ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಕಾರಣಿಗಳಿಗೆ ಸಿಂಹಸ್ವಪ್ನ ರೇಮಂಡ್ ಬಳ್ಳಾರಿಗೆ

By Staff
|
Google Oneindia Kannada News

ಬಳ್ಳಾರಿ. ಮೇ 15:ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ರಾಜಕಾರಣಿಗಳಿಗೆ ದುಃಸ್ವಪ್ನವಾಗಿ ಕಾಡಿದ್ದ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕೆಂಗಣ್ಣಿಗೆ ಗುರಿಯಾಗಿದ್ದ ಸಮರ್ಥ ಅಧಿಕಾರಿ ರೇಮಂಡ್ ಪೀಟರ್ ಬಳ್ಳಾರಿ ಚುನಾವಣೆ ವಿಶೇಷ ವೀಕ್ಷಕರಾಗಿ ಅಧಿಕಾರ ಬುಧವಾರ ಸ್ವೀಕರಿಸಿದ್ದಾರೆ.

ಬುಧವಾರ ಮಧ್ಯರಾತ್ರಿಯಿಂದಲೇ ಕಾರ್ಯತತ್ಪರರಾದ ರೇಮಂಡ್ ಅವರ ತಂಡ ಬಳ್ಳಾರಿಯಲ್ಲಿ ಚುನಾವಣಾ ಅಕ್ತ್ರಮ ಹಣ ಹಂಚುತ್ತಿದ್ದ 8 ಮಂದಿಯನ್ನು ಬಂಧಿಸಿ 2 ಬೈಕ್ , 2 ಪ್ರಚಾರ ವಾಹನ ವಶಪಡಿಸಿಕೊಂಡಿದ್ದಾರೆ. ಅಕ್ರಮ ಸಾಮಾಗ್ರಿಗಳು ಯಾವ ಪಕ್ಷಕ್ಕೆ ಸಂಬಂಧಿಸಿದವು ಎಂಬುದನ್ನು ಆಯೋಗ ಬಹಿರಂಗಪಡಿಸಿಲ್ಲ.

ಬಳ್ಳಾರಿ ,ಧಾರವಾಡ ಜಿಲ್ಲೆಯ ಕಲಘಟಗಿ ಕ್ಷೇತ್ರ ರೇಮಂಡ್ ಅವರ ಹದ್ದಿನ ಕಣ್ಣಿಗೆ ಒಳಪಡಲಿದೆ. ಬಳ್ಳಾರಿಯ ಗಣಿಧಣಿಗಳು, ಕಲಘಟಗಿಯ ಗಣಿದೊರೆ ಸಂತೋಷ್ ಲಾಡ್ ಅವರ ಮೇಲೆ ಹೆಚ್ಚಿನ ದೂರುಗಳ ಬಂದ ಹಿನ್ನೆಲೆಯಲ್ಲಿ ಪೀಟರ್ ಅವರನ್ನು ನೇಮಿಸಲಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಎನ್. ಗೋಪಾಲಸ್ವಾಮಿ ಹೇಳಿದ್ದಾರೆ.

ಯಾರು ಈ ರೇಮಂಡ್ ಪೀಟರ್?
1984 ರ ತಂಡದ ಐಎಎಸ್ ಅಧಿಕಾರಿಯಾದ ರೇಮಂಡ್ ಪೀಟರ್ ಮೂಲತಃ ಹೈದರಾಬಾದಿನವರು.ಅಂಧ್ರಪ್ರದೇಶದ ಅತ್ಯಂತ ಹಿಂದುಳಿದ ಪ್ರದೇಶವಾದ ಮೆಹಬೂಬ್ ನಗರದಲ್ಲಿ ಜಿಲ್ಲಾಧಿಕಾರಿಯಾಗಿ ಉತ್ತಮ ಕಾರ್ಯ ನಿರ್ವಹಿಸಿದವರು. ಜಲ ಸಂರಕ್ಷಣೆ ಕುರಿತು ಯುಎನ್ ಓ ಸಲಹೆಗಾರರಾಗಿಯೂ ಕೆಲಸ ಮಾಡಿದ್ದಾರೆ. ಕೆಲಕಾಲ ವಿಶ್ವಬ್ಯಾಂಕಿನ ಪ್ರತಿನಿಧಿಯಾಗಿ ವಾಷಿಂಗ್ಟನ್ ನಲ್ಲಿ ಕೆಲಸ ಮಾಡಿದ್ದಾರೆ.

ಚುನಾವಣಾಧಿಕಾರಿಯಾಗಿ ಮೈಸೂರಿನ ಚಾಮುಂಡೇಶ್ವರಿ ಉಪ ಚುನಾವಣೆ 2005 ರಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಂಡು ಚುನಾವಣೆಗೆ 48 ಗಂಟೆಗಳ ಮುಂಚಿತವಾಗಿ ದೇವೇಗೌಡ ಸೇರಿದಂತೆ ಪ್ರಮುಖ ನಾಯಕರನ್ನು ಮೈಸೂರಿನಿಂದ ಹೊರಹಾಕಿ ಹಲವಾರು ರಾಜಕೀಯ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಪೀಟರ್ ಕಾಂಗ್ರೆಸ್ ಏಜೆಂಟ್ ಎಂದು ಎಚ್ .ಡಿ .ದೇವೇಗೌಡರು ಮಾಧ್ಯಮಗಳ ಮುಂದೆ ಗುಡುಗಿದ್ದರು.ಬಿಹಾರ ಹಾಗೂ ಉತ್ತರಪ್ರದೇಶಗಳಲ್ಲಿ ಮುಕ್ತ ಹಾಗೂ ನ್ಯಾಯಯುತವಾದ ಚುನಾವಣೆ ನಡೆಸಿದ ಕೀರ್ತಿ ರೇಮಂಡ್ ಅವರಿಗೆ ಸಲ್ಲುತ್ತದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X