ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನಸೌಧದ ಸುತ್ತ ಹೈಟೆಕ್ ಪೊಲೀಸ್ ಸರ್ಪಗಾವಲು

By Staff
|
Google Oneindia Kannada News

ಬೆಂಗಳೂರು, ಮೇ26 : ನೂತನ ಸರ್ಕಾರ ಅಧಿಕಾರ ಸ್ವೀಕಾರಕ್ಕೆ ಶಾಸಕಾಂಗ ಸಭೆ ನಡೆಸಿ, ರಾಜ್ಯಪಾಲರಿಗೆ ಇಂದು ಸಂಜೆ ವೇಳೆಗೆ ಬಿಜೆಪಿ ಮನವಿ ಸಲ್ಲಿಸಲಿದೆ. ಇತ್ತ ವಿಧಾನಸೌಧದ ಸುತ್ತಮುತ್ತ ರಕ್ಷಣೆ ಹಾಗೂ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಿದ್ಧತೆ ನಡೆದಿದೆ.

ಕಾನೂನು -ಸುವ್ಯವಸ್ಥೆ ಕಾಪಾಡುವ ಬಗ್ಗೆ ಪೊಲೀಸ್ ವರಿಷ್ಠರು ವಿಶೇಷ ಸಭೆ ನಡೆಸಿದ್ದು, ವಿಧಾನಸೌಧದ ಎಲ್ಲ ಮೂಲೆಗಳಲ್ಲಿ 75ಕ್ಕೂ ಹೆಚ್ಚು ಸಿಸಿಟಿವಿ ಅಳವಡಿಸಲು ನಗರ ಪೊಲೀಸ್ ಇಲಾಖೆ ನಿರ್ಧರಿಸಿದ್ದಾರೆ. ವಿಧಾನಸೌಧದ ಎಲ್ಲ ದ್ವಾರಗಳಲ್ಲಿ ಪೊಲೀಸ್ ಸರ್ಪಗಾವಲು ವಿಧಿಸಲಾಗುವುದು. ಈಗಾಗಲೇ 380 ಸಶಸ್ತ್ರ ಸಿಬ್ಬಂದಿಯನ್ನು ವಿಧಾನಸೌಧದ ಭದ್ರತೆಗೆ ನಿಯೋಜಿಸಲಾಗಿದೆ.

ಶಾಸಕರ ಭವನ, ವಿಕಾಸ ಸೌಧ ಹಾಗೂ ಹೈಕೋರ್ಟ್ ಸೇರಿದಂತೆ ಎಲ್ಲೆಡೆ ಸಿಸಿಟಿವಿಗಳನ್ನು ಅಳವಡಿಸಲಾಗುವುದು. ಇದರಿಂದ ಅಭಿಮಾನಿಗಳು ಎಲ್ಲೆಂದರಲ್ಲಿ ನುಗ್ಗುವುದನ್ನು ತಪ್ಪಿಸಲಾಗುತ್ತದೆ. ಪರವೂರಿನಿಂದ ಸಮಾರಂಭಕ್ಕೆ ಆಗಮಿಸುವ ಕಾರ್ಯಕರ್ತರು, ಅಭಿಮಾನಿಗಳ ವಾಹನ ನಿಲುಗಡೆ ಹಾಗೂ ಕಾರ್ಯಕ್ರಮ ವೀಕ್ಷಣೆಗೆ ಅಗತ್ಯ ಅನುಕೂಲಗಳನ್ನು ಮಾಡಲಾಗಿದೆ ಎಂದು ಡಿಸಿಪಿ ಲಕ್ಷ್ಮಣ್ ಸಿಂಗ್ ಹೇಳಿದ್ದಾರೆ.

(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X