸಂಸ್ಥೆ ದಕ್ಷಿಣ ಭಾರತ ಮುಖ್ಯಸ್ಥ ಗೋವಿಂದ ರಾಜನ್ ಹೇಳಿದರು.

ಸದ್ಯ ಏರ್ ಟೆಲ್ ಸಂಸ್ಥೆ ನೋಕಿಯಾ ಸಹಯೋಗದೊಂದಿಗೆ ಕನ್ನಡಹ್ಯಾಂಡ್ ಸೆಟ್ ಗಳನ್ನು ಬಿಡುಗಡೆ ಮಾಡಿದೆ.ನೋಕಿಯಾ 1200 (ರು. 1,272) ಹಾಗೂ ನೋಕಿಯಾ 1208 (ರು.1,560). ಎರಡೂ ಮೊಬೈಲ್ ಮಾದರಿಗಳಿಗೂ ಉಚಿತವಾಗಿ ಏರ್ ಟೆಲ್ ಸಂಪರ್ಕ ನೀಡಲಾಗುವುದು.ರು. 295 ನೀಡಿ, ಲೈಫ್ ಟೈಮ್ ಚಂದಾದಾರರಾಗಬಹುದು. ಎಲ್ಲಾ ಸ್ಥಳೀಯ ಕರೆಗಳಿಗೆ 1 ರು ಎಂದು ನಿಗದಿಪಡಿಸಲಾಗಿದೆ. ರು. 1.50/ಪ್ರತಿಕರೆ ದರದಂತೆ ಎಸ್ ಟಿಡಿ ಕರೆಯನ್ನು ಮಾಡಬಹುದು.

ಏರ್ ಟೆಲ್ ಕನ್ನಡ ಪೋರ್ಟಲ್ ಸಹ ಆರಂಭಿಸಿದ್ದು, ಮಾಹಿತಿ ಹಾಗೂ ಮನರಂಜನೆಯ ಲಾಭವನ್ನು ಪಡೆದುಕೊಳ್ಳಬಹುದು. 51111 ಸಂಖ್ಯೆಗೆ ಕರೆ ಮಾಡಿ(ಕರೆ ದರ ರು.1/ಪ್ರತಿಕರೆಗೆ) ನೆಚ್ಚಿನ ಹಲೋ ಟ್ಯೂನ್, ಸಂಭಾಷಣೆ, ಜನಪದ ಗೀತೆ, ಹಾಸ್ಯ ಹಾಗೂ ರಾಜ್ ಅವರ ವಿಶೇಷ ಗೀತೆಗಳನ್ನು ಆಲಿಸಬಹುದು.

( ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X