ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂ. 26ಕ್ಕೆ ವಿಧಾನಪರಿಷತ್ತಿನ 5 ಸ್ಥಾನಕ್ಕೆ ಚುನಾವಣೆ

By Staff
|
Google Oneindia Kannada News

ಬೆಂಗಳೂರು, ಮೇ 29: ರಾಜ್ಯ ವಿಧಾನಪರಿಷತ್ತಿನ ನಾಲ್ವರು ಸದಸ್ಯರ ನಿವೃತ್ತಿಯಕಾರಣ ತೆರವಾಗಲಿರುವ ಸ್ಥಾನಗಳಿಗೆ ಕೇಂದ್ರ ಚುನಾವಣಾ ಆಯೋಗ ದ್ವೈವಾರ್ಷಿಕ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ್ದು, ಜೂ. 26 ರಂದು ಮತದಾನ ನಡೆಯಲಿದೆ.

ರಾಜ್ಯ ವಿಧಾನಸಭೆಯಲ್ಲಿ ಗದಗದಿಂದಸ್ಪರ್ಧಿಸಿ ಪರಾಭವಗೊಂಡಕಾಂಗ್ರೆಸ್ ಪಕ್ಷದಮುಖಂಡ ಎಚ್. ಕೆ. ಪಾಟೀಲ್, ಎಚ್. ಎಸ್. ಶಿವಶಂಕರ್(ಜಾತ್ಯತೀತ ಜನತಾದಳ) ಪದವೀಧರ ಕ್ಷೇತ್ರದಿಂದ ಮೇಲ್ಮನೆಗೆ ಆಯ್ಕೆಯಾಗಿದ್ದವರು. ಶಶಿಕ್.ಜಿ. ನಮೋಶಿ(ಬಿಜೆಪಿ) ಮತ್ತು ಪುಟ್ಟಣ್ಣ(ಜಾತ್ಯಾತೀತ ಜನತಾದಳ) ಶಿಕ್ಷಕರ ಕ್ಷೇತ್ರದಿಂದ ಚುನಾಯಿತರಾಗಿದ್ದರು. ಈ ನಾಲ್ವರೂ ಸದಸ್ಯರ ಅವಧಿ ಜೂ. 30 ರಂದು ಮುಗಿಯಲಿದೆ.

ಇದರ ಜತೆಗೆ ಬ್ಲೇಸಿಯಸ್ ಡಿಸೋಜ(ಕಾಂಗ್ರೆಸ್) ಅವರ ನಿಧನದಿಂದ ತೆರವಾದ ಮತ್ತೊಂದು ಸ್ಥಾನಕ್ಕೂ ಜೂ.26 ರಂದು ಮತದಾನ ನಡೆಯಲಿದೆ. ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆಗೆ ಆಯ್ಕೆಯಾಗಿದ್ದ ಬ್ಲೇಸಿಯಸ್ ಡಿಸೋಜ ಅವಧಿ 2010 ರತನಕ ಇತ್ತು.

ಜೂನ್ 2 : ಚುನಾವಣಾ ಅಧಿಸೂಚನೆ ಹೊರಬೀಳಲಿದೆ.
ಜೂನ್ 9 : ನಾಮಪತ್ರ ಸಲ್ಲಿಕೆಗೆ ಕಡೆಯ ದಿನ.
ಜೂನ್ 10 ರಂದು ನಾಮಪತ್ರ ಪರಿಶೀಲನೆ.
ಜೂನ್ 12: ನಾಮಪತ್ರ ವಾಪಸು ಪಡೆಯಲು ಕಡೆಯ ದಿನ .
ಜೂನ್ 28: ಮತಎಣಿಕೆ , ಫಲಿತಾಂಶ.

ಇದಲ್ಲದೆ ಪ್ರೊ. ಬಿ.ಕೆ. ಚಂದ್ರಶೇಖರ್, ಸಲೀಮ್ ಅಹ್ಮದ್, ಅಶೋಕ್ ಕಟ್ಟೀಮನಿ, ರತ್ನಾವೀರಶೆಟ್ಟಿ ಕುಸನೂರ, ಡಿ.ಮಾದೇಗೌಡ(ಎಲ್ಲರೂ ಕಾಂಗ್ರೆಸ್), ಡಾ.ವಿ.ಎಸ್. ಆಚಾರ್ಯ(ಬಿಜೆಪಿ) ಹಾಗೂ ಕೆ. ಸಚ್ಚಿದಾನಂದ(ಜೆಡಿಎಸ್) ಜೂನ್ 30 ರಂದು ನಿವೃತ್ತರಾಗಲಿದ್ದಾರೆ. ಈ ಎಲ್ಲ ಏಳು ಸ್ಥಾನಗಳಿಗೆ ವಿಧಾನಸಭೆಯಿಂದ ಚುನಾವಣೆ ನಡೆಯಬೇಕಾಗಿದೆ. ಈ ಸ್ಥಾನಗಳಿಗೆ ಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಇನ್ನೂ ಪ್ರಕಟಿಸಬೇಕಿದೆ.

ವಿಧಾನ ಪರಿಷತ್ತಿನ ಇತ್ತೀಚಿನ ಬಲಾಬಲ: ಕಾಂಗ್ರೆಸ್ -32, ಜಾತ್ಯಾತೀತ ಜನತಾದಳ-14, ಬಿಜೆಪಿ-14, ಸಂಯುಕ್ತ ಜನತಾದಳ-2, ಹಾಗೂ ಪಕ್ಷೇತರರು- 3.ಬಿಜೆಪಿ ಸರ್ಕಾರ ರಚನೆಯಾದ ಮೇಲೆ ಐದು ಸ್ಥಾನಗಳಿಗೆ ನಾಮಕರಣ ಮಾಡಬಹುದಾಗಿದೆ. ಜತೆಗೆ ನಾಲ್ಕು ಜನರನ್ನು ವಿಧಾನಸಭೆಯಿಂದ ಮೇಲ್ಮನೆಗೆ ಆರಿಸಿಕಳಿಸಬಹುದಾಗಿದೆ.ಬಿಜೆಪಿಯ ಮೇಲ್ಮನೆ ಹಾಲಿ ಸದಸ್ಯರಾಗಿರುವ ಶೋಭಾ ಕರಂದ್ಲಾಜೆ ಮತ್ತು ಅರವಿಂದ ಲಿಂಬಾವಳಿ ಅವರು ವಿಧಾನಸಭೆಗೆ ಸ್ಪರ್ಧಿಸಿ ಗೆದ್ದಿರುವುದರಿಂದ, ಮೇಲ್ಮನೆ ಅಥವಾ ಕೆಳಮನೆ ಎರಡಲ್ಲಿ ಒಂದನ್ನು ಆರಿಸಿಕೊಂಡು ಮತ್ತೊಂದಕ್ಕೆ ರಾಜೀನಾಮೆ ನೀಡಲು 15 ದಿನಗಳ ಕಾಲಾವಕಾಶವಿದೆ. ಒಟ್ಟಾರೆ ಬಿಜೆಪಿ ಮೇಲ್ಮನೆಯಲ್ಲಿ ತನ್ನ ಸಂಖ್ಯಾಬಲವನ್ನು 14 ರಿಂದ 23 ಕ್ಕೆ ಹೆಚ್ಚಿಸಿಕೊಳ್ಳುವ ಎಲ್ಲಾ ಅವಕಾಶಗಳಿವೆ.

(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X