ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಗರದ ಅಪಾ‌ರ್ಟ್‌ಮೆಂಟ್‌ಗಳ ಬೆಲೆ ಹೆಚ್ಚಳ

By Staff
|
Google Oneindia Kannada News

ಬೆಂಗಳೂರು, ಮೇ 22 : ನಗರದಲ್ಲಿ ಅಪಾ‌ರ್ಟ್‌ಮೆಂಟ್‌ಗಳ ದರ ಇನ್ನಷ್ಟು ಏರಲಿದೆ ಎಂದು ಅಖಿಲ ಭಾರತ ರಿಯಲ್ ಎಸ್ಟೇಟ್ ಡೆವಲಪರ್ಸ್ ಒಕ್ಕೂಟದ ಕರ್ನಾಟಕ ಘಟಕವು ಪ್ರಕಟಣೆ ನೀಡಿದೆ.

ಕಟ್ಟಡ ನಿರ್ಮಾಣ ಸಾಮಾಗ್ರಿ ಸೇರಿದಂತೆ ಅಗತ್ಯ ಸರಕುಗಳ ಬೆಲೆ ಹೆಚ್ಚಳದಿಂದಾಗಿ ಈ ಕ್ರಮ ಕೈಗೊಳ್ಳುವುದು ಅನಿವಾರ್ಯ. ಸ್ಟೀಲ್, ಸಿಮೆಂಟ್ , ಕೂಲಿ, ಬ್ಯಾಂಕ್ ಗಳ ಬಡ್ಡಿ ದರದಲ್ಲಿ ತೀವ್ರ ಹೆಚ್ಚಳವಾಗಿದ್ದು, ಬೃಹತ್ ಕಟ್ಟಡಗಳ ನಿರ್ಮಾಣ ಕಷ್ಟಕರವಾಗಿ ಪರಿಣಮಿಸಿದೆ. ಕಳೆದ 16 ತಿಂಗಳಿಂದ ದರ ಪರಿಷ್ಕರಣೆಯಾಗಿರಲಿಲ್ಲ ಎಂದು ರಾಜ್ಯ ರಿಯಲ್ ಎಸ್ಟೇಟ್ ಡೆವಲಪರ್‌‌‌ಗಳ ಸಂಘದ ಅಧ್ಯಕ್ಷ ಬಾಲಕೃಷ್ಣ ಹೆಗಡೆ ಸುದ್ದಿಗಾರರಿಗೆ ತಿಳಿಸಿದರು.

ನೂತನ ದರವು ಜೂ.10 ರಿಂದ ಅನ್ವಯವಾಗಲಿದೆ. ಪ್ರತಿ ಚದರಡಿಗೆ ರು.75 ರಿಂದ 500 ರು. ವರೆಗೆ ಹೆಚ್ಚಳವಾಗಲಿದ್ದು, ವಸತಿ ಸಮುಚ್ಚಯಗಳ ಬೆಲೆಯಲ್ಲಿ ಶೇ. 3 ರಿಂದ 8 ರಷ್ಟು ಏರಿಕೆಯಾಗಲಿದೆ. ಆದರೆ ಈಗಾಗಲೇ ಮುಂಗಡ ಹಣ ನೀಡಿ, ಕಾಯ್ದಿರಿಸಿರುವ ಅಪಾ‌ರ್ಟ್‌ಮೆಂಟ್‌ಗಳಿಗೆ ಹೆಚ್ಚಳ ಅನ್ವಯವಾಗದು ಎಂದು ಬಾಲಕೃಷ್ಣ ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X