ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತಿಮ ಹಂತದ ಹಣಾಹಣಿ ಶಾಂತಿಯುತ ಮತದಾನ

By Staff
|
Google Oneindia Kannada News

ಬೆಳಗಾವಿ, ಮೇ 22 : ಅಂತಿಮ ಹಂತದ ಮತದಾನ ಪ್ರಾರಂಭಗೊಂಡಿದ್ದು, ಎಲ್ಲೆಡೆ ಶಾಂತಿಯುತ ಮತದಾನ ನಡೆದ ವರದಿ ಬಂದಿದೆ. 8 ಜಿಲ್ಲೆಗಳ 69 ಕ್ಷೇತ್ರಗಳಲ್ಲಿ ಮೊದಲ 3 ಗಂಟೆಗಳ ಒಟ್ಟಾರೆ ಮತದಾನ ಶೇ. 9.28 ಆಗಿದೆ.

ಒಟ್ಟು 12,381 ಮತಗಟ್ಟೆಗಳಲ್ಲಿ ಬೆಳಗ್ಗೆ 7 ಗಂಟೆಗೆ ಪ್ರಾರಂಭವಾದ ಮತದಾನ ಪ್ರಕ್ರಿಯೆ ಸಂಜೆ 5 ಕ್ಕೆ ಮುಕ್ತಾಯವಾಗಲಿದೆ. ಒಟ್ಟು 699 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಇಂದು ಮುಂಚಿತವಾಗಿ ಮತದಾನ ಮಾಡಿದ ರಾಜಕೀಯ ನಾಯಕರಲ್ಲಿ ಮಲ್ಲಿಕಾರ್ಜುನ ಖರ್ಗೆ, ಧರಂ ಸಿಂಗ್, ಎಚ್. ಕೆ. ಪಾಟೀಲ್, ಜಗದೀಶ್ ಶೆಟ್ಟರ್ , ಸುರೇಶ್ ಅಂಗಡಿ , ವಿ .ಎಸ್ .ಕೌಜಲಗಿ , ಪ್ರಹ್ಲಾದ ಜೋಶಿ ಪ್ರಮುಖರು. ಇದಲ್ಲದೆ ಧಾರವಾಡದಲ್ಲಿ ಹಿರಿಯ ಕವಿ ಚನ್ನವೀರ ಕಣವಿ ಹಾಗೂ ಹುಬ್ಬಳ್ಳಿಯಲ್ಲಿ ನಾಡೋಜ ಪಾಟೀಲಪುಟ್ಟಪ್ಪ ಮತದಾನ ಮಾಡಿದರು.

ಅಂತಿಮ ಹಂತದ ಮತದಾನದ ಮುಖ್ಯಾಂಶಗಳು:
*
ಚಿಂಚೋಳಿ ಜರುಗಹಳ್ಳಿಯಲ್ಲಿ ಮತದಾನ ಬಹಿಷ್ಕಾರ
*ಬೈಲಹೊಂಗಲದಲ್ಲಿ ಸ್ಥಗಿತಗೊಂಡಿದ್ದ ಮತದಾನ ಮತ್ತೆ ಶುರು.
*ಒಟ್ಟು 56, 000 ಪೊಲೀಸ್ , ಕೇಂದ್ರ ಮೀಸಲು ಪಡೆ ಸಿಬ್ಬಂದಿಗಳು ಸುರಕ್ಷತ ಮತದಾನಕ್ಕೆ ಕಾರಣರಾಗಿದ್ದಾರೆ.
*4,358 ಮತಗಟ್ಟೆಗಳನ್ನು ಸೂಕ್ಷ್ಮ ಎಂದು ಗುರುತಿಸಲಾಗಿದ್ದು, ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ.

ಶೇಕಡಾವಾರು ಮತದಾನ ಹೀಗಿದೆ:
ಬೆಳಗಾವಿ ಶೇ.10
ಗುಲ್ಬರ್ಗಾ ಶೇ.11
ಬೀದರ್ ಶೇ. 9
ಬಾಗಲಕೋಟೇ ಶೇ. 5
ಧಾರವಾಡದಲ್ಲಿ ಶೇ .7
ಹಾವೇರಿ ಶೇ. 8
ಬಿಜಾಪುರ ಶೇ. 5

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X