ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನಸಭೆ ಚುನಾವಣೆ ಫಲಿತಾಂಶದ ನೇರಪ್ರಸಾರ

By Staff
|
Google Oneindia Kannada News

Vidhanasoudhaಬೆಂಗಳೂರು, ಮೇ 23 : ಹದಿಮೂರನೇ ಕರ್ನಾಟಕ ವಿಧಾನಸಭೆಗೆ ಜನಪ್ರತಿನಿಧಿಗಳನ್ನು ಆರಿಸಲು ಮೇ 10, 16 ಮತ್ತು 22 ರಂದು ನಡೆದ ಮೂರು ಹಂತದ ಮತದಾನದ ಫಲಿತಾಂಶ ಬರುವ ಭಾನುವಾರ ಪ್ರಕಟವಾಗಲಿದೆ. ಕರ್ನಾಟಕದ ರಾಜಕೀಯ ಪಕ್ಷಗಳು, ರಾಜಕಾರಣಿಗಳು ಹಾಗೂ ವ್ಯವಹಾರಸ್ಥರಿಗೆ ಪ್ರತಿಷ್ಠೆಯ ಸಂಕೇತವಾಗಿರುವ ಈ ಚುನಾವಣೆಯ ಫಲಿತಾಂಶಗಳ ನೇರಪ್ರಸಾರವನ್ನು ದಟ್ಸ್‌ಕನ್ನಡ ಡಾಟ್ ಕಾಂ ಮಾಡುತ್ತದೆ.

ಭಾರತೀಯ ಕಾಲಮಾನ ಮೇ 25ರ ಭಾನುವಾರ ಬೆಳಗ್ಗೆ 8 ಗಂಟೆಗೆ ಆರಂಭವಾಗುವ ನೇರ ಪ್ರಸಾರ ಮಧ್ಯಾನ್ಹ 3 ಗಂಟೆತನಕ ಸಾಗುತ್ತದೆ. ಮತ ಎಣಿಕೆ ಸಾಗಿದಂತೆ ಪಕ್ಷಗಳ ಬಲಾಬಲ, ಅಭ್ಯರ್ಥಿಗಳ ಮುನ್ನಡೆ, ಹಿನ್ನಡೆ, ಗೆಲವು ಹಾಗೂ ಸೋಲಿನ ವಾರ್ತೆಗಳ ಮಿಂಚು ನಮ್ಮ ಅಂತರ್ಜಾಲ ತಾಣದಲ್ಲಿ ಹೊಳೆಯುತ್ತದೆ.

ರಾಜ್ಯದ ನಾನಾ ಭಾಗಗಳ 48 ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ಭಾನುವಾರ ಬೆಳಗ್ಗೇನೇ ಶುರುವಾಗುತ್ತದೆ. ವಿದ್ಯುನ್ಮಾನ ಮತ ಎಣಿಕೆ ಆಗಿರುವುದರಿಂದ ಫಲಿತಾಂಶಗಳು ಅತ್ಯಂತ ವೇಗವಾಗಿ ದೊರಕುತ್ತವೆ. ಅಂದು ಬೆಳಗ್ಗೆ ಸುಮಾರು ಹತ್ತು ಗಂಟೆ ಹೊತ್ತಿಗೆ ಕರ್ನಾಟಕ ಮತದಾರರ ಒಲವು ನಿಲುವುಗಳ ವಿಹಂಗಮ ಚಿತ್ರ ದೊರಕುವ ಸಾಧ್ಯತೆಗಳಿವೆ. ಒಟ್ಟಾರೆ ಫಲಿತಾಂಶವಲ್ಲದೆ ರಾಜ್ಯದ 224 ಕ್ಷೇತ್ರಾವಾರು ಫಲಿತಾಂಶ ಪಟ್ಟಿ ನಿಮಗೆ ದೊರಕುತ್ತದೆ.

ರಾಜ್ಯದಲ್ಲಿ ಆಗಿಹೋದ ಸಮ್ಮಿಶ್ರ ಸರಕಾರಗಳ ಪ್ರಯೋಗ, ಯಶಸ್ಸು ಮತ್ತು ವೈಫಲ್ಯಗಳ ಬಗೆಗೆ ಮತದಾರ ಬರೆದ ಉಯಿಲನ್ನು ಓದಲು ನಿಮಗೆ ಸ್ವಾಗತ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಲ್ಲದೆ ಆ ಪಕ್ಷಗಳ ಬಂಡಾಯ ಅಭ್ಯರ್ಥಿಗಳು ಹಾಗೂ ಕರ್ನಾಟಕದಲ್ಲಿ ತಲೆ ಎತ್ತುತ್ತಿರುವ ಬಹುಜನ ಸಮಾಜವಾದಿ ಪಕ್ಷ, ಪಕ್ಷೇತರರ ಸಾಧನೆಗಳು ಬಟಾಬಯಲಾಗುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X