ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾರಾಯಣಸ್ವಾಮಿ ಬೆಂಬಲಿಗರಿಂದ ಆನೇಕಲ್ ಬಂದ್

By Staff
|
Google Oneindia Kannada News

ಅನೇಕಲ್, ಮೇ 31 : ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರ ವಹಿಸಿಕೊಂ‌ಡ ಬೆನ್ನಲ್ಲೇ ಸಚಿವ ಸ್ಥಾನ ಹಂಚಿಕೆ ಕುರಿತಂತೆ ಎದ್ದಿರುವ ಬಿನ್ನಮತ ಉಗ್ರ ಸ್ವರೂಪ ತಾಳಿದೆ. ಆನೇಕಲ್ ಶಾಸಕ ನಾರಾಯಣಸ್ವಾಮಿ ಅವರಿಗೆ ಸಚಿವ ಸ್ಥಾನ ನಿರಾಕರಿಸಿರುವುದನ್ನು ಖಂಡಿಸಿ ಶನಿವಾರ ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರು ಆನೇಕಲ್ ಬಂದ್ ಕರೆ ನೀಡಿ ವರಿಷ್ಠರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

ಸತತ ನಾಲ್ಕನೇ ಬಾರಿಗೆ ವಿಧಾನಸಭೆ ಪ್ರವೇಶಿಸಿರುವ ನಾರಾಯಸ್ವಾಮಿ ಹಿರಿಯ ಶಾಸಕರಾಗಿದ್ದು, ಸಚಿವ ಸಂಪುಟದಲ್ಲಿ ಸ್ಥಾನ ನೀಡಲೇಬೇಕೆಂದು ಪಟ್ಟುಹಿಡಿರುವ ಕಾರ್ಯಕರ್ತರ ಬಂದ್ ಕರೆ ನೀಡಿದ್ದಾರೆ. ಬಂದ್ ಹಿನ್ನೆಲೆಯಲ್ಲಿ ಕೆಲವಡೆ ಕಲ್ಲು ತೂರಾಟ, ದಾಂಧಲೆ ಆಗಿರುವ ಬಗ್ಗೆ ವರದಿಯಾಗಿದೆ.

ಸಚಿವ ಸಂಪುಟದಲ್ಲಿ ನಾರಾಯಸ್ವಾಮಿ ಅವರನ್ನು ಸೇರಿಸಿಕೊಳ್ಳುವವರೆಗೂ ಪ್ರತಿಭಟನೆಯನ್ನು ಹಿಂದೆಗೆದುಕೊಳ್ಳುವುದಿಲ್ಲ ಎಂದು ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಬೆಂಬಲಿಗರು ಬಸ್ಸಿನ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಆನೇಕಲ್ ಪಟ್ಟಣದಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ಉಂಟಾಯಿತು.

ಈ ಕುರಿತು ಪ್ರತಿಕ್ರಿಯಿಸಿರುವ ನಾರಾಯಸ್ವಾಮಿ, ನನಗೆ ತುಂಬ ನಿರಾಶೆಯಾಗಿದೆ. ಸತತ ನಾಲ್ಕು ಬಾರಿ ಶಾಸಕನಾದರೂ ಸಚಿವ ಸ್ಥಾನದಿಂದ ವಂಚಿತನಾಗಿದ್ದು ದುರದೃಷ್ಟಕರ ಎಂದು ತಮ್ಮ ಅಳಲನ್ನು ತೋಡಿಕೊಂಡರು. ಅನೇಕಲ್ ಕ್ಷೇತ್ರದ ಜನರಿಗೆ ತುಂಬಾ ನೋವಿನ ಸಂಗತಿಯಾಗಿದೆ. ಪಕ್ಷದ ವರಿಷ್ಠರು ಕ್ಷೇತ್ರದ ಜನರಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿದರು.

ಬೊಮ್ಮಸಂದ್ರ, ಬೊಮ್ಮನಹಳ್ಳಿ, ಚಂದಾಪುರ ಸೇರಿದಂತೆ ವಿವಿಧೆಡೆ ಕೆಲ ಕಾಲ ಸಾರಿಗೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಂದ್ ಹಿಂಗೆದುಕೊಳ್ಳುವಂತೆ ವರಿಷ್ಠರಿಂದ ಸಾಕಷ್ಟು ಒತ್ತಡ ಬರುತ್ತಿದ್ದು, ಸಚಿವ ಸ್ಥಾನ ಖಾತ್ರಿ ಆದ ಮೇಲೆ ಬಂದ್ ವಾಪಸ್ಸು ತಗೆದುಕೊಳ್ಳುಲಾಗುವುದು ಎಂದು ಬೆಂಬಲಿಗರು ಹೇಳಿದ್ದಾರೆ.

ಅಸಮಾಧಾನದ ಹೊಗೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವುದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತಲೆನೋವಾಗಿ ಪರಿಣಮಿಸಿದೆ. ನಾರಾಯಣಸ್ವಾಮಿ, ಜಗದೀಶ್ ಶೆಟ್ಟರ್, ಶಂಕರಲಿಂಗೇಗೌಡ ಮತ್ತು ಅಪ್ಪಚ್ಚು ರಂಜನ್ ಅವರ ಬೆಂಬಲಿಗರು ನಡೆಸುತ್ತಿರುವ ಪ್ರತಿಭಟನೆ ನೂತನ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ.

ಭಿನ್ನಮತ ನಿವಾರಣೆಗೆ ಯಡಿಯೂರಪ್ಪ ಇಂದು ಕೇಶವ ಕೃಪದಲ್ಲಿ ಸಂಘ ಪರಿವಾರದ ಮುಖಂಡರೊಂದಿಗೆ ಮಾತುಕತೆ ನಡೆಸಲು ಮುಂದಾಗಿದ್ದು, ಅತೃಪ್ತರೊಂದಿಗೆ ಮಾತುಕತೆ ನಡೆಸಿ ಮುಂದಿನ ಸಂಪುಟ ವಿಸ್ತರಣೆಯಲ್ಲಿ ಸ್ಥಾನ ನೀಡುವ ಕುರಿತು ಚರ್ಚೆ ನಡೆಸಲಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ
ಸರ್ಕಾರ ರಚನೆಯ ಮೊದಲೇ ಭುಗಿಲೆದ್ದ ಭಿನ್ನಮತ
25ನೇ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣ
ನಮ್ಮ ಮೇಲೆ ನಂಬಿಕೆಯಿಡಿ ಭಾವಿ ಸಿಎಂ ಯಡ್ಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X