ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಚ್ಚಾ ತೈಲ ಬೆಲೆ ದಾಖಲೆ ಏರಿಕೆ, ದ್ವಂದ್ವದಲ್ಲಿ ಕೇಂದ್ರ

By Staff
|
Google Oneindia Kannada News

Petrol price hike imminenet?ನವದೆಹಲಿ, ಮೇ 22 : ಜಾಗತಿಕವಾಗಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 134 ಡಾರಲ್‌ನಷ್ಟು ಆಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದ ತೈಲ ಕಂಪನಿಗಳ ನಷ್ಟವನ್ನು ತುಂಬಲು ತೈಲಬೆಲೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಗಂಭೀರವಾಗಿ ಯೋಚಿಸುತ್ತಿದೆ.

ಕಚ್ಚಾ ತೈಲದ ಬೆಲೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿರುವುದರಿಂದ ಭಾರತದಲ್ಲಿ ತೈಲ ಬೆಲೆಯನ್ನು ಹೆಚ್ಚಿಸದೇ ಗತ್ಯಂತರವೇ ಇಲ್ಲ ಎನ್ನುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ, ಚುನಾವಣೆ ಹೊಸ್ತಿಲಲ್ಲಿ ನಿಂತಿರುವುದರಿಂದ ಬೆಲೆ ಏರಿಸಲು ಕೇಂದ್ರ ಮೀನಾಮೇಷ ಎಣಿಸುತ್ತಿದೆ.

ಸದ್ಯಕ್ಕೆ ತೈಲ ಬೆಲೆಯನ್ನು ಏರಿಸುವುದಿಲ್ಲ ಮತ್ತು ಏರಿಸುವ ಸಾಧ್ಯತೆಯನ್ನು ತಳ್ಳಿಹಾಕುವುದೂ ಇಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಮುರಳಿ ದೇವ್ರಾ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿಕೆ ನೀಡಿದ್ದಾರೆ.

ಸಾರ್ವಜನಿಕ ವಲಯದ ತೈಲ ಕಂಪನಿಗಳನ್ನು ಕಾಪಾಡಲು ಬೇರೆ ದಾರಿಗಳನ್ನು ಹುಡುಕುತ್ತಿದ್ದೇವೆ. ಕೆಲ ಕ್ರಮಗಳನ್ನು ತೆಗೆದುಕೊಳ್ಳಲೇಬೇಕು. ಆದರೆ, ಸಾರ್ವಜನಿಕರು ಇದರಿಂದಾಗಿ ಗಾಬರಿಯಾಗುವ ಅಗತ್ಯವಿಲ್ಲ ಎಂದು ದೇವ್ರಾ ಹೇಳಿದ್ದಾರೆ.

ಒಂದು ಬದಿಯಲ್ಲಿ ಜಾಗತಿಕವಾಗಿ ಏರುತ್ತಿರುವ ಕಚ್ಚಾ ತೈಲಬೆಲೆ ಮತ್ತೊಂದೆಡೆ ತೈಲ ಬೆಲೆಯನ್ನು ಏರಿಸಲು ಹಿಂದೆಮುಂದೆ ನೋಡುತ್ತಿರುವ ಸರ್ಕಾರದ ನೀತಿಯಿಂದ ಕಂಗೆಟ್ಟಿರುವ ಪಿಎಸ್‌ಯೂಗಳು ಡೀಲರುಗಳಿಗೆ ಪೆಟ್ರೋಲ್ ಮತ್ತು ಡೀಸೆಲನ್ನು ವಿತರಿಸಲು ಹಿಂದೇಟು ಹಾಕುತ್ತಿವೆ. ಇದರಿಂದಾಗಿ ಬಿಪಿಸಿಎಲ್, ಐಓಸಿ, ಎಚ್‌ಪಿಸಿಎಲ್ ಕಂಪನಿಗಳಿಂದ ಡೀಲರುಗಳಿಗೆ ಕಡಿಮೆ ಪ್ರಮಾಣದಲ್ಲಿ ತೈಲ ಸರಬರಾಜಾಗುತ್ತಿದೆ.

ಈ ಕಂಪನಿಗಳು ದೇಶದ ಪ್ರಮುಖ ನಗರಗಳಲ್ಲಿ ಬ್ರಾಂಡೆಡ್ ಪೆಟ್ರೋಲನ್ನು ಮಾತ್ರ ಸರಬರಾಜು ಮಾಡುವುದಾಗಿ ಬೆದರಿಕೆಯೊಡ್ಡಿರುವುದರಿಂದ ಮತ್ತು ಪಿಎಸ್ಯೂಗಳ ಒತ್ತಡಕ್ಕೆ ಮಣಿದು ಸರ್ಕಾರ ಯಾವುದೇ ಕ್ಷಣದಲ್ಲಿ ಏರಿಸುವ ಸಾಧ್ಯತೆಯಿರುವುದರಿಂದ ಜನಸಾಮಾನ್ಯರು ಪೆಟ್ರೋಲ್ ಮತ್ತು ಡೀಸೆಲಿಗೆ ಜಾಸ್ತಿ ಹಣ ಕಕ್ಕಲು ಸಿದ್ಧರಾಗಬೇಕಾದ ಅನಿವಾರ್ಯತೆ ಬಂದೊದಗಿದೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X